ಅಡುಗೆ ಎಣ್ಣೆ ಖರೀದಿಸುವ ಮೊದಲು ಈ ಮೂರು ವಿಷಯಗಳನ್ನು ತಪ್ಪದೆ ನೋಡಿ..!

ಅಡುಗೆ ಎಣ್ಣೆ ಖರೀದಿಸುವ ಮೊದಲು ಈ ಮೂರು ವಿಷಯಗಳನ್ನು ತಪ್ಪದೆ ನೋಡಿ

ಅಡುಗೆ ಎಣ್ಣೆ ಖರೀದಿಸುವ ಮೊದಲು ಮೂರು ವಿಷಯಗಳನ್ನು ಪರಿಶೀಲಿಸುವುದು ಅತ್ಯಗತ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಅಂಶಗಳನ್ನು ಪರಿಶೀಲಿಸಿದ ನಂತರವೇ ಖರೀದಿಸುವುದು ಬಹಳ ಉತ್ತಮ. ಮಾತ್ರವಲ್ಲ ಆಹಾರದಲ್ಲಿ ಎಣ್ಣೆ ಬಳಕೆಯನ್ನು ಕೂಡ ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ, ಅಡುಗೆ ಎಣ್ಣೆಯ ವಿಷಯದಲ್ಲಿ ನಾವು ಯಾವ ಅಂಶಗಳತ್ತ ಗಮನ ಹರಿಸಬೇಕು? ಈ ಅಂಶಗಳ ಬಗ್ಗೆ ತಿಳಿದು ಖರೀದಿ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಪದ್ಧತಿ ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ನಾವು ಅಡುಗೆಗೆ ಬಳಸುವ ಎಣ್ಣೆ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಎಣ್ಣೆ ಪ್ಯಾಕೆಟ್ ಖರೀದಿಸುವ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ಇದು ನಾವು ದಿನನಿತ್ಯ ಬಳಸುವ ವಸ್ತುವಾಗಿರುವುದರಿಂದ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಫಿಟ್ ಆಗಿರುವುದಕ್ಕೆ, ಆಹಾರಕ್ರಮ ಸರಿಯಾಗಿ ಇರಬೇಕಾಗುತ್ತದೆ. ಮಾತ್ರವಲ್ಲ, ನಾವು ಯಾವ ರೀತಿಯ ಆಹಾರವನ್ನು ತಯಾರಿಸುತ್ತೇವೆ ಮತ್ತು ಯಾವ ಪದಾರ್ಥಗಳನ್ನು ಬಳಸುತ್ತೇವೆ ಎಂಬುದು ಸಹ ಮುಖ್ಯವಾಗುತ್ತದೆ. ಎಣ್ಣೆ ಚೆನ್ನಾಗಿಲ್ಲದಿದ್ದರೆ ಅದರಿಂದ ಆರೋಗ್ಯಕರ ಆಹಾರವನ್ನು ತಯಾರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅಡುಗೆ ಎಣ್ಣೆಯನ್ನು  ಖರೀದಿಸುವ ಮೊದಲು, ಕೆಲವು ಅಂಶಗಳ ಬಗ್ಗೆ ಗಮನ ಕೊಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ರತಿಯೊಂದು ಖಾದ್ಯದಲ್ಲೂ ನಾವು ಎಣ್ಣೆಯನ್ನು ಬಳಸುವುದರಿಂದ, ಆರೋಗ್ಯದ ಮೇಲೆ ಬಹಳ ಬೇಗನೆ ಪರಿಣಾಮ ಬೀರುತ್ತದೆ. ಹಾಗಾದರೆ, ಅಡುಗೆ ಎಣ್ಣೆಯ ವಿಷಯದಲ್ಲಿ ನಾವು ಯಾವ ಅಂಶಗಳತ್ತ ಗಮನ ಹರಿಸಬೇಕು? ಈ ಅಂಶಗಳ ಬಗ್ಗೆ ತಿಳಿದು ಖರೀದಿ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಎಣ್ಣೆ ಇಲ್ಲದೆ ಅಡುಗೆ ಮಾಡುವುದು ಬಹಳ ಕಷ್ಟ. ಅದರಲ್ಲಿಯೂ ಹಿಟ್ಟಿನ ಭಕ್ಷ್ಯಗಳಿಗೆ, ಎಣ್ಣೆ ಬೇಕಾಗುತ್ತವೆ. ಆದರೆ ಆರೋಗ್ಯ ತಜ್ಞರು ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಂದು ದಿನದಲ್ಲಿ ಮೂರು ಅಥವಾ ನಾಲ್ಕು ಚಮಚಗಳಿಗಿಂತ ಹೆಚ್ಚು ಎಣ್ಣೆಯನ್ನು ಬಳಸಬಾರದು ಎಂದು ಹೇಳುತ್ತಾರೆ. ಈ ಮಾತು ಕೆಲವರಿಗೆ ತಿಳಿದಿದ್ದರೂ ಸಹ ಅದನ್ನು ಪಾಲನೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಯಾವ ಯಾವುದೋ ಎಣ್ಣೆಯನ್ನು ಅಡುಗೆಗೆ ಬಳಸುವುದು ಕೂಡ ಒಳ್ಳೆಯದಲ್ಲ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗೆ ಬಹಳ ಆಯ್ಕೆಗಳಿವೆ. ಹಾಗೆಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ನಾವು ಅಡುಗೆಗೆ ಯಾವುದೇ ಎಣ್ಣೆ ಬಳಸಲಿ ಆದರೆ ಅದನ್ನು ಖರೀದಿ ಮಾಡುವುದಕ್ಕೆ ಮೊದಲು ಮೂರು ವಿಷಯಗಳನ್ನು ಪರಿಶೀಲಿಸಬೇಕಾಗುತ್ತದೆ.

ಏನು ಪರಿಶೀಲಿಸಬೇಕು?

ವಾಸ್ತವದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ವಿಷಯ ಬಂದಾಗಲೆಲ್ಲಾ, ಎಲ್ಲರೂ ಪ್ರೋಟೀನ್ಗಳು, ಸಕ್ಕರೆ ಮತ್ತು ಕ್ಯಾಲೊರಿಗಳ ಬಗ್ಗೆ ಚರ್ಚಿಸುತ್ತಾರೆ. ಹೌದು. ಆರೋಗ್ಯವಾಗಿರಲು ಈ ಮೂರು ಅಂಶ ಬಹಳ ಮುಖ್ಯವಾಗುತ್ತದೆ. ಇದು ಹೆಚ್ಚು ಇರುವುದು ತೊಂದರೆದಾಯಕ ಮತ್ತು ಕಡಿಮೆ ಇರುವುದು ಕೂಡ ಅಪಾಯಕಾರಿ. ಈ ಅಂಶಗಳ ಸಮತೋಲನದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಆದರೆ ಈ ಮೂರರ ಜೊತೆಗೆ, ಮತ್ತೊಂದು ಪ್ರಮುಖ ವಿಷಯವೆಂದರೆ ಎಣ್ಣೆ. ಇದು ಸರಿಯಾಗಿದ್ದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಆರೋಗ್ಯ ತಜ್ಞ ಮಹಾಜನ್ ಅವರ ಪ್ರಕಾರ, ಅಡುಗೆ ಎಣ್ಣೆಯನ್ನು ಖರೀದಿಸುವ ಮೊದಲು ಪರಿಶೀಲಿಸಬೇಕಾದ ಮೊದಲ ವಿಷಯವೆಂದರೆ ಅದು ಕೋಲ್ಡ್- ಪ್ರೆಸ್ಡ್ ಎಣ್ಣೆಯೇ ಅಥವಾ ಇಲ್ಲವೇ ಎಂಬುದು.

ಕೋಲ್ಡ್ ಪ್ರೆಸ್ಡ್ ಎಣ್ಣೆ ಯಾಕೆ ಒಳ್ಳೆಯದು?

ಸಾಮಾನ್ಯವಾಗಿ ಕೋಲ್ಡ್ ಪ್ರೆಸ್ಡ್ ಎಣ್ಣೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಈ ಎಣ್ಣೆಯನ್ನು ಬಿಸಿ ಮಾಡದೆ ತಯಾರಿಸಲಾಗುತ್ತದೆ. ಇದಲ್ಲದೆ, ಅವು ಯಾವುದೇ ರೀತಿಯ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಜೊತೆಗೆ ಅನೇಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಮಾತ್ರವಲ್ಲ ವಿಟಮಿನ್ ಇ ಮತ್ತು ಪಾಲಿಫಿನಾಲ್ ಅಂಶ ಕೂಡ ಅಧಿಕವಾಗಿರುತ್ತದೆ. ಅದಕ್ಕಾಗಿಯೇ ಅವುಗಳನ್ನು ಬಳಸುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ರೀತಿಯ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳಿಂದ, ದೇಹದಲ್ಲಿ ಸಂಗ್ರಹವಾದ ವಿಷಕಾರಿ ಅಂಶಗಳು ಸುಲಭವಾಗಿ ಬಿಡುಗಡೆಯಾಗುತ್ತವೆ. ಇದಲ್ಲದೆ, ಈ ಎಣ್ಣೆಯಿಂದ ಅಡುಗೆ ಮಾಡುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿರುವುದಿಲ್ಲ. ಕೊಲೆಸ್ಟ್ರಾಲ್ ಸಮಸ್ಯೆಯೂ ಕೂಡ ಬರುವುದಿಲ್ಲ.

ಸ್ಮೋಕ್ ಪಾಯಿಂಟ್

ಆರೋಗ್ಯ ತಜ್ಞ ಮಹಾಜನ್ ಅವರ ಪ್ರಕಾರ, ಅಡುಗೆ ಎಣ್ಣೆಯನ್ನು ಖರೀದಿಸುವ ಮೊದಲು ಪರಿಶೀಲಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ಹೊಗೆ ಬಿಂದು (ಸ್ಮೋಕ್ ಪಾಯಿಂಟ್). ಎಣ್ಣೆ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂಬುದು ಇದರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ, ನಾವು ನಮ್ಮ ಎಲ್ಲಾ ಭಕ್ಷ್ಯಗಳನ್ನು ಹೆಚ್ಚಿನ ಶಾಖದಲ್ಲಿ ಬೇಯಿಸುತ್ತೇವೆ. ಹುರಿಯುವುದು ಮತ್ತು ವಿವಿಧ ತಿಂಡಿಗಳು ಇದಕ್ಕೆ ಉದಾಹರಣೆಗಳಾಗಿವೆ. ಅಂತಹ ವಸ್ತುಗಳನ್ನು ಬೇಯಿಸುವಾಗ, ಎಣ್ಣೆಯು 230 ಡಿಗ್ರಿಗಳಷ್ಟು ತಾಪಮಾನವನ್ನು ತಲುಪಬಹುದು. ಆಗ ನೀವು ಆಯ್ಕೆ ಮಾಡಿದ ಎಣ್ಣೆ ಈ ಶಾಖವನ್ನು ತಡೆದುಕೊಳ್ಳುತ್ತದೆಯೋ, ಇಲ್ಲವೋ ಎಂಬುದು ಪ್ರಮುಖ ಪ್ರಶ್ನೆಯಾಗಿರುತ್ತದೆ. ಅಂದರೆ, ನೀವು ಖರೀದಿಸುವ ಎಣ್ಣೆಯು ಈ ಹೊಗೆ ಬಿಂದುವನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದರೆ, ಅದು ಬಹಳ ಬೇಗನೆ ಒಡೆಯುತ್ತದೆ. ಇದು ದೇಹಕ್ಕೆ ಹಾನಿ ಮಾಡುವ ವಿವಿಧ ರಾಸಾಯನಿಕಗಳ ರಚನೆಗೆ ಕಾರಣವಾಗುತ್ತದೆ.

ಎರಡು, ಮೂರು ರೀತಿಯ ಎಣ್ಣೆಗಳನ್ನು ಬಳಸಿ

ಮೂರನೇಯದಾಗಿ, ನೀವು ಅಡುಗೆಗೆ ಬಳಸುವುದಕ್ಕೆ ಒಂದೇ ಎಣ್ಣೆಯನ್ನು ಎಂದಿಗೂ ಅವಲಂಬಿಸಬಾರದು. ಅಂತಹ ಎಣ್ಣೆಗಳು ಪೋಷಕಾಂಶಗಳನ್ನು ಹೊಂದಿದ್ದರೂ, ಅವು ನಿಮ್ಮನ್ನು ಸಂಪೂರ್ಣವಾಗಿ ಆರೋಗ್ಯವಾಗಿಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಎರಡು ಅಥವಾ ಮೂರು ರೀತಿಯ ಎಣ್ಣೆಗಳನ್ನು ಬಳಸುವುದು ಒಳ್ಳೆಯದು. ಇದರಿಂದ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆಯುವ ಅವಕಾಶವನ್ನು ಒದಗಿಸುತ್ತದೆ. ಒಟ್ಟಾರೆಯಾಗಿ, ಎಣ್ಣೆ ಖರೀದಿ ಮಾಡುವಾಗ ಇಲ್ಲಿ ಉಲ್ಲೇಖಿಸಿರುವ ಈ ಮೂರು ವಿಷಯಗಳನ್ನು ಪರಿಶೀಲಿಸಿದರೆ, ನೀವು ಆರೋಗ್ಯವಾಗಿರಬಹುದು. ಇದಲ್ಲದೆ, ಎಣ್ಣೆ ಬಳಕೆಯಲ್ಲಿ ಕೆಲವು ಮಿತಿಗಳನ್ನು ನಿಗದಿಪಡಿಸುವುದು ಉತ್ತಮ. ನೀವು ಸಾಧ್ಯವಾದಷ್ಟು ಎಣ್ಣೆ ಆಹಾರವನ್ನು ತಪ್ಪಿಸಿದರೆ, ಅದು ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *