ಇನ್ನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ : ರಾಜಕೀಯ ನಿವೃತ್ತಿ ಘೋಷಿಸಿದ ಹಾಲಿ ಸಂಸದ ಜಿ.ಎಸ್.ಬಸವರಾಜ್

ಪ್ರಗತಿ ವೆಬ್ ಬ್ಯೂರೋ:

ಒಂದು ವರ್ಷವಿರುವಂತೆಯೇ ಮಹತ್ವದ ನಿರ್ಧಾರ

ತುಮಕೂರು: ತಿಪಟೂರಿನಲ್ಲಿ ನಡೆಯುತ್ತಿರುವ 12ನೆಯ ಶತಮಾನದ ಅನುಭಾವಿ ವಚನಕಾರ, ಸಮಾಜ ಸೇವಕ ಶ್ರೀ ಗುರುಸಿದ್ಧರಾಮೇಶ್ವರರ 850ನೇ ಜಯಂತಿ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ಸಂಸದ ಜಿ.ಎಸ್.ಬಸವರಾಜು ತಮ್ಮ ಸುದೀರ್ಘ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಇನ್ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ

ಹೌದು.., ಇನ್ಮುಂದೆ ಯಾವುದೇ ಚುನಾವಣೆಗೆ ನನ್ನ ಸ್ಫರ್ಧೆ ಇರುವುದಿಲ್ಲ. ಆದರೆ ನೀರಾವರಿ ಯೋಜನೆಗಳ ಅನುಷ್ಠಾನಗಳ ಸಂದರ್ಭದಲ್ಲಿ ಜೊತೆಯಾಗಿರುವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರ ಮುಂದೆಯೇ ಜಿ.ಎಸ್.ಬಸವರಾಜು ಘೋಷಣೆ‌ ಮಾಡಿದ್ದಾರೆ.

ದೇವೇಗೌಡರನ್ನೇ ಸೋಲಿಸಿದ್ದ ಬಸವರಾಜ್ ಧಿಡೀರ್ ನಿವೃತ್ತಿ..!!

2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಜಿ.ಎಸ್.ಬಸವರಾಜು ಸ್ಪರ್ಧೆ ಮಾಡಿ ಗೆದ್ದಿದ್ದರು.

ಮುಂದಿನ ಬಾರಿಯೂ ದೇವೇಗೌಡರು ತುಮಕೂರಲ್ಲಿ ಸ್ಫರ್ಧೆ ಮಾಡುತ್ತಾರಾದರೆ ನಾನೂ ಸಹ ಸ್ಫರ್ಧೆ ಮಾಡುತ್ತೇ‌ನೆ ಎಂದಿದ್ದರು.

ಆದರೆ ಈಗ ಚುನಾವಣೆಯ ಹೊಸ್ತಿಲಿಲ್ಲೇ ಜಿ.ಎಸ್.ಬಸವರಾಜುರವರು ರಾಜಕೀಯ ನಿವೃತ್ತಿ ಘೋಷಿಸಿರುವುದು ಬಾರೀ ಚರ್ಚೆಗೆ ಗ್ರಾಸವಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಜಿ.ಎಸ್.ಬಿ ನಿವೃತ್ತಿ ಜಿಲ್ಲೆಯಲ್ಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗೂ 2024ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸೂಕ್ತ ವ್ಯಕ್ತಿ ಯಾರು ಎಂಬ ಕುತೂಹಲ ಗರಿಗೆದರಿದೆ. ಹಲವರು ಈಗಾಗಲೇ ರೇಸ್‌ನಲ್ಲಿದ್ದು ತೆರೆಮರೆಯ ಕಸರತ್ತು ನಡೆಸಿದ್ದಾರೆ.

ಒಟ್ಟಾರೆ ಜಿ.ಎಸ್. ಬಸವರಾಜ್ ನಿವೃತ್ತಿ ಬೇರೆ ಬೇರೆ ಆಯಾಮದಲ್ಲಿ ಹಲವು ತಿರುವುಗಳಿಗೆ ಕಾರಣವಾದರೂ ಅಚ್ಚರಿಯಿಲ್ಲ.

ಗುರುಪ್ರಸಾದ್. ಜಿ.ಎಂ

ಎಕ್ಸಿಕ್ಯುಟಿವ್ ಎಡಿಟರ್

ಪ್ರಗತಿ ಟಿವಿ

Pragati TV Social Connect for more latest u

Leave a Reply

Your email address will not be published. Required fields are marked *