ನಟ ರವಿಚಂದ್ರನ್ ನೀಡಿದ ಶುಭ ಹಾರೈಕೆ
ಬೆಂಗಳೂರು: ಕನ್ನಡ ಸಿನಿಮಾದ 'ಕವಳ' ಚಿತ್ರ ಮುಹೂರ್ತವು ಇತ್ತೀಚೆಗೆ ನಡೆಯಿತು. ಪ್ರಸಿದ್ಧ ನಟ ರವಿಚಂದ್ರನ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. ತಮಿಳಿನ ಜನಪ್ರಿಯ ನಟ, ನಿರ್ದೇಶಕ ಸಮುದ್ರಕಿಣಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಆಕ್ಷನ್ ಸಿನಿಮಾ ಆಗಿದ್ದು, ಕವಳ ಹೆಸರಿನ ರೌಡಿಯ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.
ಸಿನಿಮಾದಲ್ಲಿ ನಾಯಕನಾಗಿ ಸಂದೀಪ್ ನಾಗರಾಜ್ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣ ಆಗುತ್ತಿದೆ. ಸಿನಿಮಾವನ್ನುಶ್ರೀ ಜೈ ನಿರ್ದೇಶನ ಮಾಡುತ್ತಿದ್ದಾರೆ. ನಟ ರವಿಚಂದ್ರನ್ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.
For More Updates Join our WhatsApp Group :




