‘ಓಂಕಾರಂ’ ಚಿತ್ರದ ಕಾಲದ ಅನುಭವ ಬಹಿರಂಗ.
ಉಪೇಂದ್ರ ಅವರಿಗೆ ಕನ್ನಡದಲ್ಲಿ ಇರುವಂತೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. 90ರ ದಶಕದಲ್ಲಿಯೇ ತೆಲುಗು ಚಿತ್ರರಂಗದಲ್ಲಿ ಉಪೇಂದ್ರ ಕೆಲಸ ಮಾಡಿದ್ದರು. ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ. ಚಿರಂಜೀವಿ ಅವರಿಗೆ ತೆಲುಗು ಚಿತ್ರರಂಗದಲ್ಲಿ ಒಂದು ಕಲ್ಟ್ ಫಾಲೋವಿಂಗ್ ಇದೆ. ಅಲ್ಲಿನ ಚಿತ್ರಕರ್ಮಿಗಳೊಟ್ಟಿಗೆ ಆಪ್ತ ಬಂಧವೂ ಸಹ ಉಪೇಂದ್ರ ಅವರಿಗೆ ಇದೆ. ಇತ್ತೀಚೆಗೆ ಸಹ ಉಪೇಂದ್ರ ಅವರು ತೆಲುಗಿನ ‘ಆಂಧ್ರ ಕಿಂಗ್’ ಸಿನಿಮಾನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದೀಗ ತೆಲುಗು ಚಿತ್ರರಂಗದ ಹಿರಿಯ ಮತ್ತು ಬಲು ಜನಪ್ರಿಯ ಪೋಷಕ ನಟರೊಬ್ಬರು ಉಪೇಂದ್ರ ಅವರೊಟ್ಟಿಗಿನ ತಮ್ಮ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಉಪೇಂದ್ರ ಅವರು ‘ನಿಮ್ಮ ಪ್ರತಿಭೆ ನನಗೆ ಬೇಕಿಲ್ಲ’ ಎಂದು ನನಗೆ ಹೇಳಿದ್ದರು ಎಂದು ಆ ಹಿರಿಯ ಪೋಷಕ ನಟ ಹೇಳಿದ್ದು, ಸನ್ನಿವೇಶವನ್ನು ಸಹ ವಿವರಿಸಿದ್ದಾರೆ.
1995 ರಲ್ಲಿ ಉಪೇಂದ್ರ ನಿರ್ದೇಶಿಸಿ, ಶಿವಣ್ಣ ನಟಿಸಿದ್ದ ‘ಓಂ’ ಸಿನಿಮಾ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಯ್ತು. ತೆಲುಗು, ತಮಿಳಿನಲ್ಲಿ ಹೆಸರು ಮಾಡಿದ್ದ ಕೆವಿ ಸತ್ಯನಾರಾಯಣ್ ಅವರು ಕನ್ನಡದ ‘ಓಂ’ ಸಿನಿಮಾ ನೋಡಿ ಇಷ್ಟಪಟ್ಟು ಅದನ್ನು ತೆಲುಗಿನಲ್ಲಿ ರೀಮೇಕ್ ಮಾಡಲು ಮುಂದಾದರು. ಸಿನಿಮಾಕ್ಕೆ ರಾಜಶೇಖರ್ ನಾಯಕ, ಉಪೇಂದ್ರ ಅವರಿಂದಲೇ ಸಿನಿಮಾದ ನಿರ್ದೇಶನ ಮಾಡಿಸಿದ್ದರು. ಸಿನಿಮಾಕ್ಕೆ ‘ಓಂಕಾರಂ’ ಎಂದು ಹೆಸರಿಡಲಾಗಿತ್ತು. ಅದು ಉಪೇಂದ್ರ ಕೆಲಸ ಮಾಡಿದ ಮೊಟ್ಟ ಮೊದಲ ತೆಲುಗು ಸಿನಿಮಾ ಆಗಿತ್ತು.
ತೆಲುಗಿನ ಹಿರಿಯ ಪೋಷಕ ನಟ ಎಲ್ಬಿ ಶ್ರೀರಾಮ್ ಅವರು ಆ ಸಿನಿಮಾಕ್ಕೆ ಸಂಭಾಷಣೆ, ಚಿತ್ರಕತೆ ಬರೆದಿದ್ದರು. ಅದೇ ಎಲ್ಬಿ ಶ್ರೀರಾಮ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಓಂಕಾರಂ’ ಸಿನಿಮಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ. ‘ಅದಾಗಲೇ ನಾನು ಭಿನ್ನ ಸಂಭಾಷಣೆಕಾರ, ಚಿತ್ರಕತೆಗಾರ ಎಂಬ ಹೆಸರು ಇತ್ತು. ಸೂಪರ್ ಹಿಟ್ ಸಿನಿಮಾಗಳಾದ ‘ಹಿಟ್ಲರ್’, ‘ಹಲೋ ಬ್ರದರ್’ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದೆ. ಹಾಗಾಗಿ ಕೆವಿ ಸತ್ಯನಾರಾಯಣ್ ಅವರು ನನ್ನನ್ನು ಸಂಭಾಷಣೆಕಾರನನ್ನಾಗಿ ಕರೆಸಿದ್ದರು’ ಎಂದಿದ್ದಾರೆ.
For More Updates Join our WhatsApp Group :
