DJ ಹಳ್ಳಿಯಲ್ಲಿ ಹಸುಗಳ ಶೆಡ್ಗೆ ಬೆ*ಕಿ.

DJ ಹಳ್ಳಿಯಲ್ಲಿ ಹಸುಗಳ ಶೆಡ್ಗೆ ಬೆ*ಕಿ.

ಡಿಜೆ ಹಳ್ಳಿ ಬಳಿ ಇರುವ ಶಾಂಪುರ ರಸ್ತೆಯಲ್ಲಿ ನಿನ್ನೆ ಅಗ್ನಿ ದುರಂತ.

ಬೆಂಗಳೂರು: ನಗರದ ಡಿಜೆ ಹಳ್ಳಿ ಬಳಿ ಇರುವ ಶಾಂಪುರ ರಸ್ತೆಯಲ್ಲಿ ನಿನ್ನೆ ಅಗ್ನಿ ದುರಂತವೊಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಆರು ಹಸುಗಳು ಸಾವನ್ನಪ್ಪಿದ್ದವು. ಶೆಡ್​​​​ನಲ್ಲಿದ್ದ 20 ಹಸುಗಳ ಪೈಕಿ ಆರು ಮೂಕಜೀವಿಗಳು ಬೆಂಕಿಯ (Fire) ಜ್ವಾಲೆಗೆ ನರಳಿ ಪ್ರಾಣ ಬಿಟ್ಟಿದ್ದಾವೆ.

ಮೊದಲು ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅವಘಡ ನಡೆದಿದೆ ಎನ್ನಲಾಗಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​ ಸಿಕ್ಕಿದ್ದು, ಬೇಕಂತಲೇ ಕಿರಾತಕನೊಬ್ಬ ಹಸುಗಳಿದ್ದ ಶೆಡ್​ಗೆ ಬೆಂಕಿ ಇಟ್ಟು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. . ಸದ್ಯ ಘಟನೆ ಸಂಬಂಧ ಡಿಜೆ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬೆಂಕಿ ಇಟ್ಟು ಮೂಕಪ್ರಾಣಿಗಳನ್ನ ಬಲಿಪಡೆದ ವಿಕೃತನಿಗೆ ಬಲೆ ಬೀಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *