ನವದೆಹಲಿ: ಭಾರತೀಯ ಸೇನಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶೇಷ ನೇಮಕಾತಿಗಳು ನಡೆದಿವೆ. ಭೂಸೇನೆ ಮುಖ್ಯಸ್ಥರಾಗಿ (ಜನರಲ್) ಉಪೇಂದ್ರ ದ್ವಿವೇದಿ ಮತ್ತು ವಾಯುಸೇನೆ ಮುಖ್ಯಸ್ಥರಾಗಿ (ಅಡ್ಮಿರಲ್) ದಿನೇಶ್ ತ್ರಿಪಾಠಿ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಇವರಿಬ್ಬರೂ ಶಾಲಾ ಹಂತದಲ್ಲಿ ಸಹಪಾಠಿಗಳೆಂಬುದು ಇಲ್ಲಿ ವಿಶೇಷ
ಉಪೇಂದ್ರ ದ್ವಿವೇದಿ ಮತ್ತು ದಿನೇಶ್ ತ್ರಿಪಾಠಿ ಅವರ ಸ್ನೇಹ ಎರಡೂ ಪಡೆಗಳ ನಡುವಿನ ಕಾರ್ಯವ್ಯಾಪ್ತಿಯನ್ನು ಭೂಸೇನೆ ಮತ್ತು ವಾಯುಸೇನಾ ಪಡೆಗಳನ್ನು ಬಲಪಡಿಸುವಲ್ಲಿ ಬಹಳಷ್ಟು ನೆರವಾಗಲಿದೆ. 50 ವರ್ಷಗಳ ನಂತರವೂ ತಮ್ಮ ಸ್ನೇಹವನ್ನು ಮುಂದುವರಿಸಿಕೊಂಡು ಬಂದ ಇಬ್ಬರು ಅದ್ಭುತ ವಿದ್ಯಾರ್ಥಿಗಳನ್ನು ನೀಡಿ ಅಪರೂಪದ ಗೌರವಕ್ಕೆ ಮಧ್ಯಪ್ರದೇಶದ ರೇವಾ ಸೈನಿಕ ಶಾಲೆ ಒಳಗಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಭರತ್ ಭೂಷಣ್ ಬಾಬು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ
ಎರಡು ತಿಂಗಳ ಅಂತರದಲ್ಲಿ ಇಬ್ಬರು ಸಹಪಾಠಿ ಸ್ನೇಹಿತರ ನೇಮಕಾತಿಗಳು ನಡೆದಿವೆ. ದಿನೇಶ್ ತ್ರಿಪಾಠಿ ಅವರನ್ನು ಮೇ 1ರಂದು ಭಾರತೀಯ ನೌಕಾಪಡೆಯ ಅಡ್ಮಿರಲ್ ಆಗಿ ನೇಮಿಸಿದ್ದರೆ, ಉಪೇಂದ್ರ ದ್ವಿವೇದಿ ಅವರನ್ನು ಜನರಲ್ ಆಗಿ ಎರಡು ದಿನಗಳ ನೇಮಕ ಮಾಡಲಾಗಿದೆ.
ದ್ವಿವೇದಿ ಅವರು ಉತ್ತರ ಸೇನಾ ಕಮಾಂಡರ್ ಆಗಿ ಸುದೀರ್ಘ ಅಧಿಕಾರಾವಧಿ ನಡೆಸಿದ್ದಾರೆ. ಪೂರ್ವ ಲಡಾಖ್ ಗಡಿಯಲ್ಲಿ ನಡೆಯುವ ದೀರ್ಘಾವಧಿ ಮಿಲಿಟರಿ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿಯಂತ್ರಿಸಿದ ಖ್ಯಾತಿ ಹೊಂದಿದ್ದಾರೆ. ಜುಲೈ 1, 1964ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ತಮ್ಮ 20ನೇ ವಯಸ್ಸಿನಲ್ಲಿಯೇ (ಡಿಸೆಂಬರ್ 15, 1984 ರಂದು) ಭಾರತೀಯ ಸೇನೆಗೆ ಸೇರಿದ್ದರು. ಮೊದಲು ಅವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನಲ್ಲಿ ನಿಯೋಜಿತರಾಗಿದ್ದರು.