ನವದೆಹಲಿ: ೨೦೨೧-೨೨ರ ದೆಹಲಿ ಮದ್ಯ ನೀತಿಗೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಗುರುವಾರ ಜಾಮೀನು ದೊರೆತಿದ್ದು, ಅಂತಾರಾಷ್ಟಿçÃಯ ಯೋಗ ದಿನಾಚರಣೆಯ ದಿನವಾದ ಇಂದು ಕೇಜ್ರಿವಾಲ್‌ಗೆ ಬಿಡುಗಡೆಯ ಯೋಗ ದೊರೆಯಲಿದೆ.
ಬುಧವಾರ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗುರುವಾರಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ದೆಹಲಿಯ ಅವೆನ್ಯೂ ಕೋರ್ಟ್ ನ್ಯಾಯಾಧೀಶರು ೨ ದಿನಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ, ಲಕ್ಷ ಮೊತ್ತದ ಶ್ಯೂರಿಟಿ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದೆ. ಆದರೆ, ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯದ ಆದೇಶಕ್ಕೆ ತಡೆ ಕೋರಿದೆ.
ಈ ಆದೇಶವನ್ನು ಜಾರಿಗೊಳಿಸಿದ ನಂತರ, ಇಡಿ ತನ್ನ ಕಾನೂನು ಪರಿಹಾರಗಳನ್ನು ಚಲಾಯಿಸಲು ೪೮ ಗಂಟೆಗಳ ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತು. ಆದರೆ, ನ್ಯಾಯಾಧೀಶರು ಆದೇಶಕ್ಕೆ ತಡೆ ನೀಡಲು ನಿರಾಕರಿಸಿದರು.ಎಎಪಿ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ ೧ ಲಕ್ಷ ರೂ. ಜಾಮೀನು ಬಾಂಡ್ ಪಾವತಿಸಿದ ನಂತರ ಶುಕ್ರವಾರ ತಿಹಾರ್ ಜೈಲಿನಿಂದ ಹೊರಬರುವ ನಿರೀಕ್ಷೆಯಿದೆ.
ಅರವಿಂದ್ ಕೇಜ್ರಿವಾಲ್ ಸಂಜಯ್ ಸಿಂಗ್ ನಂತರ ಈ ಪ್ರಕರಣದಲ್ಲಿ ಜಾಮೀನು ಪಡೆದ ಎರಡನೇ ಎಎಪಿ ನಾಯಕರಾಗಿದ್ದಾರೆ. ದೆಹಲಿಯ ಮಾಜಿ ಸಚಿವ ಮನೀಶ್ ಸಿಸೋಡಿಯಾ ತಿಹಾರ್ ಜೈಲಿನಲ್ಲಿಯೇ ಇನ್ನೂ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.