ಮೊಬೈಲ್ ನಿಷೇಧ, ಫೋಟೋ-ವಿಡಿಯೋ ಲೀಕ್ ನಿರ್ಬಂಧ – ಹೈದರಾಬಾದ್ನಲ್ಲಿ ವಿಶೇಷ ಆರತಕ್ಷತೆ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ಮದುವೆ ಆಗೋದು ಬಹುತೇಕ ಖಚಿತವಾಗಿದೆ. ಉದಯಪುರದಲ್ಲಿ ಇವರ ವಿವಾಹ ನಡೆಯುತ್ತಿದೆ. ಈಗಾಗಲೇ ದಂಪತಿಯ ವಿವಾಹ ಆಮಂತ್ರಣದ ಫೋಟೋಗಳು ವೈರಲ್ ಆಗಿವೆ. ಹೀಗಿರುವಾಗಲೇ ಈ ದಂಪತಿ ಮದುವೆ ನಡೆಯೋ ಜಾಗದಲ್ಲಿ ತೆಗೆದುಕೊಂಡು ಬಂದ ನಿಯಮದ ಬಗ್ಗೆ ಸುದ್ದಿ ಹರಿದಾಡಿದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಟೀಂ ಒಂದನ್ನು ಆಯ್ಕೆ ಮಾಡಿದೆ. ಈ ತಂಡ ತಮ್ಮ ಕ್ಯಾಮೆರಾ ಮೂಲಕ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಮಾಡಲಿದೆ. ಈ ಫೋಟೋಗನ್ನು ಎಲ್ಲಿಯೂ ರಿವೀಲ್ ಮಾಡುವುದಿಲ್ಲ ಮತ್ತು ಹಂಚಿಕೊಳ್ಳುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡು ಸಹಿ ಹಾಕಿಸಿಕೊಳ್ಳಲಾಗಿದೆ.
ಇನ್ನು, ವಿಜಯ್ ಮದುವೆಗೆ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರೆ ಎಂದು ವರದಿ ಆಗಿದೆ. ಹೀಗಾಗಿ, ಅವರ್ಯಾರು ಮೊಬೈಲ್ ತರದಂತೆ ಕಠಿಣ ನಿಯಮವನ್ನು ಮಾಡಲಾಗಿದೆ. ಮದುವೆಗೆ ಬರೋ ಅತಿಥಿಗಳು ಮೊಬೈಲ್ ಅನ್ನು ತರುವಂತಿಲ್ಲ. ಮೊಬೈಲ್ ಬಳಕೆ ತಡೆಯಲು ಚೆಕಿಂಗ್ ಇರುತ್ತದೆ. ವಿವಾಹ ನಡೆಯೋ ಜಾಗದಲ್ಲಿಯೂ ಈ ಬಗ್ಗೆ ಕಣ್ಣಿಡಲು ಜನರನ್ನು ನೇಮಿಸಲಾಗಿದೆ.
ಈ ರೀತಿಯ ಫೋಟೋ-ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳುವುದು ರಶ್ಮಿಕಾ-ವಿಜಯ್ಗೆ ಇರೋ ದೊಡ್ಡ ಚಾಲೆಂಜ್. ಈ ಮೊದಲು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ದಂಪತಿ, ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಕೂಡ ಮೊಬೈಲ್ ತರದಂತೆ ನಿಯಮ ತಂದಿದ್ದರು. ಆ ತಂತ್ರ ಕೆಲಸ ಮಾಡಿತ್ತು. ಈಗ ರಶ್ಮಿಕಾ-ವಿಜಯ್ ಕೂಡ ಇದೇ ಪಾಲಿಸಿ ಅಳವಡಿಸಿಕೊಳ್ಳುತ್ತಿದ್ದಾರೆ.
ವಿಜಯ್ ಹಾಗೂ ರಶ್ಮಿಕಾ ಅವರ ವಿವಾಹ ಆಮಂತ್ರಣ ಪತ್ರ ವೈರಲ್ ಆಗಿದೆ. ಇದರಲ್ಲಿ ವಿವಾಹ ದಿನಾಂಕ ಫೆಬ್ರವರಿ 26 ಎಂದಿದೆ. ಮಾರ್ಚ್ 4ರಂದು ಹೈದರಾಬಾದ್ನ್ಲಿ ಆರತಕ್ಷತೆ ಇದೆ ಎಂಬ ಮಾಹಿತಿಯೂ ರಿವೀಲ್ ಆಗಿದೆ.
For More Updates Join our WhatsApp Group :




