ರಾಜ್ಯದಲ್ಲಿ ಹೆಚ್ಚಾದ ಕಳ್ಳತನ ಪ್ರಕರಣಗಳು..
ಬೀದರ್: ಬೆಂಗಳೂರು ಸೇರಿ ಜಿಲ್ಲೆ ಜಿಲ್ಲೆಗಳಲ್ಲೂ ಗ್ಯಾಸ್ ಸಿಲಿಂಡರ್ ಅಭಾವ ತಲೆದೂರಿದೆ. ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಾಗದೇ ಹೋಟೆಲ್ ಉದ್ಯಮಕ್ಕೆ ಬಹು ದೊಡ್ಡ ಹೊಡೆತ ಬಿದ್ದಿದೆ. ಹಲವೆಡೆ ಹೋಟೆಲ್ಗಳಿಗೆ ಬೀಗ ಜಡಿಯಲಾಗಿದೆ. ಗ್ಯಾಸ್ ಇಲ್ಲದೆ ಸಂಕಷ್ಟ ಎದುರಾಗಿದ್ದರೆ, ಕಳ್ಳರಿಗೆ ಇದೇ ಸಂಕಷ್ಟ ಹಬ್ಬವಾಗಿದೆ. ಹಾಡಹಗಲೇ ರಾಜಾರೋಷವಾಗಿ ಸಿಲಿಂಡರ್ ಕಳ್ಳತನ ಮಾಡಿತ್ತಿದ್ದಾರೆ. ಬೀದರ್ನ ಶಾಲೆಯಲ್ಲಿದ್ದ 6 ಸಿಲಿಂಡರ್ ಕಳತನ ಮಾಡಿರುವಂತಹ ಘಟನೆ ನಡೆದಿದೆ.
ಅಡುಗೆಕೋಣೆ ಬೀಗ ಮುರಿದು ಸಿಲಿಂಡರ್ ಕಳ್ಳತನ
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿದ್ದ 6 ಸಿಲಿಂಡರ್ಗಳನ್ನ ಕಳ್ಳರು ಹೊತ್ತೊಯ್ದಿದ್ದಾರೆ. ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಪೂರೈಸಿದ್ದ ಸಿಲಿಂಡರ್ಗಳನ್ನ ಅಡುಗೆಕೋಣೆ ಬೀಗ ಮುರಿದು ಕಳ್ಳರು ಹೊತ್ತೊಯ್ದಿದ್ದಾರೆ. ಸದ್ಯ ಈ ಕುರಿತಾಗಿ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹಾಡಹಗಲೇ 2 ಸಿಲಿಂಡರ್ ಹೊತ್ತೊಯ್ದ ಖದೀಮರು
ಗ್ಯಾಸ್ಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಸಿಲಿಂಡರ್ ಮೇಲೆ ಕಣ್ ಹಾಕಿದ್ದಾರೆ. ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಸಿ ಲೇಔಟ್ನಲ್ಲಿರೋ ಸಾಯಿ ಅಪಾರ್ಟ್ಮೆಂಟ್ನಲ್ಲಿ ಹಾಡಹಗಲೇ ಗ್ಯಾಸ್ ಸಿಲಿಂಡರ್ ಕಳ್ಳತನ ಇತ್ತೀಚಿಗೆ ನಡೆದಿದೆ.
ಯುಗಾದಿ ಹಬ್ಬದ ದಿನವೇ ಹೆಲ್ಮೆಟ್ ಧರಿಸಿ ಸ್ಕೂಟರ್ನಲ್ಲಿ ಬಂದಿದ್ದ ಇಬ್ಬರು ಖದೀಮರು, ಅಪಾರ್ಟ್ಮೆಂಟ್ ಬೇಸ್ಮೆಂಟ್ಗೆ ನುಗ್ಗಿದ್ದಾರೆ. ಅಲ್ಲಿದ್ದ ಎರಡು ಸಿಲಿಂಡರ್ಗಳನ್ನ ಸ್ಕೂಟರ್ನಲ್ಲಿಟ್ಟುಕೊಂಡು ಎಸ್ಕೇಪ್ ಆಗಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಬೇಗೂರು ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
For More Updates Join our WhatsApp Group :




