ವಾಹನ ಬಿಡುಗಡೆಗೆ ಲಂಚ.
ತುಮಕೂರು – ವಾಹನ ಬಿಡುಗಡೆಗೆ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಟ್ಯಾಪ್ಲೆ ಬಿದ್ದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಚೇತನ್.
ಠಾಣೆಯ ವಶದಲ್ಲಿ ಇದ್ದ ವಾಹನ ಒಂದನ್ನು ಬಿಡುಗಡೆಗಾಗಿ ಪೊಲೀಸ್ ಸಬ್ ಇನ್ಸೆಕ್ಟರ್ ಚೇತನ್ ರವರು ಬೆಂಗಳೂರು ಮೂಲದ ವಕೀಲರೊಬ್ಬರಿಗೆ 40,000 ಹಣಕ್ಕೆ ಬೇಡಿಕೆ ಇಟ್ಟಿದ್ದರು ಹಾಗಾಗಿ ವಕೀಲರು ಲೋಕಾಯುಕ್ತ ಪೊಲೀಸರ ಮರೆ ಹೋದ ಕಾರಣ ಪೊಲೀಸ್ ಸಬ್ ಇನ್ಸೆಕ್ಟರ್ ರವರು ಲೋಕಾಯುಕ್ತ ಟ್ರ್ಯಾಪ್ ಬಿದ್ದಿದ್ದಾರೆ.
ಕಳೆದ ರಾತ್ರಿ 11:30 ಸಂದರ್ಭದಲ್ಲಿ ತುಮಕೂರಿನ ಕ್ಯಾತ್ಸಂದ್ರ ಬಳಿಯ ನಮಸ್ತೆ ತುಮಕೂರು ಹೋಟೆಲ್ ಬಳಿ ರೂ. 40,000 ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಇದೇ ಸಂದರ್ಭದಲ್ಲಿ ಪಿಎಸ್‌ಐ ಚೇತನ್ ಹಾಗೂ ಹೋಟೆಲ್ನ ಸಿಬ್ಬಂದಿ ಒಬ್ಬರು ಲೋಕಾಯುಕ್ತ ಅಧಿಕಾರಿಗಳ ದಾಳಿಯಲ್ಲಿ ರೆಡ್ ಹ್ಯಾಂಡಾಗಿ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ತುಮಕೂರು ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು.
For More Updates Join our WhatsApp Group :




