ಬೆಂಗಳೂರು: ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಜಿ.ನಾರಾಯಣಪುರದಲ್ಲಿ ಗಂಡನ ಮನೆಯವರು ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಶ್ರೀಲಜಾ (32) ಎಂಬ ಮಹಿಳೆ ಅವರು ಹಲ್ಲೆಗೆ ಒಳಗಾದವರು. ಪತಿ ಅರುಣ್ ಕುಮಾರ್ ಸೇರಿದಂತೆ ಕುಟುಂಬದವರಾದ ಅತ್ತೆ ಪ್ರಭಾವತಿ, ಮಾವ ಚೌಡಪ್ಪ, ಹಾಗೂ ಸಂಬಂಧಿಕರಾದ ಗಜೇಂದ್ರ, ನರಸಿಂಹಮೂರ್ತಿ, ಲಕ್ಷ್ಮೀ ವಿರುದ್ಧ FIR ದಾಖಲಾಗಿದೆ.
ಮಹಿಳೆಯ ದೂರು ಏನು ಹೇಳುತ್ತದೆ?
ಶ್ರೀಲಜಾ ನೀಡಿರುವ ಮಾಹಿತಿಯಂತೆ, “ತಂಗಿಗೆ ಆರೋಗ್ಯ ಸರಿಯಿಲ್ಲವೆಂದು ನೋಡಿಕೊಂಡು ಬರಲು ಹೋಗಿದ್ದೆ. ಆದರೆ ಮನೆಗೆ ಬಾರದ ಕಾರಣ, ನನಗೆ ಅಸಭ್ಯ ಶಬ್ದಗಳಿಂದ ನಿಂದನೆ ಮಾಡಿದಂತೆ ಅಲ್ಲದೇ ಹೊಡೆಯಲಾಗಿದೆ. ಯಾರೊಂದಿಗೋ ಮಲಗಲು ಹೋಗಿದ್ದೀಯಾ ಎಂದು ಕೇಳಿ ಮಾನಸಿಕವಾಗಿ ತೀವ್ರವಾಗಿ ಅಪಮಾನಿಸಿದ್ದಾರೆ“ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ದಾಖಲಿಸಿದ ಪ್ರಕರಣ
ಶ್ರೀಲಜಾ ನೀಡಿದ ದೂರಿನ ಆಧಾರದ ಮೇಲೆ ಆನೇಕಲ್ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ಗಳಡಿಯಲ್ಲಿ ಹಲ್ಲೆ, ಮಹಿಳೆಯ ಅವಮಾನ, ಹಾಗೂ ಮಾನಸಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ. ಆರೋಪಿಗಳಲ್ಲಿ ಕೆಲವರ ಬಂಧನ ಸಾಧ್ಯತೆ ಇದೆ.
ಪ್ರಮುಖ ಅಂಶಗಳು:
- ಮಹಿಳೆ ತಂಗಿಯನ್ನ ನೋಡಲು ಹೋಗಿದ್ದಕ್ಕೆ ಅನುಮಾನ ವ್ಯಕ್ತ
- ಮನೆಗೆ ಸೇರಿಸದೆ ರಸ್ತೆಯಲ್ಲೇ ನಿಂದನೆ: ಶ್ರೀಲಜಾ ದೂರು
- ಗಂಡ ಮತ್ತು ಸಂಬಂಧಿಕರ ವಿರುದ್ಧ ಹಲ್ಲೆ ಆರೋಪ
- ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ
For More Updates Join our WhatsApp Group :




