T20 ಇತಿಹಾಸದಲ್ಲಿ ಅನನ್ಯ ದಾಖಲೆ: ಕೀರನ್ ಪೊಲಾರ್ಡ್ ಬರೆಯಿತು ಹೊಸ ವಿಶ್ವ ಇತಿಹಾಸ!

T20 ಇತಿಹಾಸದಲ್ಲಿ ಅನನ್ಯ ದಾಖಲೆ: ಕೀರನ್ ಪೊಲಾರ್ಡ್ ಬರೆಯಿತು ಹೊಸ ವಿಶ್ವ ಇತಿಹಾಸ!

 38 ವರ್ಷದ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್​ನಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ ಸಾಗುತ್ತಿದ್ದಾರೆ. ಈ ದಾಖಲೆಗಳ ಪಟ್ಟಿಗೆ ಇದೀಗ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅದು ಕೂಡ ಇದುವರೆಗೆ ಯಾವುದೇ ಆಟಗಾರ ನಿರ್ಮಿಸದ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ.

ಟಿ20 ಕ್ರಿಕೆಟ್‌ನಲ್ಲಿ ಕೀರನ್ ಪೊಲಾರ್ಡ್ ಅವರ ವಿಶ್ವ ದಾಖಲೆಗಳ ಸರಣಿ ಮುಂದುವರೆದಿದೆ. ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಮೂಲಕ 700 ಪಂದ್ಯಗಳ ಹಾಗೂ 14 ಸಾವಿರ ರನ್​ಗಳ ವರ್ಲ್ಡ್ ರೆಕಾರ್ಡ್ ಬರೆದ ಪೊಲಾರ್ಡ್ ಇದೀಗ ಮತ್ತೊಂದು ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧದ ಸಿಪಿಎಲ್ ಫೈನಲ್ ಪಂದ್ಯದಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ಪರ ಕಣಕ್ಕಿಳಿದ ಕೀರನ್ ಪೊಲಾರ್ಡ್ ಒಟ್ಟು 4 ಕ್ಯಾಚ್ ಹಿಡಿದಿದ್ದರು. ಈ ಕ್ಯಾಚ್ ಗಳೊಂದಿಗೆ ಪೊಲಾರ್ಡ್ ಟಿ20 ಕ್ರಿಕೆಟ್ ನಲ್ಲಿ 400 ಕ್ಯಾಚ್ ಗಳ ಮೈಲುಗಲ್ಲು ಮುಟ್ಟಿದ್ದಾರೆ.

ವೆಸ್ಟ್ ಇಂಡೀಸ್ ಹಾಗೂ ವಿಶ್ವದ ಹಲವು ಲೀಗ್ ತಂಡಗಳ ಪರ 720 ಪಂದ್ಯಗಳನ್ನಾಡಿರುವ ಕೀರನ್ ಪೊಲಾರ್ಡ್ ಈವರೆಗೆ 401 ಕ್ಯಾಚ್ ಗಳನ್ನು ಹಿಡಿದಿದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 400+ ಕ್ಯಾಚ್ ಹಿಡಿದ ವಿಶ್ವದ ಏಕೈಕ ಫೀಲ್ಡರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಕೀರನ್ ಪೊಲಾರ್ಡ್ ಅವರನ್ನು ಹೊರತುಪಡಿಸಿ ವಿಶ್ವದ ಯಾವುದೇ ಆಟಗಾರ ಟಿ20 ಕ್ರಿಕೆಟ್‌ನಲ್ಲಿ 350 ಕ್ಕಿಂತ ಹೆಚ್ಚು ಕ್ಯಾಚ್ ಹಿಡಿದಿಲ್ಲ. 320 ಕ್ಯಾಚ್ ಗಳನ್ನು ಹಿಡಿದಿರುವ ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಇದೀಗ 400+ ಕ್ಯಾಚ್ ಗಳೊಂದಿಗೆ ಹೊಸ ಮೈಲುಗಲ್ಲು ದಾಟಿರುವ ಕೀರನ್ ಪೊಲಾರ್ಡ್ ಮುಂಬರುವ ಟಿ20 ಪಂದ್ಯಗಳ ಮೂಲಕ 326 ರನ್​ಗಳಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿರುವ ಕ್ರಿಸ್ ಗೇಲ್ (14562) ಅವರ ವಿಶ್ವ ದಾಖಲೆ ಮುರಿಯಲು ಕೀರನ್​ ಪೊಲಾರ್ಡ್​ಗೆ (14237) ಬೇಕಿರುವುದು ಕೇವಲ 326 ರನ್​ಗಳು ಮಾತ್ರ. ಹೀಗಾಗಿ ಟಿ20 ರನ್ ಸರದಾರರ ಪಟ್ಟಿಯಲ್ಲೂ ಪೊಲಾರ್ಡ್ ಅಗ್ರಸ್ಥಾನಕ್ಕೇರುವುದನ್ನು ನಿರೀಕ್ಷಿಸಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *