ಬೆಂಗಳೂರಿನ ಕಾರ್ಯಾಗಾರಕ್ಕೆ ತಲಾ ಮೂವರು ಉಪನ್ಯಾಸಕರನ್ನು ಕಳುಹಿಸಲು ಪತ್ರ.!

ಬೆಂಗಳೂರಿನ ಕಾರ್ಯಾಗಾರಕ್ಕೆ ತಲಾ ಮೂವರು ಉಪನ್ಯಾಸಕರನ್ನು ಕಳುಹಿಸಲು ಪತ್ರ.!

ಈ ಬಾರಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಸಿಇಟಿ ಮಂಥನ

ಬೆಂಗಳೂರು: ಆಪ್ಷನ್ ಎಂಟ್ರಿ ಮತ್ತು ಕೌನ್ಸೆಲಿಂಗ್ ಬಗ್ಗೆ‌ ಜಾಗೃತಿ ಮೂಡಿಸುವ ಸಿಇಟಿ ಸೀಟು ಹಂಚಿಕೆ ಮಂಥನ* ಕಾರ್ಯಕ್ರಮವನ್ನು ಈ ಬಾರಿ ಎಂಜಿನಿಯರಿಂಗ್ ಮಾತ್ರವಲ್ಲದೆ ವೈದ್ಯಕೀಯ ಕಾಲೇಜುಗಳಲ್ಲಿಯೂ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದೆ.

ಈ ಸಂಬಂಧ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಅವರು ಮೇ ತಿಂಗಳ ಎರಡನೇ ವಾರದಲ್ಲಿ ಎರಡು ದಿನ ಮಂಥನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಆಪ್ಷನ್ ಎಂಟ್ರಿ ವಿಷಯದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ತಪ್ಪು ಮಾಡುತ್ತಿದ್ದಾರೆಂದು ಕಳೆದ ವರ್ಷ ದೂರುಗಳು ಬಂದಾಗ ಉನ್ನತ ಶಿಕ್ಷಣ ಸಚಿವರು ಈ ರೀತಿ ಜಾಗೃತಿ ಮೂಡಿಸುವ ಮಂಥನ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದರು. ಆ ಪ್ರಕಾರ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌನ್ಸೆಲಿಂಗ್ ಕುರಿತ ಒಂದು ದಿನದ ಮಂಥನ ನಡೆಯಿತು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಬಂತು. ಹೀಗಾಗಿ ಈ ಬಾರಿ ಸರ್ಕಾರಿ ಮತ್ತು ಅನುದಾನಿತ ವೈದ್ಯಕೀಯ ಕಾಲೇಜುಗಳನ್ನೂ ಮಂಥನಕ್ಕೆ ಸೇರಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಪ್ರಸನ್ನ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಾರಿ ಎರಡು ದಿನ ಅತ್ಯಂತ ವ್ಯವಸ್ಥಿತವಾಗಿ ಮಂಥನ ಕಾರ್ಯಕ್ರಮ ಆಯೋಜಿಸುವ ಕಾರಣಕ್ಕೆ ಮೇ 9ರಂದು ಬೆಂಗಳೂರಿನಲ್ಲಿ ಕೌನ್ಸೆಲಿಂಗ್ ಕುರಿತ ಪೂರ್ವಭಾವಿ ಕಾರ್ಯಾಗಾರ ಆಯೋಜಿಸಿದ್ದು ಪ್ರತಿ ಕಾಲೇಜಿನಿಂದ ಅತ್ಯಂತ ಕ್ರಿಯಾಶೀಲ ಮೂವರು ಉಪನ್ಯಾಸಕರನ್ನು ನಿಯೋಜಿಸುವಂತೆ ಅವರು ಎರಡೂ ಇಲಾಖೆಗಳ ಮುಖ್ಯಸ್ಥರನ್ನು ಕೋರಿದ್ದಾರೆ. ಸರ್ಕಾರಿ ಅಥವಾ ಅತಿಥಿ ಉಪನ್ಯಾಸಕರನ್ನೂ ಕಾರ್ಯಾಗಾರಕ್ಕೆ ಕಳುಹಿಸಬಹುದು. ಭಾಗವಹಿಸುವವರಿಗೆ ಟಿಎ/ಡಿಎ ಕೂಡ ಪ್ರಾಧಿಕಾರದಿಂದ ನೀಡಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *