LPG ಸಿಲಿಂಡರ್ ಸಂಕಷ್ಟ: ವಿತರಣೆ ವೇಳೆ ಪೊಲೀಸ್ ಭದ್ರತೆ

LPG ಸಿಲಿಂಡರ್ ಸಂಕಷ್ಟ: ವಿತರಣೆ ವೇಳೆ ಪೊಲೀಸ್ ಭದ್ರತೆ

ಸಿಲಿಂಡರ್ ಪಡೆಯಲು ಏಜೆನ್ಸಿಗಳ ಬಳಿ ಜನರ ಮುಗಿಬೀಳು

ಬೆಂಗಳೂರು : ಎಲ್​​ಪಿಜಿ ಸಿಲಿಂಡರ್ಗಳ ಬಿಕ್ಕಟ್ಟುಬೆಂಗಳೂರಿನಲ್ಲಿ ತೀವ್ರಗೊಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಆತಂಕ ಇದೀಗ ಗೃಹಬಳಕೆಯ ಸಿಲಿಂಡರ್‌ಗಳ ಬಳಕೆದಾರರಿಗೂ ಹಬ್ಬಿದೆ. ಸಿಲಿಂಡರ್‌ಗಳು ಸಿಗುವುದಿಲ್ಲ ಎಂಬ ಭಯದಲ್ಲಿ ಜನಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಗೃಹಬಳಕೆ ಗ್ರಾಹಕರು, ಏಜೆನ್ಸಿಗಳ ಬಳಿ ಮುಗಿಬೀಳುತ್ತಿದ್ದಾರೆ.

ಶಿವಾಜಿನಗರ ಬಸ್ ನಿಲ್ದಾಣದ ಸಮೀಪ ದೊಡ್ಡ ಸಂಖ್ಯೆಯ ಗ್ರಾಹಕರು ಸಿಲಿಂಡರ್‌ಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತ ದೃಶ್ಯಗಳು ಕಂಡುಬಂದಿವೆ. ಸಾಮಾನ್ಯವಾಗಿ ಏಜೆನ್ಸಿಗಳು ಮನೆಗಳಿಗೆ ಸಿಲಿಂಡರ್‌ಗಳನ್ನು ಪೂರೈಸುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮನೆ ವಿತರಣೆ ವಿಳಂಬವಾಗುತ್ತಿರುವುದರಿಂದ ಗ್ರಾಹಕರು ತಾವೇ ಖಾಲಿ ಸಿಲಿಂಡರ್‌ಗಳನ್ನು ತಂದು ಭರ್ತಿ ಮಾಡಿದ ಸಿಲಿಂಡರ್‌ಗಳನ್ನು ಕೊಂಡೊಯ್ಯಲು ಮುಂದಾಗಿದ್ದಾರೆ. ನೂಕು ನುಗ್ಗಲು ಉಂಟಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್​​ ಸಿಬ್ಬಂದಿಯೂ ಹಾಜರಿದ್ದಿದ್ದು ಗಮನ ಸೆಳೆದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *