ಶಿವರಾಜ್ ಕುಮಾರ್, ಭಾರತದ ಅತ್ಯಂತ ಬ್ಯುಸಿ ಸೂಪರ್ ಸ್ಟಾರ್. ಒಬ್ಬ ಸೂಪರ್ ಸ್ಟಾರ್ ನಟನಾಗಿ ಇಷ್ಟೋಂದು ಬ್ಯುಸಿ ಇರುವ ನಟರು ಇಬ್ಬರೇ, ಬಾಲಿವುಡ್ನ ಅಕ್ಷಯ್ ಕುಮಾರ್, ಸ್ಯಾಂಡಲ್ವುಡ್ನ ಶಿವರಾಜ್ ಕುಮಾರ್. ಯಾವಾಗಲೂ ಶಿವಣ್ಣ ಕೈಯಲ್ಲಿ ಸದಾ ಕನಿಷ್ಟ ಆರು ಸಿನಿಮಾಗಳಾದರೂ ಇರುತ್ತವೆ. 63ರ ವಯಸ್ಸಿನಲ್ಲೂ ಇಷ್ಟು ಬೇಡಿಕೆ ಇರುವ ನಟ ಭಾರತದಲ್ಲಿ ಇನ್ನೊಬ್ಬರಿಲ್ಲ.
ಇಂದು ಶಿವರಾಜ್ ಕುಮಾರ್ ಹುಟ್ಟುಹಬ್ಬ. ಶಿವಣ್ಣನ ಹುಟ್ಟುಹಬ್ಬ ಸಹಜವಾಗಿಯೇ ಅವರ ಅಭಿಮಾನಿಗಳು, ಕುಟುಂಬದವರಿಗೆ ಹಬ್ಬ. ಈ ದಿನ ಮತ್ತೊಂದು ವಿಶೇಷವೆಂದರೆ ಶಿವಣ್ಣನ ಹಲವಾರು ಹೊಸ ಸಿನಿಮಾಗಳು ಇಂದು ಘೋಷಣೆ ಆಗುತ್ತವೆ.

ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಖುಷಿ ಆಗುವ ರೀತಿ ಕೆಲ ಸಿನಿಮಾಗಳು ಘೋಷಣೆ ಆಗಿವೆ. ಅದರಲ್ಲಿ ಪ್ರಮುಖವಾದುದು ‘ಟಗರು 2’. ಶಿವರಾಜ್ ಕುಮಾರ್ ವೃತ್ತಿ ಜೀವನದ ಅಪರೂಪದ, ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು ‘ಟಗರು’. ಇದೀಗ ಈ ಸಿನಿಮಾದ ಸೀಕ್ವೆಲ್ ಅನ್ನು ಶಿವಣ್ಣನ ಹುಟ್ಟುಹಬ್ಬದಂದು ಘೋಷಿಸಲಾಗಿದೆ. ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಲಿದ್ದಾರೆ.
“ಶ್ರಿತಿಕ್ ಮೋಷನ್ ಪಿಕ್ಚರ್ಸ್” ಬ್ಯಾನರ್ ಮೂಲಕ ಸಾಗರ್ ಶಾ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮಾ ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಶಿವಣ್ಣ ನಾಯಕ. ಸಿನಿಮಾದಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರೊಬ್ಬರು ಶಿವಣ್ಣನಿಗಾಗಿ ಹಳ್ಳಿ ಸಿನಿಮಾ ಒಂದರ ಕತೆ ಹೆಣೆದಿದ್ದು, ಸಿನಿಮಾ ಶಿವಣ್ಣನಿಗೆ ಓಕೆ ಆಗಿದೆಯಂತೆ. ಸಿನಿಮಾದ ಚಿತ್ರೀಕರಣ ಆದಷ್ಟು ಶೀಘ್ರದಲ್ಲೇ ಪ್ರಾರಂಭ ಆಗಲಿದೆ. ಈ ಸಿನಿಮಾದ ಅಧಿಕೃತ ಘೋಷಣೆಯನ್ನು ಸರಳವಾಗಿ ನಿರ್ದೇಶಕ ಎನ್ ಮಹಾರಾಜನ್ ಮಾಡಿದ್ದಾರೆ.
ಇನ್ನು ಶಿವಣ್ಣ ಕೈಯಲ್ಲಿ ಪ್ರಸ್ತುತ ಕನ್ನಡದ ಸಿನಿಮಾಗಳಾದ ‘45’, ಇನ್ನೂ ಹೆಸರಿಡದ 131ನೇ ಸಿನಿಮಾ, ಆನಂದ್, ಆಪರೇಷನ್ ಡ್ರೀಮ್ ಥಿಯೇಟರ್ ಪರ ಭಾಷೆಯ ‘ಪೆದ್ದಿ’, ‘ಜೈಲರ್ 2’ ಸಿನಿಮಾಗಳು ಇದ್ದು, ಇವುಗಳ ಚಿತ್ರೀಕರಣ ಚಾಲ್ತಿಯಲ್ಲಿದೆ.
ಇನ್ನು ಶಿವಣ್ಣ ಕೈಯಲ್ಲಿ ಪ್ರಸ್ತುತ ಕನ್ನಡದ ಸಿನಿಮಾಗಳಾದ ‘45’, ಇನ್ನೂ ಹೆಸರಿಡದ 131ನೇ ಸಿನಿಮಾ, ಆನಂದ್, ಆಪರೇಷನ್ ಡ್ರೀಮ್ ಥಿಯೇಟರ್ ಪರ ಭಾಷೆಯ ‘ಪೆದ್ದಿ’, ‘ಜೈಲರ್ 2’ ಸಿನಿಮಾಗಳು ಇದ್ದು, ಇವುಗಳ ಚಿತ್ರೀಕರಣ ಚಾಲ್ತಿಯಲ್ಲಿದೆ.