ಒಂದೇ ಪಾಸ್ಪೋರ್ಟ್–ವೀಸಾ ಬಳಕೆ.

ಒಂದೇ ಪಾಸ್ಪೋರ್ಟ್–ವೀಸಾ ಬಳಕೆ.

ಯುಕೆ ಪ್ರಯಾಣ ಯತ್ನಿಸಿದ ಪ್ರಕರಣ ಬಯಲು.

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಇಬ್ಬರು ವ್ಯಕ್ತಿಗಳು ಬಳಸಿ ಯುಕೆ ಪ್ರಯಾಣಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಶ್ರೀಲಂಕಾ ಮೂಲದ ಕಾಂಡಿಯಾ ರಾಜಗೋಪಾಲ್ ಎಂಬಾತನನ್ನು ಏರ್‌ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

ಪಾಸ್​ಪೋರ್ಟ್​ ಕಾಣೆಯಾಗಿದೆ ಎಂದು ಆರೋಪಿ ಹೈಡ್ರಾಮಾ

ಬಂಧಿತ ಆರೋಪಿ ಕಳೆದ ಭಾನುವಾರ ಯುನೈಟೆಡ್ ಕಿಂಗ್‌ಡಂಗೆ ಪ್ರಯಾಣಿಸಬೇಕಿತ್ತು. ವಿಮಾನ ನಿಲ್ದಾಣದ ಪ್ಯಾಸೆಂಜರ್ ಎಕ್ಸ್‌ಚೇಂಜ್ ಪ್ರದೇಶದಲ್ಲಿ ಫ್ಲೈಟ್‌ಗಾಗಿ ಕಾಯುತ್ತಿದ್ದ ವೇಳೆ, ತನ್ನ ಪಾಸ್‌ಪೋರ್ಟ್ ಹಾಗೂ ವೀಸಾ ಕಳೆದುಹೋಗಿದೆ ಎಂದು ಆರೋಪಿಯು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಬದಲಿ ದಾಖಲಾತಿ ಪಡೆಯಲು ಯತ್ನಿಸಿದ್ದ.ಆದರೆ ಪೊಲೀಸ್ ವಿಚಾರಣೆ ವೇಳೆ ಆರೋಪಿಯ ಸಂಚು ಬಹಿರಂಗವಾಗಿದೆ. ಆರೋಪಿಯ ಸ್ನೇಹಿತ ಶಾರುಷನ್ ಕುನಸೇಕರನ್ ಎಂಬಾತ ಈಗಾಗಲೇ ರಾಜಗೋಪಾಲ್‌ನ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಬಳಸಿ ಯುಕೆ ಪ್ರಯಾಣಿಸಿರುವುದು ತಿಳಿದುಬಂದಿದೆ.

ಈ ಅಕ್ರಮ ನಡೆದಿದ್ದು ಹೇಗೆ?

ಆರೋಪಿ ಮೊದಲೇ ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡು, ತನ್ನ ಮೂಲ ದಾಖಲಾತಿಗಳನ್ನು ನೀಡಿದ್ದಾನೆ. ನಂತರ ದಾಖಲೆಗಳು ಕಳೆದುಹೋಗಿವೆ ಎಂದು ನಾಟಕವಾಡಿ ಅಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಯುಕೆಯಲ್ಲಿ ಶರಣಾರ್ಥಿ (refugee) ಸ್ಥಾನ ಪಡೆಯುವ ಉದ್ದೇಶದಿಂದ ಈ ಕೃತ್ಯ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಮತ್ತೊಬ್ಬ ಆರೋಪಿ ಹೇಗೆ ಕಣ್ತಪ್ಪಿಸಿ ಪ್ರಯಾಣಿಸಿದ್ದಾನೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *