ಚಾಮರಾಜನಗರ: ತಮಿಳುನಾಡಿನ ದಿಂಬಂ ಘಾಟ್ನಲ್ಲಿ ಕಾಡಾನೆ ಉಪಟಳ ಮತ್ತೆ ಮುಂದುವರೆದಿದೆ. ಕಬ್ಬು ಹಾಗೂ ಬಾಳೆಗಾಗಿ ಗಜಪಡೆ ಕಾಡಿನಿಂದ ನಾಡಿಗೆ ಮತ್ತೆ ಎಂಟ್ರಿಕೊಟ್ಟಿದೆ. ನಸುಕಿನಲ್ಲಿ ಮತ್ತೆ ಕಾಡಿನಿಂದ ನಾಡಿಗೆ ಬಂದ ಕಾಡಾನೆ ನಡು ರಸ್ತೆಯಲ್ಲೇ ಲಾರಿ ಹಾಗೂ ಗೂಡ್ಸ್ ವಾಹನ ಅಡ್ಡಗಟ್ಟಿದೆ.
ಕಳೆದೊಂದು ತಿಂಗಳ ಹಿಂದೆ ಅರಣ್ಯ ಸಿಬ್ಬಂದಿ ಸ್ಪೆಷಲ್ ಡ್ರೈವ್ ಮಾಡಿ ಆನೆಯನ್ನು ಕಾಡಿಗಟ್ಟಿದ್ದರು. ಸತ್ಯಮಂಗಲ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಆದರೆ, ಕಾಡಾನೆ ಮತ್ತೆ ರಸ್ತೆಗೆ ಬಂದಿದ್ದು, ಲಾರಿಗಳನ್ನು ಅಡ್ಡಗಟ್ಟುತ್ತಿದೆ.
For More Updates Join our WhatsApp Group :
