ಭಾಗ್ಯ, ಭವಿಷ್ಯ ಕಾಣುತ್ತೆ ಎಂದ ಮೋದಿ.
ನವದೆಹಲಿ : ಎಐ ಎಂದರೆ ಕೆಲವರಿಗೆ ಭಯ ಕೆಲವರು ಅದು ನಮ್ಮ ಭಾಗ್ಯವೆಂದು ಪರಿಗಣಿಸುತ್ತಾರೆ. ನಾನು ಕೂಡ ಗರ್ವದಿಂದ ಹೇಳುತ್ತೇನೆ, ನಮಗೆ ಎಐ ಎಂದರೆ ಭಯ ಇಲ್ಲ, ಭಾಗ್ಯ ಕಾಣುತ್ತೆ, ಭಾರತದ ಭವಿಷ್ಯ ಕಾಣುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ನವದೆಹಲಿಯ ಭಾರತ್ ಮಂಪಟದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ.
ಮೂರು ಭಾರತೀಯ ಕಂಪನಿಗಳು ಎಐ ಮಾಡೆಲ್ ಆ್ಯಪ್ ಲಾಂಚ್ ಮಾಡಿದ್ದಾರೆ. ಈ ಮಾಡೆಲ್ಗಳು ಯುವಕರ ಟ್ಯಾಲೆಂಟ್ ಏನಿದೆ ಎಂಬುದನ್ನು ತೋರಿಸುತ್ತದೆ. ಕೆಲವರು ಎಐ ಮುಂದಿಟ್ಟುಕೊಂಡು ಜಗತ್ತನ್ನೇ ಆಳುವ ಮನಸ್ಥಿತಿಯಲ್ಲಿದ್ದಾರೆ. ಆದರೆ ಭಾರತ ಅದನ್ನು ಭವಿಷ್ಯವೆಂದಷ್ಟೇ ಪರಿಗಣಿಸುತ್ತಿದೆ ಎಂದರು.
ಯಂತ್ರ ಕಲಿಕೆಯಿಂದ ಕಲಿಕೆ ಯಂತ್ರದವರೆಗೆ, ಅಂದರೆ ಯಂತ್ರವನ್ನು ಮನುಷ್ಯನೇ ನಡೆಸಬೇಕು. ನಾವು ದೊಡ್ಡ ದೃಷ್ಟಿಕೋನವನ್ನು ಹೊಂದಿರಬೇಕು ಮತ್ತು ಅಷ್ಟೇ ದೊಡ್ಡ ಜವಾಬ್ದಾರಿಯನ್ನು ಹೊರಬೇಕು. ಭವಿಷ್ಯದ ಪೀಳಿಗೆಗೆ ನಾವು ಯಾವ ರೀತಿಯ AI ಅನ್ನು ಬಿಟ್ಟುಬಿಡುತ್ತೇವೆ ಎಂಬುದರ ಬಗ್ಗೆಯೂ ನಾವು ಕಾಳಜಿ ವಹಿಸಬೇಕಾಗಿದೆ.
ಆದ್ದರಿಂದ, ಇಂದಿನ ನಿಜವಾದ ಪ್ರಶ್ನೆಯೆಂದರೆ ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಏನು ಮಾಡಬಹುದು ಎಂಬುದು ಅಲ್ಲ, ಆದರೆ ವರ್ತಮಾನದಲ್ಲಿ ನಾವು ಅದನ್ನು ಬಳಸಿಕೊಂಡು ಏನು ಮಾಡುತ್ತೇವೆ ಎಂಬುದು ನಿಜವಾದ ಪ್ರಶ್ನೆ. ಅತ್ಯಂತ ಶಕ್ತಿಶಾಲಿ ಉದಾಹರಣೆಯೆಂದರೆ ಪರಮಾಣು ಶಕ್ತಿ. ಅದರ ವಿನಾಶ ಮತ್ತು ಅದರ ಸಕಾರಾತ್ಮಕ ಕೊಡುಗೆಯನ್ನು ನಾವು ನೋಡಿದ್ದೇವೆ. ಎಐ ಕೂಡ ಒಂದು ಪರಿವರ್ತಕ ಶಕ್ತಿಯಾಗಿದೆ.
ಪಾರದರ್ಶಕತೆ ಮುಖ್ಯ
ಎಐಯಲ್ಲಿ ಅಥೆಂಟಿಸಿಟಿ ಹಾಗೂ ಪಾರದರ್ಶಕತೆ ಎಂಬುದು ಮುಖ್ಯ, ಯಾವುದು ಎಐ ವಿಡಿಯೋ ಯಾವುದು ಬೇರೆ ವಿಡಿಯೋ ಎಂದು ತಿಳಿಯಲು ವಾಟರ್ ಮಾರ್ಕ್ ಇರುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
For More Updates Join our WhatsApp Group :




