ಈಗಾಗಲೇ ಖಾಸಗಿ ಟೆಲಿಕಾಂ ಸಂಸ್ಥೆಗಳು ತಮ್ಮ ತಮ್ಮ ರಿಚಾರ್ಜ್ ಪ್ಲ್ಯಾನ್ನಲ್ಲಿ ಏರಿಕೆ ಮಾಡಿವೆ. ಹೀಗಾಗಿ ಬಳಕೆ ದಾರ ಸರ್ಕಾರಿ ಸೌಮ್ಯದ ಬಿಎಸ್ಎನ್ಎಲ್ ಕಂಪನಿಯತ್ತ ಮುಖ ಮಾಡುತ್ತಿದ್ದಾನೆ. ಕಡಿಮೆ ಖರ್ಚು ಹಾಗೂ ಹೆಚ್ಚಿನ ವ್ಯಾಲಿಡಿಟಿಯನ್ನು ಬಳಕೆದಾರ ಬಿಎಸ್ಎನ್ಎಲ್ ನೆಟ್ವರ್ಕ್ನಲ್ಲಿ ಅನುಭವಿಸ ಬಹುದಾಗಿದೆ.
ಹೀಗಾಗಿ ದೇಶದಲ್ಲಿ ಘರ್ ವಾಪಸಿ ಎಂಬ ಕ್ಯಾಪನ್ ಸಹ ಆರಂಭವಾಗಿದೆ.
ಭಾರತದಲ್ಲಿ ಈಗಾಗಲೇ ಖಾಸಗಿ ಕಂಪನಿಗಳು 5ಜಿ ನೆಟ್ವರ್ಕ್ನ್ನು ನೀಡುತ್ತಿವೆ. ಆದರೆ ಸರ್ಕಾರಿ ಕಂಪನಿ ಇನ್ನು ಸಹ 3ಜಿ ಸೇವೆಗಳನ್ನೇ ನೀಡುತ್ತಿದೆ. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ 4ಜಿ ಸೇವೆಗಳನ್ನು ಆರಂಭಿಸುವದಾಗಿ ಕಂಪನಿ ಹೇಳಿಕೊಂಡಿದೆ. ಅಲ್ಲದೆ ಈಗಾಗಲೇ ತಮಿಳುನಾಡಿನಲ್ಲಿ ಈ ಸೇವೆಗಳು ಆರಂಭವಾಗಿದ್ದು, ಗ್ರಾಹಕರ ಚಿತ್ತ ಕದ್ದಿದೆ.
ಕಡಿಮೆ ಬೆಲೆಯ ಲಾಂಗ್ ವ್ಯಾಲಿಡಿಟಿ ರಿಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡುತ್ತಿದ್ದಂತೆ, ಗ್ರಾಹಕ ಈ ನೆಟ್ವರ್ಕ್ನತ್ತ ಮುಖಮಾಡಿದ್ದಾನೆ. ಬೇರೆ ಕಂಪನಿಗಳಂತೆ ಬಿಎಸ್ಎನ್ಎಲ್ ಸಹ ಹಲವು ಆಫರ್ಗಳೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈಗ ಒಂದು ವರ್ಷಕ್ಕಿಂತಲೂ ಹೆಚ್ಚಿನ ವ್ಯಾಲಿಡಿಟಿ ಹೊಂದಿರುವ ಪ್ಲ್ಯಾನ್, ಭಾರೀ ಹವಾ ಕ್ರಿಯೇಟ್ ಮಾಡಿದೆ.
ಒಂದು ವರ್ಷದ ವ್ಯಾಲಿಡಿಟಿಗೆ ಎಷ್ಟು ಬೆಲೆ?
ಬೇರೆ ನೆಟ್ವರ್ಕ್ಗೆ ಕಂಪೇರ್ ಮಾಡಿದರೆ ಬಿಎಸ್ಎನ್ಎಲ್ ಅಗ್ಗದ ರಿಚಾರ್ಜ್ ಪ್ಲ್ಯಾನ್ ನೀಡಿದೆ. ಒಂದು ವರ್ಷದ ವ್ಯಾಲಿಡಿಟಿಗೆ ಈ ಕಂಪನಿ 1198 ರೂ. ಚಾರ್ಜ್ ಮಾಡುತ್ತದೆ. ಈ ಯೋಜನೆಯಲ್ಲಿ ಬಳಕೆದಾರರ ಪ್ರತಿ ತಿಂಗಳು 300 ನಿಮಿಷಗಳ ಉಚಿತ ಕಾಲ್ ಮಾಡುವ ವ್ಯವಸ್ಥೆ ಹೊಂದಿರುತ್ತದೆ. ಅಲ್ಲದೆ 30 ಎಸ್ಎಂಎಸ್ ಸಹ ಸಿಗುತ್ತವೆ.
ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಬಳಕೆದಾರ ಪ್ರತಿ ತಿಂಗಳು 3GB ಡೇಟಾದ ಪ್ರಯೋಜನವನ್ನು ಸಹ ಪಡೆಯಬಹುದು. ಅಲ್ಲದೆ BSNL ನ ಈ ಯೋಜನೆಯಲ್ಲಿ, ಬಳಕೆದಾರರು ಯಾವುದೇ ಮೌಲ್ಯವರ್ಧಿತ ಸೇವೆಯ ಪ್ರಯೋಜನವನ್ನು ಪಡೆಯುವುದಿಲ್ಲ. ಆದರೆ ಇದು ಖಾಸಗಿ ಟೆಲಿಕಾಂ ಕಂಪನಿಗಳ ಯೋಜನೆಗಳಿಗಿಂತ ಅಗ್ಗವಾಗಿದೆ. ನೀವು BSNL ಸಂಖ್ಯೆಯನ್ನು ಸೆಕೆಂಡರಿ ಸಿಮ್ ಆಗಿ ಹೊಂದಿದ್ದರೆ, ನೀವು ಈ ಯೋಜನೆಯನ್ನು ಆಯ್ಕೆ ಮಾಡಬಹುದು.
ರೂ 1499 ಯೋಜನೆ
BSNL 365 ದಿನಗಳ ವ್ಯಾಲಿಡಿಟಿಯೊಂದಿಗೆ ಮತ್ತೊಂದು ಯೋಜನೆಯನ್ನು ಹೊಂದಿದೆ, ಇದು ರೂ 1499 ಗೆ ಬರುತ್ತದೆ. ಈ ಯೋಜನೆಯಲ್ಲಿ, ದೇಶಾದ್ಯಂತ ಯಾವುದೇ ನೆಟ್ವರ್ಕ್ನಲ್ಲಿ ಕರೆ ಮಾಡಲು ಬಳಕೆದಾರರಿಗೆ ಉಚಿತ ಕರೆಯನ್ನು ನೀಡಲಾಗುತ್ತಿದೆ. ಈ ಯೋಜನೆಯು ಪ್ರತಿದಿನ 100 ಉಚಿತ SMS ನೊಂದಿಗೆ ಬರುತ್ತದೆ. ಇದರೊಂದಿಗೆ, ಈ ಯೋಜನೆಯಲ್ಲಿ, ಪ್ರತಿ ತಿಂಗಳು ಬಳಕೆದಾರರಿಗೆ 24GB ಡೇಟಾವನ್ನು ನೀಡಲಾಗುತ್ತದೆ.
ಈ ಎಲ್ಲ ರಿಚಾರ್ಜ್ ಪ್ಲ್ಯಾನ್ಗಳು ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡುತ್ತಿವೆ. ಹೀಗಾಗಿ ಎಲ್ಲ ಬಳಕೆದಾರರು ಮತ್ತೊಮ್ಮೆ ಬಿಎಸ್ಎನ್ಎಲ್ ಸಿಮ್ನತ್ತ ಮುಖಮಾಡಿದ್ದಾರೆ. ಒಂದು ಅಂಕಿ ಅಂಶದ ಪ್ರಕಾರ 30 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈಗಾಗಲೇ ಬಿಎಸ್ಎನ್ಎಲ್ ಸಿಮ್ನತ್ತ ಮುಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.