ಸಿನಿಮಾ ಪ್ರಚಾರ ಗಿಮಿಕ್ ಮೇಲೆ ಪೊಲೀಸ್ ಎಚ್ಚರಿಕೆ.

ಸಿನಿಮಾ ಪ್ರಚಾರ ಗಿಮಿಕ್ ಮೇಲೆ ಪೊಲೀಸ್ ಎಚ್ಚರಿಕೆ.

ಪೆಟ್ರೋಲ್ ಕುಡಿಯುವ ವಿಡಿಯೋ ಮೂಲಕ ಅಪಾಯ, ಸೀಮಂತ್ ಕುಮಾರ್ ಸಿಂಗ್ ಕಠಿಣ ವಾರ್ನಿಂಗ್

ಬೆಂಗಳೂರು : ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಸಿನಿಮಾ ಪ್ರಚಾರದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಮಿತಿಮೀರಿದ ಗಿಮಿಕ್‌ಗಳ ಬಗ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಸಿನಿಮಾಗಳನ್ನು ಪ್ರಚಾರ ಮಾಡುವ ಸಲುವಾಗಿ ಕೆಲವು ವ್ಯಕ್ತಿಗಳು ಅಪಾಯಕಾರಿ ಮತ್ತು ಹುಚ್ಚಾಟದ ಕೃತ್ಯಗಳಲ್ಲಿ ತೊಡಗುತ್ತಿರುವ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಸಿನಿಮಾ ಪ್ರಚಾರದ ಒಂದು ನಿದರ್ಶನದಲ್ಲಿ, ಪೆಟ್ರೋಲ್ ಕುಡಿಯುವಂತಹ ಹುಚ್ಚಾಟದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ನಂತರ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿತ್ತು. ಇಂತದ ಚೀಪ್ ಗಿಮಿಕ್​ಗಳು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತವೆ ಮತ್ತು ಇದು ಅನಗತ್ಯ ಹಾಗೂ ಅಪಾಯಕಾರಿ ಎಂದು ಕಮಿಷನರ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಾದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಕಾನೂನಿನ ಚೌಕಟ್ಟಿನಿಂದ ಹೊರತಾದ ಯಾವುದೇ ಪ್ರಚಾರ ಕಾರ್ಯಗಳಿಗೆ ಅವಕಾಶವಿಲ್ಲ. ಕಾನೂನು ಉಲ್ಲಂಘಿಸುವವರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *