ಉಪೇಂದ್ರ ಇತ್ತೀಚೆಗೆ ಪರಭಾಷೆ ಸಿನಿಮಾಗಳಲ್ಲಿ ಸಖತ್ ಮಿಂಚುತ್ತಿದ್ದಾರೆ. ರಜನೀಕಾಂತ್ ಜೊತೆಗೆ ನಟಿಸಿದ್ದ ‘ಕೂಲಿ’ ಸಿನಿಮಾ ದೊಡ್ಡ ಹಿಟ್ ಆಯ್ತು. ಉಪ್ಪಿ ಪಾತ್ರಕ್ಕೂ ಮೆಚ್ಚುಗೆ ದೊರಕಿತು. ಇದೀಗ ತೆಲುಗಿನ ‘ಆಂಧ್ರ ಕಿಂಗ್’ ಸಿನಿಮಾನಲ್ಲಿ ಉಪ್ಪಿ ನಟಿಸುತ್ತಿದ್ದು, ಸಿನಿಮಾನಲ್ಲಿ ಉಪೇಂದ್ರ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಉಪೇಂದ್ರ ಇತ್ತೀಚೆಗೆ ಕನ್ನಡಕ್ಕಿಂತಲೂ ಪರ ಭಾಷೆ ಸಿನಿಮಾಗಳಲ್ಲಿಯೇ ಹೆಚ್ಚು ಮಿಂಚುತ್ತಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಜೊತೆಗೆ ‘ಕೂಲಿ’ ಸಿನಿಮಾನಲ್ಲಿ ಉಪೇಂದ್ರ ನಟಿಸಿದ್ದು, ಆ ಸಿನಿಮಾ ಸೂಪರ್ ಹಿಟ್ ಆಯ್ತು. ಉಪೇಂದ್ರ ಪಾತ್ರಕ್ಕೂ ಸಹ ಮೆಚ್ಚುಗೆ ವ್ಯಕ್ತವಾಯ್ತು. ಇದೀಗ ಉಪೇಂದ್ರ ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅದೂ ‘ಆಂಧ್ರ ಕಿಂಗ್ ತಾಲ್ಲೂಕ’ ಆಗಿ. ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟೀಸರ್ ಗಮನ ಸೆಳೆಯುತ್ತಿದೆ.
ರಾಮ್ ಪೋತಿನೇನಿ ನಾಯಕನಾಗಿ ನಟಿಸಿರುವ ‘ಆಂಧ್ರ ಕಿಂಗ್ ತಾಲ್ಲೂಕ’ ಸಿನಿಮಾನಲ್ಲಿ ಉಪೇಂದ್ರ ತೆಲುಗಿನ ಸ್ಟಾರ್ ಹೀರೋ ಪಾತ್ರದಲ್ಲಿ ನಟಿಸಿದ್ದಾರೆ. ಇದು ನಟನ ಅಭಿಮಾನಿ ಮತ್ತು ನಟನ ನಡುವೆ ನಡೆಯುವ ಯುದ್ಧದ ಬಗೆಗಿನ ಸಿನಿಮಾ ಆಗಿದೆ. ಇದೀಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ಉಪೇಂದ್ರ ಅವರ ಕಟೌಟ್ಗಳು, ಉಪೇಂದ್ರ ಪೋಸ್ಟರ್ಗಳು ರಾರಾಜಿಸಿವೆ. ಆದರೆ ಉಪ್ಪಿ ನಟಿಸಿರುವ ದೃಶ್ಯಗಳನ್ನು ಟೀಸರ್ನಲ್ಲಿ ತೋರಿಸಲಾಗಿಲ್ಲ. ಆದರೆ ಇಡೀ ಸಿನಿಮಾ ಉಪೇಂದ್ರ ಪಾತ್ರದ ಸುತ್ತಲೇ ಸುತ್ತುವುದು ಖಾತ್ರಿ ಆಗಿದೆ.
ಸಿನಿಮಾನಲ್ಲಿ ರಾಮ್ ಪೋತಿನೇನಿ ಸಾಮಾನ್ಯ ಯುವಕ, ಆತ ಆಂಧ್ರ ಕಿಂಗ್ ಉಪೇಂದ್ರ ಅವರ ಅಪ್ಪಟ ಅಭಿಮಾನಿ. ತಮ್ಮ ನಟನ ಬಗ್ಗೆ ಯಾರು ಏನೇ ಮಾತನಾಡಿದರೂ ಸಹಿಸಲಾರ. ಆಂಧ್ರ ಕಿಂಗ್ ಸಿನಿಮಾದ ಬಿಡುಗಡೆಗೆ ಸ್ವಂತ ಹಣ ಖರ್ಚು ಮಾಡಿ ಕಟೌಟ್ ಹಾಕಿಸಿ, ಬಂಟಿಂಗ್ಸ್ ಕಟ್ಟಿ ಚಿತ್ರಮಂದಿರವನ್ನು ಅಲಂಕಾರ ಮಾಡಿ ಅಭಿಮಾನ ಪ್ರದರ್ಶಿಸುವವ. ಆದರೆ ಸೂಪರ್ ಸ್ಟಾರ್ ಅವನ ಅಪ್ಪಟ ಅಭಿಮಾನಿಯ ಮಧ್ಯೆಯೇ ಯುದ್ಧ ಶುರುವಾದರೆ? ಅದೇ ಕತೆಯನ್ನು ‘ಆಂಧ್ರ ಕಿಂಗ್’ ಸಿನಿಮಾ ಒಳಗೊಂಡಿದೆ.
ಈ ಹಿಂದೆ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಬಾಬು ಪಿ ಅವರು ‘ಆಂಧ್ರ ಕಿಂಗ್ ತಾಲ್ಲೂಕ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರಾಮ್ ಪೋತಿನೇನಿ ಎದುರು ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ಉಪೇಂದ್ರ, ರಾವ್ ರಮೇಶ್, ಮುರಳಿ ಶರ್ಮಾ ಇನ್ನೂ ಕೆಲವು ಪ್ರಮುಖ ಕಲಾವಿದರು ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ವಿವೇಕ್-ಮೆರ್ವಿನ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ಮೈತ್ರಿ ಮೂವಿ ಮೇಕರ್ಸ್. ಸಿನಿಮಾ ನವೆಂಬರ್ 28ಕ್ಕೆ ಬಿಡುಗಡೆ ಆಗಲಿದೆ.
For More Updates Join our WhatsApp Group :
