ಶಾಸಕ ಬಾಲಕೃಷ್ಣ ಎದುರೇ ರೈತ ಮಹಿಳೆಯರ ಆಕ್ರೋಶ
ರಾಮನಗರ : ಜಿಲ್ಲೆಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬಿಡದಿ ಬಳಿಯ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆ ಕುರಿತು ನಡೆದ ಸಭೆಯಲ್ಲಿ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ರೈತರೊಂದಿಗೆ ಮಾತುಕತೆ ನಡೆಸಿದರು. ಸಭೆಯು 9 ಕಂದಾಯ ಗ್ರಾಮಗಳ 26 ಹಳ್ಳಿಗಳ ರೈತರ ಅರ್ಜಿ ಸ್ವೀಕಾರಕ್ಕೂ ಅವಕಾಶ ನೀಡಿತ್ತು. ಸಭೆಯ ಆರಂಭದಲ್ಲಿ ಶಾಸಕ ಬಾಲಕೃಷ್ಣ ಅವರು, ಭೂಸ್ವಾಧೀನ ಪ್ರಕ್ರಿಯೆಯು 15-20 ವರ್ಷಗಳ ಹಿಂದೆ ಆಗಿದ್ದು, ಈಗ ದಾಖಲಾತಿಗಳನ್ನು ಸರಿಪಡಿಸುವ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಸರಕಾರವು ಈ ದರವನ್ನು ನಿಗದಿಪಡಿಸಿಲ್ಲ. ಎಂದು ಹೇಳಿದ್ದಾರೆ.
ಈ ವೇಳೆ ಸಭೆಯಲ್ಲಿದ್ದ ರೈತ ಮಹಿಳೆಯರು, ಭೂಸ್ವಾಧೀನ ಪ್ರಕ್ರಿಯೆ ಮತ್ತು ಸರಕಾರ ನಿಗದಿಪಡಿಸಿದ ಪರಿಹಾರ ದರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ, ಈ ಯೋಜನೆಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದರು. “ಸರ್ಕಾರಕ್ಕೆ ಧಿಕ್ಕಾರ”, “ನ್ಯಾಯ ಬೇಕು, ಇದು ನಮ್ಮ ಹಕ್ಕು”, “ರೈತರಿಗೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗಿದರು. ಭೂಮಿ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಪ್ರಶ್ನಿಸಿ, ತಮ್ಮ ಅರ್ಜಿಯನ್ನು ಅಂಗೀಕರಿಸಬೇಕು ಮತ್ತು ತಮ್ಮ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
For More Updates Join our WhatsApp Group :




