ಒಂದು ಗುಂಡಿ ಮುಚ್ಚಲು ಲಕ್ಷಾಂತರ ಖರ್ಚು – 6 ತಿಂಗಳಲ್ಲಿ ₹33 ಕೋಟಿ ವ್ಯಯದ ಬಗ್ಗೆ ಗಂಭೀರ ಪ್ರಶ್ನೆಗಳು
ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಕೋಟಿ ಕೋಟಿ ಹಣ ಲೂಟಿಯಾಗಿದೆ ಎಂಬ ಆರೋಪ ಕೇಳಿಬಂದಿದೆ..!
ಒಂದೊಂದು ಗುಂಡಿ ಮುಚ್ಚಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಗುಂಡಿ ಮುಚ್ಚಲು ಹೋದವರು ಸರ್ಕಾರಿ ಖಜಾನೆಯಲ್ಲಿದ್ದ ಹಣವನ್ನು ಲಪಟಾಯಿಸಿದ್ದಾರಾ ಎಂಬ ಅನುಮಾನ ಮೂಡಿದೆ.
ಜಿಬಿಎ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ 6 ತಿಂಗಳಲ್ಲಿ ಸೆಪ್ಟೆಂಬರ್‌ನಿಂದ ಫೆಬ್ರವರಿವರೆಗೆನಡೆದ ಕಾಮಗಾರಿಯ ಅಂಕಿ-ಅಂಶಗಳಿಂದ ಗುಂಡಿ ಪುರಾಣ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜಪೇಟೆಯಲ್ಲಿ 1 ಲಕ್ಷ ರೂ., ಶಿವಾಜಿ ನಗರದಲ್ಲಿ 60 ಸಾವಿರ ರೂ., ಗೋವಿಂದರಾಜ ನಗರ 49 ಸಾವಿರ ರೂ., ವಿಜಯನಗರ 47 ಸಾವಿರ ರೂ., ಗಾಂಧಿ ನಗರ 31 ಸಾವಿರ ರೂ., ಆಗಿದ್ದರೆ ಶಾಂತಿನಗರ, ಪದ್ಮನಾಭನಗರ, ರಾಜಾಜಿನಗರದಲ್ಲಿ 20 ಸಾವಿರ ರೂ. ವೆಚ್ಚದಲ್ಲಿ ಗುಂಡಿಯನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಕೇವಲ 6 ತಿಂಗಳ ಅವಧಿಯಲ್ಲಿ 33 ಕೋಟಿಗೂ ಅಧಿಕ ಹಣವನ್ನು ಗುಂಡಿ ಮುಚ್ಚಲು ಬಳಸಲಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಆದರೆ ವಾಸ್ತವದಲ್ಲಿ ರಸ್ತೆಗಳ ಸ್ಥಿತಿ ಸುಧಾರಿಸಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದೆ ವಿಚಾರ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
For More Updates Join our WhatsApp Group :




