Tumkur | ವಿಐಪಿಗಳು ಸಾಗುವ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್ !

ನಗರದ ಪ್ರಶಾಂತ ಚಿತ್ರಮಂದಿರದ ಪಕ್ಕದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಹಾಗೂ ಗುಬ್ಬಿವೀರಣ್ಣ ರಂಗಮ0ದಿರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಗುಂಡಿ- ಗುದರದಿಂದ ಕೂಡಿದ್ದು ವಾಹನ ಸವಾರರು, ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.

ನಗರದ ಅಶೋಕ ರಸ್ತೆಯಿಂದ ಖಾಸಗಿ ಬಸ್ ನಿಲ್ದಾಣದ ಪಕ್ಕಕ್ಕೆ ತಿರುವು ಪಡೆದರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಸಂಪರ್ಕ ಮುಖ್ಯ ರಸ್ತೆ ಸಿಗಲಿದ್ದು, ಈ ಮುಖ್ಯ ರಸ್ತೆ ಪ್ರಾರಂಭದಿ0ದ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ಮರ‍್ನಾಲ್ಕು ಕಡೆ ದೊಡ್ಡ ಗುಂಡಿ, ಗುದರಗಳಿಂದ ಕೂಡಿದ್ದು, ಬೆಂಗಳೂರು ಸಿರಾ ಕಡೆಗೆ ತೆರಳುವ ಹಲವು ಬಸ್‌ಗಳು ತಿರುವು ಪಡೆಯುವ ರಸ್ತೆಯಲ್ಲೆ ಕಾಂಕ್ರೀಟ್ ರಸ್ತೆಗೆ ಅಳವಡಿಸಿರುವ ಕಂಬಿಗಳು ಕಾಣುವಂತೆ ರಸ್ತೆ ಅದ್ವಾನವಾಗಿದೆ. ಗುಜರಿ ಸಂಪರ್ಕಿಸುವ ಕಡೆಯೂ ಗುಂಡಿ ಬಿದ್ದಿದ್ದು, ಪ್ರಶಾಂತ ಚಿತ್ರ ಮಂದಿರದ ಕಾಂಪೌ0ಡ್ ಕೊನೆಗೊಳ್ಳುವ ಬಳಿಯ ರಸ್ತೆಯಲ್ಲೂ ರಸ್ತೆ ೩ ಅಡಿ ವಿಸ್ತಾರಕ್ಕೆ ಬಾಯ್ಬಿಟ್ಟು ಅಪಘಾತಕ್ಕೆ ಆಹ್ವಾನವೀಯುವಂತಿದೆ.

ಯುವಕ

ಈ ಗುಂಡಿಗಳ ಅವಾಂತರದಿ0ದ ಬಸ್ ನಿಲ್ದಾಣಕ್ಕೆ ಬರುವ ಸಾವಿರಾರು ಪ್ರಯಾಣಿಕರು, ರಂಗಮ0ದಿರಕ್ಕೆ ವಿವಿಧ ಕಾರ್ಯಕ್ರಮಗಳಿಗೆ ಬರುವ ಪ್ರೇಕ್ಷಕರು, ಹಳೆ ಮಾರುಕಟ್ಟೆಗೆ ಬರುವ ಗ್ರಾಹಕರು, ದ್ವಿಚಕ್ರ ವಾಹನ ಸವಾರರು, ಆಟೊ ಬಸ್, ಗೂಡ್ಸ್ ವಾಹನ ಚಾಲಕರು ಎಲ್ಲಿ ವಾಹನ ಅಪಘಾತಕ್ಕೀಡಾಗುವುದೋ ಎಂದು ಆತಂಕದಲ್ಲೆ ವಾಹನ ಚಲಾಯಿಸುವಂತಾಗಿದ್ದು, ಅತ್ಯಂತ ಜನನಿಬಿಡ, ವಾಹನದಟ್ಟಣೆಯಿಂದ ಕೂಡಿದ ಈ ರಸ್ತೆ ಅವ್ಯವಸ್ಥೆಯನ್ನು ಯಾರು ಕೇಳುವವರಿಲ್ಲದಂತಾಗಿದೆ.

ಎಲ್ಲಾ ಸರ್ಕಾರಿ ಜಯಂತಿ ಕಾರ್ಯಕ್ರಮಗಳು ಇದೇ ರಸ್ತೆಯಲ್ಲಿ ಬರುವ ಗುಬ್ಬಿವೀರಣ್ಣ ರಂಗಮ0ದಿರದಲ್ಲೆ ನಡೆಯುತ್ತಿದ್ದು ಈ ರಸ್ತೆಯ ಮೂಲಕವೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪಾಲಿಕೆ ಮೇಯರ್, ಆಯುಕ್ತರಾಧಿಯಾಗಿ ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ, ನಿರ್ಗಮಿಸುತ್ತಾರೆ. ಯಾರಿಗೂ ಈ ರಸ್ತೆಯ ಅವ್ಯವಸ್ಥೆ ಕಾಣಿಸುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ನಗರದ ಪ್ರಮುಖ ಸಂಪರ್ಕ ರಸ್ತೆಗಳ ಸ್ಥಿತಿಯೇ ಹೀಗಾದರೆ ಅಡ್ಡರಸ್ತೆಗಳ ಗತಿಯೇನು? ಎಂಬ ಪ್ರಶ್ನೆ ಎದುರಾಗಿದೆ.

ಪೂರ್ಣ ಹಾಳಾಗುವ ಮುನ್ನ ದುರಸ್ತಿಗೊಳಿಸಿ!: ಭಾರೀ ತೂಕದ ಸಾರಿಗೆ ಬಸ್‌ಗಳು, ಗೂಡ್ಸ್ ವಾಹನಗಳು ಈ ರಸ್ತೆ ಮಾರ್ಗವಾಗಿ ನೂರಾರು ಸಂಖ್ಯೆಯಲ್ಲಿ ನಿತ್ಯ ಸಂಚರಿಸುತ್ತಿದ್ದು, ದೊಡ್ಡ ಗಾತ್ರದ ವಾಹನಗಳ ಸಂಚಾರದಿ0ದಾಗಿ ಕಾಂಕ್ರೀಟ್ ರಸ್ತೆ ಹಾಳಾಗುವ ಹಂತ ತಲುಪಿದೆ. ಪೂರ್ಣಾ ಹಾಳಾಗುವ ಮುನ್ನ ದುರಸ್ತಿಗೊಳಿಸದಿದ್ದರೆ, ಹೊಸದಾಗ್ತಿ ಕಾಂಕ್ರೀಟ್ ರಸ್ತೆಯನ್ನು ಪುನರ್ ನಿರ್ಮಾಣ ಮಾಡಬೇಕಾದರೆ ಕೋಟಿಗಟ್ಟಲೇ ಹಣ ಬೇಕಾಗುತ್ತದೆ. ಸರ್ಕಾರದಿಂದ ಅನುದಾನ ಬರುವುದು ತಡವಾದರೆ ರಸ್ತೆಯಲ್ಲಿ ಸಂಚಾರವೇ ಸಾಧ್ಯವಿಲ್ಲವೆನ್ನುವ ಸ್ಥಿತಿ ನಿರ್ಮಾಣವಾಗುತ್ತದೆ.

ಹಿರಿಯರು, ಮಹಿಳೆಯರ ಸಂಚಾರ ಹೆಚ್ಚು: ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಹಿರಿಯ ನಾಗರಿಕರು, ಮಹಿಳೆಯರು ಮಕ್ಕಳು  ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಈ ರಸ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಸದರಿ ರಸ್ತೆ ಗುಂಡಿ ಗುದರಗಳಿಂದ ಕೂಡಿರುವುದರಿಂದ ಹಿರಿಯ ನಾಗರಿಕರು, ಮಹಿಳೆಯರು ಪ್ರಾಣ ಭೀತಿಯಿಂದ ಸಂಚರಿಸುವ0ತಾಗಿರುವುದು ಸ್ಮಾರ್ಟ್ಸಿಟಿ ನಗರಿಯೆಂಬ ಖ್ಯಾತಿಗೆ ಕಪ್ಚು ಚುಕ್ಕೆಯೆನಿಸಿದೆ.

ರಸ್ತೆಯಲ್ಲಿ ಸ್ವಚ್ಛತೆಯೂ ಮರೀಚಿಕೆ: ಖಾಸಗಿ ಬಸ್‌ನಿಲ್ದಾಣದ ಮಳಿಗೆಗಳು, ಗುಬ್ಬಿವೀರಣ್ಣ ರಂಗಮAದಿರ ಗುಜರಿ ಅಂಗಡಿಗಳು ಕೆಎಸ್‌ಆರ್‌ಟಸಿ ಬಸ್ ನಿಲ್ದಾಣ, ಅದಕ್ಕೆ ಲಗತಕ್ಕೆ ಆಟೋನಿಲ್ದಾಣ, ವಾರ್ತಾ ಇಲಾಖೆ, ಪತ್ರಿಕಾ ಭವನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯು ಬಾಳನಕಟ್ಟೆ ರಸ್ತೆ ಎಂದು ಕರೆಯಲ್ಪಡುವ ಇದೇ ಸಂಪರ್ಕ ರಸ್ತೆಯಲ್ಲಿ ಬರಲಿದ್ದು, ಗುಂಡಿ ಗುದುರಗಳ ಜೊತೆಗೆ ಸ್ವಚ್ಛತೆಯೂ ಮರೀಚಿಕೆಯೆನಿಸಿದೆ. ಗುಬ್ಬಿ ವೀರಣ್ಣ ಪಕ್ಕದ ಖಾಲಿಜಾಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಸಂಪರ್ಕಿಸುವ ಅಡ್ಡ ರಸ್ತೆಯ ಚರಂಡಿಯ ಬಳಿಯೇ ಮೂತ್ರ ವಿಸರ್ಜನೆ ಮಾಡಲಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸುವವರು ಮೂಗುಮುಚ್ಚುವಂತಾಗಿದೆ. ಬೀದಿ ಬದಿ ವ್ಯಾಪಾರದ ತ್ಯಾಜ್ಯಗಳು ಸಮರ್ಪಕ ವಿಲೆಯಾಗದೆ ಸಮಸ್ಯೆ ಎದುರಿಸುವಂತಾಗಿದೆ.

Pragati TV Social Connect for more latest u

Leave a Reply

Your email address will not be published. Required fields are marked *