ಧರ್ಮಸ್ಥಳದಲ್ಲಿ ಹಸೆಮಣೆ ಏರಿ ಮದುವೆ, ಆಪ್ತರು ಮತ್ತು ಗೆಳೆಯರ ಸಮ್ಮುಖದಲ್ಲಿ ಆಚರಣೆ
ನಟ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಉಗ್ರಂ ಮಂಜು ವಿವಾಹ ಆಗಿದ್ದಾರೆ. ಸಂಧ್ಯಾ ಜೊತೆ ಅವರು ಹಸೆಮಣೆ ಏರಿದ್ದಾರೆ. ಧರ್ಮಸ್ಥಳದಲ್ಲಿ ಸರಳ ವಿವಾಹ ಆಗಲು ಮಂಜು ನಿರ್ಧರಿಸಿದ್ದರು. ಅಂತೆಯೇ ಈ ಮದುವೆ ನಡೆದಿದೆ. ಆಪ್ತರು, ಗೆಳೆಯರು ಈ ಮದುವೆಗೆ ಆಗಮಿಸಿದ್ದರು. ಎಲ್ಲರೂ ಮಂಜುಗೆ ಶುಭಾಶಯ ಕೋರಿದ್ದಾರೆ. ನಟ ಪ್ರಮೋದ್ ಶೆಟ್ಟಿ ಕೂಡ ಮದುವೆಗೆ ಹಾಜರಿ ಹಾಕಿದ್ದರು. ವಿವಾಹಕ್ಕೂ ಮೊದಲು ಮಂಜು ಅವರು ಬಿಗ್ ಬಾಸ್ ಮನೆಗೆ ಬಂದು ಬ್ಯಾಚುಲರ್ಸ್ ಪಾರ್ಟಿ ಮಾಡಿದ್ದರು.
For More Updates Join our WhatsApp Group :




