ಒಣ ಹಣ್ಣುಗಳು ಕೇವಲ ರುಚಿಕರವಾಗಿರದೆ, ಆರೋಗ್ಯಕ್ಕೂ ಅಮೂಲ್ಯವಾದ ಪ್ರಯೋಜನಗಳನ್ನು ನೀಡುತ್ತವೆ. ಪ್ರತಿಯೊಂದು ಡ್ರೈ ಫ್ರೂಟ್ಸ್ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿದ್ದು, ದೇಹದ ವಿವಿಧ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿ. ಪೌಷ್ಟಿಕ ತಜ್ಞೆ ದೀಪ್ಶಿಖಾ ಜೈನ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಯಾವ ಡ್ರೈ ಫ್ರೂಟ್ಸ್ ಯಾವ ಸಮಸ್ಯೆಗೆ ಪರಿಹಾರ ನೀಡುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಮಸ್ಯೆಗಳಿಗೆ ಡ್ರೈ ಫ್ರೂಟ್ಸ್ ಪರಿಹಾರ
ಆಯಾಸ ಮತ್ತು ದೌರ್ಬಲ್ಯ → ಖರ್ಜೂರ ನೈಸರ್ಗಿಕ ಸಕ್ಕರೆ ಹಾಗೂ ಅಗತ್ಯ ಖನಿಜಗಳಿಂದ ಸಮೃದ್ಧವಾಗಿರುವ ಖರ್ಜೂರ ಶಕ್ತಿದಾಯಕ. ದಿನವಿಡೀ ಕೆಲಸ ಮಾಡಲು ಅಗತ್ಯವಿರುವ ಶಕ್ತಿಯನ್ನು ಪೂರೈಸುತ್ತದೆ.
ಮೆದುಳಿನ ಆರೋಗ್ಯ → ಬೆರಿಹಣ್ಣುಗಳು ಇದರಲ್ಲಿ ಇರುವ ಆಂಥೋಸಯಾನಿನ್ಗಳು ಮೆದುಳಿನ ಕೋಶಗಳನ್ನು ಬಲಪಡಿಸುತ್ತವೆ. ಸ್ಮರಣಶಕ್ತಿ ಹೆಚ್ಚಿಸಲು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸಹಾಯಕ.
ಮೂತ್ರನಾಳದ ಸೋಂಕು (UTI) ತಡೆ → ಕ್ರ್ಯಾನ್ಬೆರಿಗಳು: ನೈಸರ್ಗಿಕ ಅಂಶಗಳು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತವೆ. ಯುಟಿಐ ಲಕ್ಷಣಗಳನ್ನು ತಗ್ಗಿಸಿ ಸೋಂಕು ತಡೆಯಲು ಸಹಕಾರಿ.
ಮಲಬದ್ಧತೆ ಪರಿಹಾರ → ಒಣದ್ರಾಕ್ಷಿ: ಫೈಬರ್ ಸಮೃದ್ಧವಾಗಿರುವುದರಿಂದ ಜೀರ್ಣಾಂಗವನ್ನು ಬಲಪಡಿಸಿ ಮಲಬದ್ಧತೆ ನಿವಾರಿಸುತ್ತದೆ.
ಕರುಳಿನ ಆರೋಗ್ಯ → ಅಂಜೂರ: ಪ್ರಿಬಯೋಟಿಕ್ಸ್ ಮತ್ತು ಫೈಬರ್ ಹೊಂದಿರುವ ಅಂಜೂರ ಜೀರ್ಣಕ್ರಿಯೆ ಸುಧಾರಣೆ ಜೊತೆಗೆ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
For More Updates Join our WhatsApp Group :