ಉತ್ತರ ಪ್ರದೇಶ : ಕನ್ವರ್ ಯಾತ್ರೆಗೆ ಹೊರಟ ವ್ಯಕ್ತಿಯನ್ನು ತಡೆದು ನಿಲ್ಲಿಸಿ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ. ಐದು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಜಿಲ್ಲೆಯ ರಾಮಲಾ ಪೊಲೀಸ್ ಠಾಣೆ ಪ್ರದೇಶದ ಕಂದಾರ ಗ್ರಾಮದ ನಿವಾಸಿ ಸನ್ನಿ ಎಂದು ಗುರುತಿಸಲಾಗಿದೆ.
ಮೃತ ಸನ್ನಿ ಅವರ ಪತ್ನಿ ಅಂಕಿತಾ ಅಯ್ಯೂಬ್ ಎಂಬ ಯುವಕನೊಂದಿಗೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಅಂಕಿತಾ ಅವರು ಫೋನ್ನಲ್ಲಿ ಅಪರಿಚಿತರೊಂದಿಗೆ ಮಾತನಾಡುವಾಗ ಸನ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಆಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಇದಾದ ಬಳಿಕ ಸನ್ನಿ ಪತ್ನಿ ಅಂಕಿತಾ ತನ್ನ ತಾಯಿಯ ಮನೆಗೆ ಹೋಗಿದ್ದಳು. ಮತ್ತೊಂದೆಡೆ ಸನ್ನಿ ಕುಟುಂಬದವರ ಪ್ರಕಾರ, ಜುಲೈ 22ರಂದು ಸನ್ನಿ ಕನ್ವರ್ ಯಾತ್ರೆಗೆ ಹೊರಟಿದ್ದರು. ದೋಘಾಟ್ ಪ್ರದೇಶದ ಕನ್ವರ್ ಮಾರ್ಗವನ್ನು ತಲುಪಿದಾಗ ಅವನ ಅತ್ತೆ-ಮಾವನ ಕಡೆಯ ಜನರು ಮತ್ತು ಹೆಂಡತಿಯ ಪ್ರಿಯಕರ ಅಯ್ಯೂಬ್ ಅಲ್ಲಿಗೆ ಬಂದು ತನ್ನೊಂದಿಗೆ ಕರೆದುಕೊಂಡು ಹೋದರು.
ನಂತರ ಅಯ್ಯೂಬ್ ತನ್ನ ಹೆಂಡತಿ ಮತ್ತು ಅತ್ತೆಯ ಮುಂದೆ ಸನ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಯಾರೋ ಈ ಬಗ್ಗೆ ಸನ್ನಿ ಕುಟುಂಬಕ್ಕೆ ಮಾಹಿತಿ ನೀಡಿದರು, ನಂತರ ಕುಟುಂಬವು ಸ್ಥಳಕ್ಕೆ ತಲುಪಿ ಸನ್ನಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಉನ್ನತ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸನ್ನಿಯ ದೇಹ ಶೇ. 80 ರಷ್ಟು ಸುಟ್ಟು ಹೋಗಿತ್ತು. ಐದು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ನಂತರ, ಸನ್ನಿ ಕೊನೆಯುಸಿರೆಳೆದಿದ್ದಾರೆ. ಕುಟುಂಬವು ಸನ್ನಿಯ ಶವದೊಂದಿಗೆ ಪೊಲೀಸ್ ಠಾಣೆಗೆ ತಲುಪಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು. ನಂತರ ಅವರು ಶವದೊಂದಿಗೆ ಪೊಲೀಸ್ ಠಾಣೆಯಲ್ಲಿ ಕುಳಿತು ಧರಣಿ ನಡೆಸಿದರು.
ಇದರ ನಂತರ, ಪೊಲೀಸ್ ಅಧಿಕಾರಿಯ ಭರವಸೆಗೆ ಕುಟುಂಬವು ಒಪ್ಪಿಕೊಂಡಿತು. ಪ್ರಸ್ತುತ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಡೀ ಘಟನೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ.