ತುಮಕೂರು: ಕೇಂದ್ರ ಸಚಿವ ವಿ.ಸೋಮಣ್ಣ ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ್ದಾರೆ. ಸ್ವತಃ ದೇವರೇ ಹೇಳಿದ್ರೂ ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತುಮಕೂರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿವರಿಸುತ್ತಿದ್ದ ಸೋಮಣ್ಣ, ಕೇಂದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಹಾಗೂ ತುಮಕೂರು ಜಿಲ್ಲಾಭಿವೃದ್ಧಿ ವಿಚಾರದ ಬಗ್ಗೆ ಮಾತನಾಡುವಾಗ, ತುಮಕೂರು-ಬೆಂಗಳೂರು ನಾಲ್ಕು ಪಥದ ರೈಲ್ವೆ. ಸರ್ವೆ ಆಯ್ತು ಡಿಪಿಆರ್ ಶುರು ಮಾಡಿಸಿದ್ದೀನಿ. ಇದರ ಜೊತೆಗೆ ಎನ್‌ಹೆಚ್4ರ ತಿಮ್ಮರಾಜನಹಳ್ಳಿ ಅಭಿವೃದ್ಧಿ ಆಗುತ್ತದೆ. ಕೆಐಡಿಬಿಯವರ ಜೊತೆ ಮಾತನಾಡಿದ್ದೇನೆ ಎಂದರು.
ಇದೆಲ್ಲಾ ಅಭಿವೃದ್ಧಿ ನಿಮಗಾಗಿ. ನಾನು ಇನ್ನು ಐವತ್ತು ವರ್ಷ ಇರ್ತೀನೇನಪ್ಪಾ.. ಇಲ್ಲ ಇರೋದಿಲ್ಲ. ನಾನು ಮತ್ತೇ ಎಲೆಕ್ಷನ್‌ಗೆ ನಿಂತ್ಕೊ ಅಂತ ದೇವ್ರು ಹೇಳಿದರೂ ಕೇಳುವವನಲ್ಲ. ನನ್ನ ಭಾವನೆ ಹಂಗಿದೆ ಎಂದು ತಿಳಿಸಿದರು.
ಇದೆಲ್ಲಾ ಒಂದೊಂದು ಹೆಜ್ಜೆ ಗುರುತು ಎಂದು ಸೋಮಣ್ಣ ಹೇಳಿದ್ದಾರೆ. ಮಾತಿನ ಭರದಲ್ಲಿ ಹೇಳಿದರೋ ಅಥವಾ ಖಚಿತವಾಗಿ ಚುನಾವಣೆಗೆ ನಿಲ್ಲಲ್ವೋ ಗೊತ್ತಿಲ್ಲ ಎಂದು ಹೇಳಿದರು.