- ಮಂಜುನಾಥ್ ಎಚ್ ಆರ್, ಹಿಂಡಿಸಿಗೆರೆ
ರಾಜಕೀಯ ಎನ್ನುವುದು ನಿಂತ ನೀರಲ್ಲ ಪರಿವರ್ತನೆಯ ನದಿ. ಒಂದಲ್ಲ ಒಂದು ವಿಚಾರಕ್ಕೆ ಬದಲಾವಣೆಗೆ ಒಗ್ಗಿಕೊಂಡು ಬದಲಾಗುತ್ತಲೇ ಹೋಗುತ್ತದೆ. 1947ರ ರಾಜಕಾರಣಕ್ಕೂ 2024ರ ರಾಜಕಾರಣಕ್ಕೂ ಇರುವಂತಹ ಬದಲಾವಣೆ ಇದಕ್ಕೆ ಸ್ಪಷ್ಟ ಉದಾಹರಣೆ. ರಾಜಕಾರಣವೇನೋ ಬದಲಾಗುತ್ತಿದೆ. ಆದರೆ ರಾಜಕಾರಣಿಗಳು ಬದಲಾಗುತ್ತಿದ್ದಾರೆಯೇ..? ಅವರ ಮನಸ್ಥಿತಿ ಬದಲಾಗುತ್ತಿದೆಯೇ..? ಎಂಬAತಹ ಪ್ರಶ್ನೆಗೆ ಉತ್ತರ ಹುಡುಕುವ ಅಗತ್ಯ ಇಂದಿನ ಕಾಲಘಟ್ಟಕ್ಕೆ ಅತ್ಯಂತ ಅಗತ್ಯವಾಗಿದೆ.
ಇಂತಹ ಮಾತುಗಳು ಈಗ ಯಾಕೆ ಬರುತ್ತಿವೆ ಎಂದರೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳು. ಅದರಲ್ಲೂ ಕುಟುಂಬ ರಾಜಕಾರಣ, ತಮ್ಮ ಮಕ್ಕಳೇ ಬೆಳೆಯಬೇಕು ಎಂಬ ಹುಬ್ಬತನ. ನಮ್ಮವರು ಆಳಬೇಕು ಬೇರೆಯವರು ಆಳಿಸಿಕೊಳ್ಳಬೇಕು ಎಂಬ ಮನಸ್ಥಿತಿ ಬಹುತೇಕ ರಾಜಕಾರಣಿಗಳಲ್ಲಿ ಕಂಡುಬರುವುದು ಸತ್ಯವಾದ ಮಾತಿಗೆ ತೀರ ಹತ್ತಿರವಾಗಿದೆ. ಇವತ್ತಿನ ರಾಜಕಾರಣಿಗಳು ಎಷ್ಟರಮಟ್ಟಿಗೆ ನಿಷ್ಠಾವಂತ ಕಾರ್ಯಕರ್ತರನ್ನು ರಾಜಕೀಯದ ಜೊತೆಗೆ ರಾಜ್ಯ, ದೇಶದ ಪ್ರಗತಿಯ ಬಗ್ಗೆ ಮಾತನಾಡುವ ಮನಸ್ಥಿತಿ ಉಳ್ಳವರನ್ನು ಬೆಳೆಸುತ್ತಿದ್ದಾರೆ. ನಾಯಕರನ್ನಾಗಿ ಮಾಡುತ್ತಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕುಟುಂಬದ ಬಗ್ಗೆ ನಾವೇನು ಹೊಸದಾಗಿ ಮಾತನಾಡುವ ಅಗತ್ಯ ಇಲ್ಲ. ಕುಮಾರಸ್ವಾಮಿ ಆಗಿರಬಹುದು, ಎಚ್ ಡಿ ರೇವಣ್ಣ ಆಗಿರಬಹುದು, ಭವಾನಿ ರೇವಣ್ಣ ಆಗಿರಬಹುದು, ಪ್ರಜ್ವಲ್, ಸೂರಜ್ ಅಷ್ಟೇ ಯಾಕೆ ಅನಿತ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕೂಡ ರಾಜಕೀಯದಲ್ಲಿ ಇದ್ದಾರೆ. ಒಂದು ಪಕ್ಷ ಅವರಿಗಾಗಿಯೇ ಇದೆ ಎಂಬAತೆ ಇದೆ. ಅವರೆಲ್ಲರೂ ಕೂಡ ಇತರೆ ಸಮುದಾಯಗಳನ್ನು, ಕಾರ್ಯಕರ್ತರನ್ನು ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದರೂ ಕುಟುಂಬ ರಾಜಕಾರಣ ಎಂಬ ಅಪವಾದ ಅವರನ್ನು ಇಂದಿಗೂ ಕೂಡ ಬಿಟ್ಟಿಲ್ಲ.
ಇದು ಕೇವಲ ಎಚ್ ಡಿ ದೇವೇಗೌಡರ ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರನಿಗಾಗಿ ರಾಜಕೀಯ ನೆಲೆ ಕಲ್ಪಿಸಿಕೊಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಸಹೋದರ ಡಿ ಕೆ ಸುರೇಶ್, ಸಂಬAಧಿ ಡಾ. ರಂಗನಾಥ್ ಯಾವ ಸ್ಥಾನದಲ್ಲಿ ಇದ್ದರೂ, ಯಾವ ಸ್ಥಾನದಲ್ಲಿ ಇದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಏನು ಇದರಿಂದ ಹೊರತಾಗಿಲ್ಲ. ಅವರ ಇಬ್ಬರು ಮಕ್ಕಳು ಕೂಡ ಬಿಜೆಪಿ ಪಕ್ಷವನ್ನೂ ರೂಲ್ ಮಾಡುತ್ತಿದ್ದಾರೆ. ಇನ್ನೂ ದೇಶದ ವಿಚಾರಕ್ಕೆ ಬಂದರೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಉದಾಹರಣೆಗಳಾಗಿ ಉಳಿಯುತ್ತಾರೆ.
ಇದೆಲ್ಲ ಯಾಕೆ ಈಗ ಮುನ್ನಲೆಗೆ ಬರುತ್ತಿದೆ ಎಂದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮೈಸೂರು ಕೊಡಗು ಲೋಕಸಭಾ ಮಾಜಿ ಸಂಸದ ಪ್ರತಾಪ್ ಸಿಂಹ ಆಡಿರುವ ಮಾತು, ಕೊಟ್ಟಿರುವ ಹೇಳಿಕೆ ಇದೀಗ ರಾಜ್ಯದಲ್ಲಿ ಸಂಚಲವನ್ನು ಉಂಟುಮಾಡುತ್ತಿದೆ. ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಮಹದೇವಪ್ಪ ಸೇರಿ ಬಹುತೇಕ ಎಲ್ಲಾ ರಾಜಕಾರಣಿಗಳಿಗೆ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನ ಬೆಳೆಸುವರು ಯಾರು..? ಎನ್ನುವುದು ಪ್ರತಾಪ್ ಸಿಂಹ ಪ್ರಶ್ನೆ. ಇವರ ಈ ಪ್ರಶ್ನೆಯ ಜೊತೆಗೆ ಉದಾಹರಣೆಯನ್ನು ಕೊಟ್ಟು ಮಾತನಾಡಿರುವುದು ಅವರ ಮಾತಿನ ತೂಕವನ್ನು ಹೆಚ್ಚು ಮಾಡಿದೆ. ಸಿದ್ದರಾಮಯ್ಯ ಆಗಿರಬಹುದು ದೇವೇಗೌಡರು ಆಗಿರಬಹುದು ಮಹದೇವಪ್ಪ ಅಥವಾ ಬಿಎಸ್ ಯಡಿಯೂರಪ್ಪ ಎಲ್ಲರೂ ಕೂಡ ಇದೇ ನೆಲದಿಂದ ಬಂದವರು. ಇವರ ತಂದೆಯವರು ಅಥವಾ ತಾಯಂದಿರು ಇವರಿಗೆ ರಾಜಕೀಯ ಅಡಿಪಾಯವನ್ನು ಹಾಕಿಕೊಟ್ಟವರಲ್ಲ. ಸ್ವಂತ ಪರಿಶ್ರಮದಿಂದ ಹೋರಾಟಗಳನ್ನು ಮಾಡಿ ಅಧಿಕಾರದ ಗದ್ದುಗೆಯನ್ನು ಏರಿದವರು. ಇದೀಗ ಇವರು ತಮ್ಮ ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿರುವುದು ವಿಪರ್ಯಾಸ.
ಕರ್ನಾಟಕ ರಾಜಕಾರಣದಲ್ಲಿ ಅಚ್ಚ ಅಳಿಯದೆ ಉಳಿದ ರಾಜಕಾರಣಿಗಳಲ್ಲಿ ಮೇರು ಭಕ್ತಿಯಲ್ಲಿ ಉಳಿದವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು. ಇವರು ಕೇವಲ ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತ ಆಗದೆ ನಿಷ್ಠಾವಂತ, ಪ್ರತಿಭಾವಂತ, ಯಾರಿಗೆ ಶಕ್ತಿ ಇದೆ ಅಂತಹ ಕಾರ್ಯಕರ್ತರನ್ನ ಗುರುತಿಸಿ ರಾಜಕೀಯವಾಗಿ ಬೆಳೆಸಿದವರು. ಅಂತಹವರ ನೆಲೆಯಲ್ಲಿ ಬೆಳೆದ ರಾಜಕಾರಣಿಗಳೇ ಅವರನ್ನ ದೇವರನ್ನಾಗಿ ಮಾಡಿದರು. ಇಂತಹ ಮನಸ್ಥಿತಿ ಇತ್ತೀಚಿನ ರಾಜಕಾರಣಿಗಳಿಗೆ ಬರಲು ಸಾಧ್ಯವೇ..? ನಿಷ್ಠಾವಂತ ಕಾರ್ಯಕರ್ತರು, ಪ್ರತಿಭಾವಂತ ಕಾರ್ಯಕರ್ತರು, ಉತ್ತಮ ಗುಣಗಳುಳ್ಳ ನಾಯಕರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾ ಪಕ್ಷದಲ್ಲೂ ಇದ್ದಾರೆ. ಅಂತಹವರನ್ನು ಗುರುತಿಸಿ ಮುನ್ನೆಲೆಗೆ ತರುವ ಅಗತ್ಯವಿದೆ.
ವೈದ್ಯರ ಮಗ ವೈದ್ಯರಾಗಲು ಹೇಗೆ ಸಾಧ್ಯವಿಲ್ಲವೋ, ವಕೀಲನ ಮಗ ವಕೀಲನಾಗಲು ಹೇಗೆ ಸಾಧ್ಯವಿಲ್ಲವೋ, ಪೊಲೀಸರ ಮಗ ಪೊಲೀಸ್ ಆಗಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿಯಾಗಿ ಒಬ್ಬ ರಾಜಕಾರಣಿಯ ಮಗ ರಾಜಕಾರಣಿಯಾಗಲು ಸಾಧ್ಯವಿಲ್ಲ. ಈ ಎಲ್ಲಾ ಹುದ್ದೆಗಳನ್ನು ಅಲಂಕರಿಸಬೇಕು ಎಂದರೆ ಅದರದೇ ಆದಂತಹ ನಿಯಮಾವಳಿಗಳನ್ನು, ಗುಣಗಳನ್ನು ಮತ್ತು ಶಿಕ್ಷಣವನ್ನ ಪಡೆದುಕೊಂಡಿರಬೇಕು. ಇಲ್ಲವಾದಲ್ಲಿ ಅವರು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಯೋಗ್ಯರಾಗುವುದಿಲ್ಲ. ಇದನ್ನು ಎಷ್ಟು ರಾಜಕಾರಣಿಗಳು ಅರ್ಥ ಮಾಡಿಕೊಂಡಿದ್ದಾರೆ. ನಾನು ಅಧಿಕಾರ ಅನುಭವುಸುತ್ತಿದ್ದೇನೆ ನನ್ನ ಮಕ್ಕಳು ಅಧಿಕಾರವನ್ನು ಅನುಭವಿಸಬೇಕು, ನಮ್ಮ ಇಡೀ ಪೀಳಿಗೆ ಅಧಿಕಾರವನ್ನು ಪಡೆಯಬೇಕು. ಒಟ್ಟಿನಲ್ಲಿ ಅವರು ಆಳುವಂತವರಾಗಬೇಕು ಉಳಿದವರು ಆಳಿಸಿಕೊಳ್ಳುವವರಾಗಬೇಕು, ಅವನು ಅಧಿಕಾರ ನಡೆಸಲು ನಾಲಾಯಕ್ ಆಗಿದ್ದರೂ ಸರಿ ಎಂಬAತಾಗಿದೆ ಇವತ್ತಿನ ಪರಿಸ್ಥಿತಿ.
ಒಂದು ದೇಶದ ಪ್ರಗತಿ ನಿಂತಿರುವುದು ನಿಷ್ಠಾವಂತ, ಅತ್ಯುತ್ತಮ ಗುಣಗಳ ರಾಜಕಾರಣಿಯಿಂದ. ಯಾಕೆಂದರೆ ಇಡೀ ದೇಶದ ಇಡೀ ರಾಜ್ಯವೇ ಅವರ ಅಧೀನದಲ್ಲಿ ಇರುತ್ತದೆ. ಅವರು ತೆಗೆದುಕೊಳ್ಳುವ ಒಂದು ನಿರ್ಧಾರ ಇಡೀ ದೇಶದ ಪ್ರಗತಿಯ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಹೀಗಾಗಿ ಅಧಿಕಾರ ಎನ್ನುವುದು ಕೇವಲ ವಾರಸುತನವಲ್ಲ ಅದು ಅವರ ಗುಣಗಳಿಂದ ಬರಬೇಕು. ರಾಜಕಾರಣಿಯ ಮಗನಿಗೆ ಉತ್ತಮವಾಗಿ ಆಡಳಿತ ನಡೆಸುವ ಗುಣ ಇದ್ದರೆ ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಅದೇ ಗುಣ ಇಲ್ಲದವನಿಗೆ ಅಧಿಕಾರ ನೀಡಿದರೆ ಆ ದೇಶದ, ರಾಜ್ಯದ ಪ್ರಗತಿಯ ಅಧೋಗತಿಯನ್ನು ತಡೆಯಲು ಕೂಡ ಯಾರಿಂದಲೂ ಸಾಧ್ಯವಾಗುವುದಿಲ್ಲ.
ಇತ್ತೀಚೆಗೆ ನಡೆದಂತಹ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎಷ್ಟು ಜನ ತಮ್ಮ ಸ್ವ ಪ್ರತಿಭೆಯಿಂದ, ಶಕ್ತಿಯಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಅದರಲ್ಲಿ ಎಷ್ಟು ಜನ ಗೆಲುವನ್ನ ಪಡೆದರು. ಇದರಲ್ಲಿ ಸಚಿವರ ಮಕ್ಕಳು ಎಷ್ಟು ಜನರಿದ್ದಾರೆ, ಮಾಜಿ ಶಾಸಕರು, ಸಚಿವರ ಮಕ್ಕಳು ಎಷ್ಟು ಜನ ಇದ್ದಾರೆ. ಇದೆಲ್ಲವೂ ಕೂಡ ನಮಗೆ ನಿಮಗೆ ಹೊಸದು ಎನಿಸುವುದಿಲ್ಲ. ಆದರೆ ರಾಜಕಾರಣಿಗಳ ನಡೆ ಅವರ ಬಿಗಿಯಾದ ಹಿಡಿತ ಎಷ್ಟರಮಟ್ಟಿಗೆ ಸರಿ ಇದನ್ನು ಪಕ್ಷಕ್ಕಾಗಿ ದುಡಿಯುವಂತಹ ನಿಷ್ಠಾವಂತ ಕಾರ್ಯಕರ್ತರು ಮತ್ತು ನಾಯಕರೇ ಆಲೋಚನೆ ಮಾಡಬೇಕು. ಎಲ್ಲಾ ಅರ್ಹತೆ ಇದ್ದು ಮುಂದೆ ಬಾರದ ಅದೆಷ್ಟೋ ಕಾರ್ಯಕರ್ತರು ಮತ್ತು ನಾಯಕರು ಇನ್ನು ಕೂಡ ಪಕ್ಷದ ಬ್ಯಾನರ್ ಕಟ್ಟುತ್ತಲೆ ಇದ್ದಾರೆ. ಅವರಿಗೆ ಜೈಕಾರ ಹಾಕುತ್ತಲೆ ಇದ್ದಾರೆ. ನಿನ್ನೆ ಮೊನ್ನೆ ರಾಜಕೀಯಕ್ಕೆ ಇಳಿದ ಸಚಿವರು, ಶಾಸಕರು, ರಾಜಕಾರಣಿಗಳ ಮಕ್ಕಳು ಉನ್ನತ ಹುದ್ದೆ, ಶಾಸಕ, ಸಂಸದನಾಗಿ ಆಯ್ಕೆಯಾಗುತ್ತಿದ್ದಾರೆ. ಇನ್ನು ಮೀಸೆ ಚಿಗುರದ ಹುಡುಗ ಈ ರಾಜ್ಯದಲ್ಲಿ ಸಂಸದನಾಗುತ್ತಾನೆ ಎಂದರೆ. ಅವರಲ್ಲಿರುವ ರಾಜಕೀಯದ ಶಕ್ತಿ, ಹಿಡಿತ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ಸ್ವ ಪಕ್ಷದವರೇ ಅರ್ಥಮಾಡಿಕೊಳ್ಳಬೇಕು.
ಒಟ್ಟಾರೆಯಾಗಿ ಕಷ್ಟಪಟ್ಟು ಹೋರಾಟ ಮಾಡಿ ಅಧಿಕಾರದ ಗದ್ದುಗೆ ಏರಿರುವ ಇಂದಿನ ರಾಜಕಾರಣಿಗಳು ತಮ್ಮ ಪುತ್ರ ವ್ಯಾಮೋಹವನ್ನು ಬಿಟ್ಟು ಉತ್ತಮ ಗುಣ ಇರುವ, ಅಧಿಕಾರ ನಡೆಸುವ ನಾಯಕರನ್ನು ಬೆಳೆಸುವ ಗುಣ ಜನ ನಾಯಕರಿಗೆ ಬರಬೇಕಾಗಿದೆ. ಆಗ ಮಾತ್ರ ರಾಜಕೀಯದ ನೆಪೋಟಿಸಂ ಎಂಬ ಬಿಗಿಯಾದ ಹಿಡಿತ ಸಡಿಲವಾಗಿ ದೇಶದ ಮತ್ತು ರಾಜ್ಯದ ಪ್ರಗತಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ ಅಧಿಕಾರದ ಹಂಚಿಕೆ ವಿಕೆಂದ್ರಿಕರಣ ಆಗಬೇಕಿದೆ.