‘ವುಮೆನ್ ಸೇಫ್ಟಿ’ ಆಯಪ್; ಅಪಾಯದ ವೇಳೆ ಒಂದು ಬಟನ್ ಒತ್ತಿದ್ರೆ, ಲೊಕೇಶನ್ ಸಹಿತ ಬರುತ್ತೆ ಸಂದೇಶ

ಬೆಂಗಳೂರು: ನೀವೇನಾದರೂ ಅಪರಿಚಿತ ಸ್ಥಳಕ್ಕೆ ಹೋದಾಗ ಅಪಾಯವಿದೆ ಎಂದು ನಿಮಗೆ ಅನ್ನಿಸಿದೆಯಾ? ಪ್ರಯಾಣದ ವೇಳೆ ಸಹ ಪ್ರಯಾಣಿಕರು ಕಿರುಕುಳ ಕೊಡುತ್ತಿದ್ದಾರೆ ಅನ್ನೋದು ಮನವರಿಕೆಯಾದರೆ ಕೂಡಲೇ ಪ್ಯಾನಿಕ್ ಬಟನ್ ಒತ್ತಿದರೆ ಸಾಕು ನೀವು ಕಳುಹಿಸಬೇಕಾದ ವ್ಯಕ್ತಿಗಳಿಗೆ ಅಲರ್ಟ್ ಸಂದೇಶ ರವಾನೆಯಾಗುವಂತಹ ನೂತನ ಅಪ್ಲಿಕೇಶನ್ವೊಂದನ್ನು ಕಾಲೇಜು ವಿದ್ಯಾರ್ಥಿನಿಯೊಬ್ಬರು ಅಭಿವೃದ್ಧಿ ಪಡಿಸಿದ್ದಾರೆ.

ಯುವಕ

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ನಲ್ಲಿ ಕೆ.ಆರ್. ಪುರ ಸಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆಯೇಷಾ ಸರ್ವತ್ ‘ವುಮೆನ್ ಸೇಫ್ಟಿ’ ಅಪ್ಲಿಕೇಶನ್ ಸಾಫ್ಟ್ವೇರ್ ಸಿದ್ಧಪಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರು ಬೆಳೆದು ನಿಂತಿದ್ದಾರೆ. ಮನೆ ಕಾಯಕದ ಜೊತೆಗೆ ಮನೆಯಿಂದಾಚೆಗೂ ಸಹ ದುಡಿಯುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ತಡರಾತ್ರಿ ಬರಬೇಕಾದರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತೆ ಕೃತ್ಯಗಳು ನಡೆದಿರುವ ನಿದರ್ಶನಗಳು ಇವೆ.

ಅಲ್ಲದೆ, ಒಂಟಿಯಾಗಿ ಕ್ಯಾಬ್ನಲ್ಲಿ ಸಂಚರಿಸುವಾಗ ಆತಂಕ ಇದ್ದೇ ಇರಲಿದೆ. ಹೀಗಾಗಿ ರೆಡ್ ಝೋನ್ ಪ್ರದೇಶಗಳಲ್ಲಿ ಅಥವಾ ಅಪರಿಚಿತ ಸ್ಥಳಗಳಲ್ಲಿ ಓಡಾಡುವಾಗ ಈ ಅಪ್ಲಿಕೇಶನ್ ಮಹಿಳೆಯರ ನೆರವಿಗೆ ಬರಲಿದೆ. ಅಪಾಯದಲ್ಲಿ ಸಿಲುಕಿರುವುದು ಗೊತ್ತಾದರೆ ಕೂಡಲೇ ಪ್ಯಾನಿಕ್ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ. ಜೊತೆಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವ ಯಾರಿಗಾದರೂ ಕಳುಹಿಸಿದರೆ ಕೂಡಲೇ ‘ಐಯಮ್ ಇನ್ ಟ್ರಬಲ್’ ಎಂದು ಲೊಕೇಶನ್ ಸಹಿತ ಸಂದೇಶ ರವಾನೆಯಾಗಲಿದೆ ಎಂದು ಈಟಿವಿ ಭಾರತಕ್ಕೆ ಆಯೇಷಾ ತಿಳಿಸಿದ್ದಾರೆ.

ಇಂಟರ್ನೆಟ್, ವೈಫೈ, ಜಿಪಿಎಸ್ ಅಗತ್ಯವಿಲ್ಲ; ಸಾರ್ವಜನಿಕ ಪ್ರದೇಶಗಳಲ್ಲಿ ಅಪಾಯ ಎದುರಾಗುವ ಸಂದರ್ಭ ಬಂದರೆ ಕೂಡಲೇ ಮೊಬೈಲ್ನಲ್ಲಿ ಅಳವಡಿಸಿಕೊಂಡಿರುವ ವುಮೆನ್ ಸೇಫ್ಟಿ ಅಪ್ಲಿಕೇಶನ್ನಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಅಲಾರಂ ರೀತಿ ಸೈರನ್ ಮೊಳಗಲಿದೆ. ಈ ಮೂಲಕ ಸುತ್ತಮುತ್ತಲಿನಲ್ಲಿರುವವರ ಗಮನ ಸೆಳೆದು ನೆರವು ಪಡೆಯಹುದು. ಎರಡನೇಯದಾಗಿ ನಿರ್ಜನ ಪ್ರದೇಶಗಳಲ್ಲಿ ಅಥವಾ ಒಂಟಿಯಾಗಿ ಪ್ರಯಾಣ ಮಾಡುವಾಗ ನಿಮ್ಮ ಮೊಬೈಲ್ನಲ್ಲಿರುವ ಸಂಪರ್ಕಿತರ ನಂಬರ್ಗಳಿಗೆ ಸಂದೇಶ ಕಳುಹಿಸಬಹುದಾಗಿದೆ.

ಇದಕ್ಕೆ ಯಾವುದೇ ಇಂಟರ್ನೆಟ್, ವೈಫೈ ಹಾಗೂ ಜಿಪಿಎಸ್ ಸಹಾಯದ ಅಗತ್ಯವಿಲ್ಲ. ಆಯಂಡ್ರಾಯ್ಡ್ ಮೊಬೈಲ್ ಇರುವವರು ಮಾತ್ರ ಅಪ್ಲಿಕೇಶನ್ ನಿಂದ ನೆರವು ಪಡೆಯಬಹುದು. ಪ್ರಾಯೋಗಿಕ ಹಂತವಾಗಿ ಕಾಲೇಜಿನಲ್ಲಿ ಮಹಿಳಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಈಗಾಗಲೇ ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಏಕಕಾಲದಲ್ಲಿ 150 ಮಂದಿಗೆ ಅಲರ್ಟ್ ಮೆಸ್ಸೇಜ್ ಕಳುಹಿಸಬಹುದಾಗಿದೆ. ಹೆಚ್ಚಿನ ಸಾಮರ್ಥ್ಯ ಕಲ್ಪಿಸಲು ಕ್ಲೌಡ್ ಖರೀದಿಸಬೇಕಿದೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿಯಿಂದ ಉತ್ತಮ ಬೆಂಬಲ ದೊರೆತಿದೆ ಎನ್ನುತ್ತಾರೆ ಆಯೇಷಾ.

Pragati TV Social Connect for more latest u

Leave a Reply

Your email address will not be published. Required fields are marked *