ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಂ ಆರ್ ಮಮತ ಅವರು ಇಂದು ದೈವಾಧೀನರಾಗಿದ್ದಾರೆ.
ಮಮತಾರವರು ಪ್ರಸಕ್ತ ತುಮಕೂರು ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತಿ ಹಿರಿಯ ಪತ್ರಕರ್ತ ಎಚ್ ಆರ್ ರವೀಶ್ ,ಮಗ ಪ್ರಜ್ವಲ್ ಹಾಗೂ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ತುಮಕೂರು ತಾಲ್ಲೂಕು ಹಾಲನೂರು ಗ್ರಾಮದ ಅವರ ತೋಟದಲ್ಲಿ ನಾಳೆ ಶನಿವಾರ ಮಧ್ಯಾಹ್ನ ನೆರವೇರಲಿದೆ.ಬೆಂಗಳೂರಿನ ಅವರ ಮನೆಯಲ್ಲಿ ಇಂದು ಸಂಜೆ 8 ಗಂಟೆಯಿಂದ ನಾಳೆ ಬೆಳಿಗ್ಗೆ 8 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು.
ಮಮತ ಅವರಿಗೆ ಮೊದಲು ತಲೆ ಬುರುಡೆ ಒಳಗೆ ರಕ್ತಸ್ರಾವ ಆಗಿ ಆಸ್ಪತ್ರೆ ಗೆ ಸೇರಿಸಲಾಗಿತ್ತು .
ತುರ್ತು ಆಪರೇಷನ್ ಆಗಿತ್ತು
ಒಂದೆರಡು ದಿನ ಕೋಮಾ ಹಂತದಲ್ಲಿ ಇದ್ರು
.ಮನೆಗೆ ಬಂದು ಸ್ವಲ್ಪ ಹುಷಾರಾಗಿದ್ರು..ನಂತರ ಡೆಂಘಿ .. ಪ್ಲೇಟ್ಲೆಟ್ 9000 ಕ್ಕೆ ಇಳಿದಿತ್ತು ನಂತರ ಸುಧಾರಣೆ ಅಗಿತ್ತು ಅದರೆ ವಿಧಿ ಲೆಕ್ಕ ಬೇರೆ..ತುಂಬಾ ಕನಸು ಹೊತ್ತಿದ್ರು..ಬೇಗ ವಿ.ಆರ್.ಎಸ್ ಪಡೆಯುವ ಮಾತೂ ಆಡಿದ್ರು