ತುಮಕೂರು | ಅವ್ಯವಸ್ಥೆಯ ತಾಣ ತುಮಕೂರು ಬಸ್ ನಿಲ್ದಾಣ..!

ವರದಿ : ಮಂಜುನಾಥ್ ಎಚ್ ಆರ್, ಕ್ಯಾಮರಮನ್ ನಾಗರಾಜು

ತುಮಕೂರು : ಇಡೀ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಜಿಲ್ಲೆಯಲ್ಲಿ ಎರಡನೇ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲ್ಪತರು ನಾಡು ತುಮಕೂರು, ಅಭಿವೃದ್ಧಿಯಲ್ಲಿ ಮಾತ್ರ ಕುಂಟುತ್ತಾ ಸಾಗುತ್ತಿದೆ. ಸ್ಪಾಟ್ ಸಿಟಿ ನಗರಕ್ಕೆ ಆಗಮಿಸಿದ್ರೂ ಕೂಡ ಪ್ರಗತಿ ಎನ್ನುವುದು ಅಷ್ಟಕ್ಕಷ್ಟೇ. ಯಾಕಂದ್ರೆ ತುಮಕೂರು ನಗರದ ಹೃದಯ ಭಾಗದಲ್ಲಿರುವ, ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡುವ ಖಾಸಗಿ ಬಸ್ ನಿಲ್ದಾಣವೇ ಮೂಲಸೌಕರ್ಯಗಳು ಇಲ್ಲದೆ ಸಾರ್ವಜನಿಕರು ಓಡಾಡಲು ಭಯಪಡುವಂತಹ ವಾತಾವರಣ ನಿರ್ಮಾಣವಾದರೆ ನಗರದ ಬೇರೆ ಪ್ರದೇಶಗಳ ಪ್ರಗತಿಯ ಬಗ್ಗೆ ಯೋಚನೆ ಮಾಡೋದಾದ್ರು ಹೇಗೆ..?

ನಗರದ ಅಶೋಕ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣ ಪ್ರಯಾಣಿಕರ ಅತ್ಯಂತ ಸಮರ್ಪಕ ಪ್ರಯಾಣಕ್ಕೆ ಅನುಕೂಲಕರವಾಗಿದೆ. ಆದರೆ ಇಲ್ಲಿರುವಂತಹ ವ್ಯವಸ್ಥೆ ಒಂದು ಸರಿ ಇಲ್ಲದೆ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡಬೇಕಾದರೆ ಜೇಬಲ್ಲಿರುವ ಹಣದ ಜೊತೆಗೆ ಜೀವವನ್ನು ಕಾಪಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇಲ್ಲಿನ ಪ್ರಯಾಣಿಕರಲ್ಲಿ ನಿರ್ಮಾಣವಾಗಿದೆ.

ಹೇಳಿಕೊಳ್ಳುವುದಕ್ಕೆ ಮೂರು ದ್ವಾರಗಳಿವೆ ಆದರೆ ಇದು ತುಮಕೂರಿನ ಖಾಸಗಿ ಬಸ್ ನಿಲ್ದಾಣ ಎಂದು ಹೇಳುವುದಕ್ಕೆ ಒಂದು ಬೋರ್ಡ್ ಗತಿಯಿಲ್ಲ. ಈ ಬಸ್ ನಿಲ್ದಾಣದ ಒಳಗೆ ಬರೀ ಖಾಸಗಿ ಬಸ್ ಮಾತ್ರವಲ್ಲ ಖಾಸಗಿ ಕಾರುಗಳು, ಬೈಕುಗಳು ಕೂಡ ಸರಾಗವಾಗಿ ಓಡಾಡುತ್ತವೆ. ಬಸ್ ನಿಲ್ಲಲು ಮಾಡಿರುವ ಪ್ಲಾಟ್ಫಾರಂ ಮೇಲೆ ಬೈಕ್ ಗಳನ್ನು ಪಾರ್ಕಿಂಗ್ ಮಾಡ್ತಾರೆ. ಜೊತೆಗೆ ಅಲ್ಲಲ್ಲಿ ಫ್ಲಾಟ್ ಪ್ಲಾಟ್ಫಾರಂ ನೆಲಹಾಸೋ ಕಿತ್ತುಹೋಗಿವೆ.

ಆಟೋ ಚಾಲಕರಿಗೆ ಸರಿಯಾದ ನಿಲ್ದಾಣದ ವ್ಯವಸ್ಥೆ ಮಾಡಿಲ್ಲ, ಶೌಚಾಲಯವಿದ್ದರು ಮೂತ್ರ ವಿಸರ್ಜನೆಗೆ ಸಾರ್ವಜನಿಕರು ಹೊರಗಿನ ಗೋಡೆಯನ್ನೆ ಬಳಸುತ್ತಿದ್ದಾರೆ. ಸುತ್ತಮುತ್ತಲಿನ ವ್ಯಾಪಾರಸ್ಥರು ಖಾಸಗಿ ಬಸ್ ನಿಲ್ದಾಣವನ್ನು ಕಸ ಕಡ್ಡಿ ಹಾಕುವ ಡಂಪಿಂಗ್ ಯಾರ್ಡ್ ಮಾಡಿಕೊಂಡಿದ್ದಾರೆ. ಇನ್ನು ಬಸ್ ಮಾಲೀಕರು, ಚಾಲಕರು  ಬಸ್ ನಿಲ್ದಾಣದಲ್ಲಿ ಅದನ್ನು ರಿಪೇರಿ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ನಿಲ್ದಾಣದಲ್ಲಿರುವ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ, ಸಂಜೆಯ ಮೇಲೆ ಮಹಿಳೆಯರು, ಮಕ್ಕಳು, ವೃದ್ಧರು ಈ ಬಸ್ ನಿಲ್ದಾಣದ ಒಳಗೆ ಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಇಲ್ಲೊಂದು ಕೊಲೆಯೂ ಕೂಡ ಆಗಿದ್ದು ಮತ್ತಷ್ಟು ಭಯವನ್ನು ಹೆಚ್ಚಿಸಿದೆ.

ತುಮಕೂರು ನಗರದಲ್ಲಿ ಒಂದು ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ಆಗಬೇಕು ಎಂಬ ಬಹುದಿನಗಳ ಒತ್ತಾಯದ ನಂತರ ಸುಮಾರು 10 ವರ್ಷಗಳ ಹಿಂದೆ ನಿರ್ಮಾಣವಾದ ತುಮಕೂರು ಖಾಸಗಿ ಬಸ್ ನಿಲ್ದಾಣ ಇಂದು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಹೊಂದದೆ ಅನಾಥವಾಗಿದೆ.

ಇನ್ನು ಪ್ರಗತಿ ಟಿವಿ ಖಾಸಗಿ ಬಸ್ ನಿಲ್ದಾಣದ ಸಮಸ್ಯೆಗಳ ಮೇಲೆ ಫೋಕಸ್ ಮಾಡಿದ ಮೇಲೆ ಎಚ್ಚೆತ್ತ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಪ್ರಭಾವತಿ, ಉಪಮೇಯರು ನರಸಿಂಹಮೂರ್ತಿ ಇಂದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಿದ್ದಾರೆ. ಕಸ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ ಆದರೆ ಇದು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Pragati TV Social Connect for more latest u

Leave a Reply

Your email address will not be published. Required fields are marked *