ಕರ್ನಾಟಕ ಕ್ರೀಡಾಕೂಟ 2025-26
ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ಕೆಎಸ್ ಪಿ ತಂಡ ಪುರುಷರ ವಾಲಿಬಾಲ್ ವಿಭಾಗದಲ್ಲಿ ಚಾಂಪಿಯನ್ ಆಗಿದೆ.
ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡ 25-18, 25-18, 25-19 ಸೆಟ್ ಗಳಿಂದ ಎಸ್ ಡಿಎಂ ಉಜಿರೆ ತಂಡವನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು.ಕರ್ನಾಟಕ ರಾಜ್ಯ ಪೊಲೀಸ್ ತಂಡದ ಎದುರು ಎಸ್ ಡಿಎಂ ಉಜಿರೆ ತಂಡ ಸುಲಭವಾಗಿ ಶರಣಾಯಿತು. ಕೆಎಸ್ ಪಿ ಪರ ಗಣೇಶ್ ಗೌಡ, ಸಚಿನ್ ಮತ್ತು ನವೀನ್ ಕಾಂಚನ್ ಅದ್ಬುತ ಪ್ರದರ್ಶನ ನೀಡಿದರು.
ತುಮಕೂರು ತಂಡ ವಾಕ್ ಒವರ್ ನೀಡಿದ್ದರಿಂದ ಕೊಪ್ಪಳ ತಂಡ 3ನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದುಕೊಂಡಿತು.
For More Updates Join our WhatsApp Group :




