ಜೈಪುರ: ಸಾಮಾನ್ಯವಾಗಿ ಹಾವು ಕಂಡರೆ ಜನರು ಭಯದಿಂದ ಓಡಿ ಹೋಗುತ್ತಾರೆ. ಆದರೆ ರಾಜಸ್ಥಾನದಲ್ಲಿ ಹಾವುಗಳನ್ನು ಕೈಯಲ್ಲಿ ಹಿಡಿದು ಕುಣಿಯುವ ವಿಚಿತ್ರ ಆಚರಣೆ ನಡೆದಿದೆ.
ಚುರುವಿನ ಗೋಗಾಜಿ ದೇವಸ್ಥಾನದಲ್ಲಿ ತೇಜ ದಶಮಿಯಂದು ಈ ಘಟನೆ ನಡೆದಿದೆ.ಗ್ರಾಮಸ್ಥರು ಜೀವಂತ ಹಾವುಗಳನ್ನು ಕೈಯಲ್ಲಿ ಹಿಡಿದು ಆಟಿಕೆಗಳಂತೆ ತಿರುಗಾಡುತ್ತಾ ನೃತ್ಯ ಮಾಡುತ್ತಿರುವುದು ದೃಶ್ಯಗಳಲ್ಲಿ ಕಾಣಿಸುತ್ತದೆ.ಸೆಪ್ಟೆಂಬರ್ 2ರಂದು ನಡೆದ ಜಾನಪದ ಜಾತ್ರೆಯ ಸಮಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜನರ ಪ್ರತಿಕ್ರಿಯೆ: ವಿಡಿಯೋ ವೈರಲ್ ಆದ ನಂತರ ಅನೇಕರು ಬೆಚ್ಚಿಬಿದ್ದರೆ, ಕೆಲವರು ಇದನ್ನು ಸ್ಥಳೀಯ ಪರಂಪರೆಯ ಭಾಗ ಎಂದು ಹೇಳುತ್ತಿದ್ದಾರೆ. ಹಾವುಗಳನ್ನು ಹಿಡಿದು ಆಟವಾಡುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
For More Updates Join our WhatsApp Group :