ಮಲಯಾಳಂನಲ್ಲೂ ‘ಸು ಫ್ರಮ್ ಸೋ’ ಹವಾ; ಕೊಚ್ಚಿಯಲ್ಲಿ ಹೌಸ್ಫುಲ್ ಶೋ.

Prajwal Revanna ಗೆ ಶಿಕ್ಷೆ ಏನು? ಕೋರ್ಟ್ನಲ್ಲಿ ನಡೆಯಿತು ಸ್ವಾರಸ್ಯಕರ ವಾದ-ಪ್ರತಿವಾದ ಏನು?

ಕನ್ನಡದ ಯಶಸ್ವಿ ಚಿತ್ರ ‘ಸು ಫ್ರಮ್ ಸೋ’ ಮಲಯಾಳಂನಲ್ಲಿ ಯಶಸ್ವಿಯಾಗಿ ಬಿಡುಗಡೆಯಾಗಿದೆ. ಉತ್ತಮ ಡಬ್ಬಿಂಗ್ ಮತ್ತು ಕಥಾವಸ್ತುವಿನಿಂದಾಗಿ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಕ್ ಮೈ ಶೋನಲ್ಲಿ ಉತ್ತಮ ರೇಟಿಂಗ್ ಪಡೆದಿದೆ. ಕೊಚ್ಚಿಯಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ.

‘ಸು ಫ್ರಮ್ ಸೋ’ ಸಿನಿಮಾ ಕನ್ನಡ ಚಿತ್ರರಂಗದ ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಕಾಲಿಟ್ಟಿದೆ. ಈ ಚಿತ್ರವನ್ನು ಒಳ್ಳೆಯ ರೀತಿಯಲ್ಲಿ ಡಬ್ ಮಾಡಿ ಮಲಯಾಳಂ ಭಾಷೆಯಲ್ಲಿ ರಿಲೀಸ್ ಮಾಡಲಾಗಿದೆ. ದುಲ್ಕರ್ ಸಲ್ಮಾನ್ ಅವರು ಚಿತ್ರವನ್ನು ಹಂಚಿಕೆ ಮಾಡಿದ್ದಾರೆ. ಈ ಸಿನಿಮಾಗೆ ಕೇರಳದಲ್ಲಿ ಒಳ್ಳೆಯ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಕ್ ಮೈ ಶೋನಲ್ಲಿ ಮಲಯಾಳಂ ವರ್ಷನ್ಗೆ ಒಳ್ಳೆಯ ರೇಟಿಂಗ್ ಸಿಕ್ಕಿದೆ ಅನ್ನೋದು ವಿಶೇಷ.

ಕೇರಳದ ಕೊಚ್ಚಿಯಲ್ಲಿ ಶುಕ್ರವಾರ (ಆಗಸ್ಟ್ 1) ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು. ರಾಜ್ ಬಿ. ಶೆಟ್ಟಿ ಮೊದಲಾದವರು ಈ ವೇಳೆ ಭಾಗವಹಿಸಿದ್ದರು. ಮಲಯಾಳಂ ವರ್ಷನ್ ನೋಡಿದ ಅನೇಕರು ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರವನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಮಲಯಾಳಂ ಭಾಷೆಗೆ ಉತ್ತಮವಾಗಿ ಡಬ್ ಮಾಡಲಾಗಿದೆ ಎಂದು ಅನೇಕರು ಹೇಳಿದ್ದಾರೆ.

ಕೊಚ್ಚಿಯಲ್ಲಿ ಆಗಸ್ಟ್ 1ರ ರಾತ್ರಿ ಶೋಗಳ ಪೈಕಿ ಕೆಲವು ಹೌಸ್ಫುಲ್ ಆಗಿತ್ತು. ಈಗಾಗಲೇ ಸಿನಿಮಾಗೆ ಬುಕ್ ಮೈ ಶೋನಲ್ಲಿ (ಮಲಯಾಳಂ ವರ್ಷನ್) 9.1 ರೇಟಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಅನೇಕರು ಹೊಗಳಿದ್ದಾರೆ. ಮಲಯಾಳಂನಲ್ಲಿ ಈ ರೀತಿಯ ಹಳ್ಳಿ ಸೊಗಡಿನ ಚಿತ್ರಗಳನ್ನೇ ಹೆಚ್ಚು ಮಾಡಲಾಗುತ್ತದೆ. ಆ ಕಾರಣಕ್ಕೆ ಅವರಿಗೆ ಸಿನಿಮಾ ಮತ್ತಷ್ಟು ಇಷ್ಟ ಆಗಿದೆ.

Leave a Reply

Your email address will not be published. Required fields are marked *