ಡೈನೋಸರ್ ಮೊಟ್ಟೆಗಳನ್ನು ಶತಮಾನಗಳಿಂದ ದೇವರೆಂದು ಪೂಜಿಸುತ್ತಿದ್ದ ಗ್ರಾಮಸ್ಥರು!

ಧಾರ್(ಮಧ್ಯಪ್ರದೇಶ) : ಇಲ್ಲಿನ ಗ್ರಾಮಸ್ಥರು ದೇವರೆಂದು ಪೂಜೆ ಮಾಡುತ್ತಿದ್ದ ದುಂಡಾಕಾರದ ಕಲ್ಲನ್ನು ವಿಜ್ಞಾನಿಗಳು ಲಕ್ಷಾಂತರ ವರ್ಷಗಳ ಹಿಂದೆ ವಾಸವಿದ್ದ ಡೈನೋಸಾರ್ ಮೊಟ್ಟೆಗಳೆಂದು ಪತ್ತೆ ಹಚ್ಚಿದ್ದಾರೆ.

ಇಲ್ಲಿನ ನರ್ಮದಾ ಕಣಿವೆಯ ಅಂಚಿನಲ್ಲಿರುವ ಕುಕ್ಷಿ ತಹಸಿಲ್ನ ಪದಲಿಯಾ ಗ್ರಾಮದ ಜನರು ಈ ದುಂಡಾಕಾರದ ಕಲ್ಲನ್ನು ದೇವರೆಂದು ಶತಮಾನಗಳಿಂದ ಪೂಜಿಸುತ್ತಾ ಬರುತ್ತಿದ್ದಾರೆ. ಇದೀಗ ಸ್ಥಳಕ್ಕೆ ವಿಜ್ಞಾನಿಗಳು ಭೇಟಿ ನೀಡಿ ಇವುಗಳು ಕಲ್ಲುಗಳಲ್ಲ, ಡೈನೋಸರ್ ಮೊಟ್ಟೆಗಳೆಂದು ಖಚಿತಪಡಿಸಿದ್ದಾರೆ.

ಯುವಕ

ನರ್ಮದಾ ಕಣಿವೆಯ ಈ ಪ್ರದೇಶವು ಡೈನೋಸರ್ನೊಂದಿಗೆ ಸಂಬಂಧವನ್ನು ಹೊಂದಿದೆ. ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಇಲ್ಲಿ ಡೈನೋಸರ್ಗಳು ನೆಲೆಸಿದ್ದವು. ಕಳೆದ ಕೆಲವು ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ನೂರಾರು ಮೊಟ್ಟೆಗಳನ್ನು ಪತ್ತೆ ಹಚ್ಚಿದ್ದಾರೆ. ಕಣಿವೆ ಪ್ರದೇಶದ ಗ್ರಾಮಸ್ಥರು ಇಲ್ಲಿ ಕೃಷಿ ಚಟುವಟಿಕೆ ನಡೆಸುವಾಗ ಸಾಮಾನ್ಯವಾಗಿ ದುಂಡಗಿನ ಕಲ್ಲುಗಳು ಲಭ್ಯವಾಗುತ್ತದೆ. ಈ ಕಲ್ಲುಗಳನ್ನು ದೇವೆರೆಂದು ಇಲ್ಲಿನ ಗ್ರಾಮಸ್ಥರು ಶತಮಾನಗಳಿಂದ ಪೂಜಿಸುತ್ತಾ ಬರುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೆಸ್ತಾ ಮಂಡ್ಲೋಯ್, ನಾವು ಈ ದುಂಡಗಿನ ಕಲ್ಲನ್ನು ದೇವರೆಂದು ಪೂಜಿಸುತ್ತೇವೆ. ಈ ಕಲ್ಲನ್ನು ನಾವು ಹೊಲದ ಭೈರವ ಎಂದು ಪೂಜಿಸುತ್ತೇವೆ. ಈ ಸಂಪ್ರದಾಯ ನಮ್ಮ ಪೂರ್ವಜರ ಕಾಲದಿಂದ ನಡೆದುಕೊಂಡು ಬಂದಿದೆ. ಇಂದಿಗೂ ಇಲ್ಲಿನ ಗ್ರಾಮಸ್ಥರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು. ಈ ದೇವರು ನಮ್ಮ ಹೊಲ ಮತ್ತು ಜಾನುವಾರುಗಳನ್ನು ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಈ ಹಿಂದೆ ಇಲ್ಲಿನ ಪ್ರದೇಶದಲ್ಲಿ ಸುಮಾರು 256 ಮೊಟ್ಟೆಗಳು ಪತ್ತೆಯಾಗಿದ್ದವು. ಈ ಮೊಟ್ಟೆಗಳು ಸುಮಾರು 15 ಸೆಂ. ನಿಂದ 17 ಸೆಂಮೀವರೆಗೆ ಗಾತ್ರವನ್ನು ಹೊಂದಿರುತ್ತದೆ. ಈ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *