ಬಿಜೆಪಿಯಿಂದ ಪಶ್ಚಿಮ ಬಂಗಾಳ ಬಂದ್ : ಪ್ರತಿಭಟನಾಕಾರರ ಬಂಧನ

ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಶಾಂತಿಪುರ ನಿಲ್ದಾಣದಲ್ಲಿ ರೈಲು ಹಳಿಯಲ್ಲಿ ರೈಲು ತಡೆದರು

ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಶಾಂತಿಪುರ ನಿಲ್ದಾಣದಲ್ಲಿ ರೈಲು ಹಳಿಯಲ್ಲಿ ರೈಲು ತಡೆದರು

ಕೋಲ್ಕತ್ತಾ: ಆರ್ ಜಿ ಕಾರ್ ಆಸ್ಪತ್ರೆಯ ಕಿರಿಯ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ರಾಜ್ಯ ಸಚಿವಾಲಯಕ್ಕೆ ನಡೆದ ಮೆರವಣಿಗೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರ ಕ್ರಮವನ್ನು ವಿರೋಧಿಸಿ ಬಿಜೆಪಿ ಕರೆ ನೀಡಿರುವ 12 ಗಂಟೆಗಳ ಬಂದ್‌ನಿಂದಾಗಿ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರಿದೆ.

ರಾಜ್ಯ ರಾಜಧಾನಿ ಕೋಲ್ಕತ್ತಾದಲ್ಲಿ, ಇಂದು ಬೆಳಗ್ಗೆ ರಸ್ತೆಗಳಲ್ಲಿನ ಕಡಿಮೆ ಸಂಖ್ಯೆಯ ಬಸ್‌ಗಳು, ಆಟೋ-ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಸಂಚರಿಸುತ್ತಿವೆ. ಮಾರುಕಟ್ಟೆಗಳು ಮತ್ತು ಅಂಗಡಿಗಳು ಎಂದಿನಂತೆ ತೆರೆದಿದ್ದರೂ ಸಹ, ಖಾಸಗಿ ವಾಹನಗಳ ಸಂಚಾರ ಗಣನೀಯವಾಗಿ ಕಡಿಮೆಯಾಗಿದೆ.

ಶಾಲೆಗಳು ಮತ್ತು ಕಾಲೇಜುಗಳು ತೆರೆದಿದ್ದವು, ಆದರೆ ಹೆಚ್ಚಿನ ಖಾಸಗಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆಯಿತ್ತು, ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಅನೇಕ ಸಂಸ್ಥೆಗಳು ಸೂಚಿಸಿವೆ.

ಬಿಜೆಪಿ ಕಾರ್ಯಕರ್ತರು ಉತ್ತರ 24 ಪರಗಣದ ಬೊಂಗಾವ್ ನಿಲ್ದಾಣ, ದಕ್ಷಿಣ 24 ಪರಗಣಗಳ ಗೋಚರಣ್ ನಿಲ್ದಾಣ ಮತ್ತು ಮುರ್ಷಿದಾಬಾದ್ ನಿಲ್ದಾಣದಲ್ಲಿ ಬಂದ್‌ಗೆ ಬೆಂಬಲ ಸೂಚಿಸಿದರು. ಬಿಜೆಪಿ ಬೆಂಬಲಿಗರು ಮತ್ತು ಟಿಎಂಸಿ ಕಾರ್ಯಕರ್ತರು ಮುಖಾಮುಖಿಯಾದ ಕಾರಣ ಉತ್ತರ 24 ಪರಗಣದ ಬ್ಯಾರಕ್‌ಪೋರ್ ನಿಲ್ದಾಣದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಹೂಗ್ಲಿ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಸ್ಥಳೀಯ ರೈಲಿಗೆ ಅಡ್ಡಿಪಡಿಸಿದರು.

ಪುರ್ಬಾ ಮೇದಿನಿಪುರ್ ಜಿಲ್ಲೆಯ ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಧರಣಿ ನಡೆಸಿ ಸಂಚಾರಕ್ಕೆ ಅಡ್ಡಿಪಡಿಸಿದರು. ಮಾಲ್ಡಾದಲ್ಲಿ, ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಕಾದಾಡುತ್ತಿದ್ದ ಗುಂಪುಗಳನ್ನು ಚದುರಿಸಲು ಪೊಲೀಸರು ಕ್ರಮಕೈಗೊಂಡರು. ಬಂಕುರಾ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *