ಅಗ್ಗದ ಮದ್ಯದ ಬಾಟಲ್ ಬೆಲೆ ಏರಿಕೆ ಸಾಧ್ಯತೆ.!

ಅಗ್ಗದ ಮದ್ಯದ ಬಾಟಲ್ ಬೆಲೆ ಏರಿಕೆ ಸಾಧ್ಯತೆ.!

10–20 ರೂ. ಹೆಚ್ಚಳಕ್ಕೆ ಹೊಸ ತೆರಿಗೆ ವ್ಯವಸ್ಥೆ ಕಾರಣ.

ಬೆಂಗಳೂರು: ರಾಜ್ಯದ ಮದ್ಯಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು  ಆಧರಿಸಿ ತೆರಿಗೆ ವಿಧಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದರಿಂದಾಗಿ ಅಗ್ಗದ ದರದ ಮದ್ಯದ ಬಾಟಲಿಗಳ ಬೆಲೆ ಸರಾಸರಿ 10 ರಿಂದ 20 ರೂಪಾಯಿಗಳಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಮದ್ಯದಲ್ಲಿರುವ ಆಲ್ಕೋಹಾಲ್ ಅಂಶದ ಆಧಾರದ ಮೇಲೆ ತೆರಿಗೆ ನಿಗದಿಪಡಿಸುವ ‘ಐಬಿ’ (AiB) ವ್ಯವಸ್ಥೆ ಮುಂದಿನ ವಾರದಿಂದ ಜಾರಿಗೆ ಬರುವ ಸಾಧ್ಯತೆಯಿದೆ.

ಸರ್ಕಾರವು ಆರು ದಶಕಗಳ ಹಳೆಯ ಮದ್ಯ ತೆರಿಗೆ ನೀತಿಯಲ್ಲಿ ತಿದ್ದುಪಡಿ ಮಾಡಲು ಶನಿವಾರ ಕರಡು ಅಧಿಸೂಚನೆ ಹೊರಡಿಸಿದ್ದು, ಇದು ಜಾರಿಯಾದಲ್ಲಿ ಆಲ್ಕೋಹಾಲ್-ಇನ್-ಬೇವರೇಜ್ (AIB) ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ. ಪಾಶ್ಚಾತ್ಯ ದೇಶಗಳಲ್ಲಿ ಈ ವ್ಯವಸ್ಥೆ ಇದ್ದರೂ, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮದ್ಯದ ಪ್ರಮಾಣದ ಬದಲಿಗೆ ಅದರಲ್ಲಿನ ನಿಜವಾದ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ತೆರಿಗೆ ವಿಧಿಸುವ ಕ್ರಮಕ್ಕೆ ರಾಜ್ಯ ಮುಂದಾಗಿದೆ.

ಯಾವ ಮದ್ಯಕ್ಕೆ ಅನ್ವಯ? ಈ ಹೊಸ ವ್ಯವಸ್ಥೆಯು ಮುಖ್ಯವಾಗಿ ಕಡಿಮೆ ದರದ (Cheap Liquor) ಮದ್ಯದ ಬ್ರ್ಯಾಂಡ್ಗಳಾದ ಒರಿಜಿನಲ್ ಚಾಯ್ಸ್, ಹಯ್ವರ್ಡ್ಸ್, ರಾಜಾ ವಿಸ್ಕಿ ಸೇರಿದಂತೆ ಮೊದಲ 4 ಸ್ಲ್ಯಾಬ್ಗಳ ಅಡಿಯಲ್ಲಿ ಬರುವ ಮದ್ಯಕ್ಕೆ ಅನ್ವಯಿಸಲಿದೆ. ಪ್ರಸ್ತುತ ಇರುವ 16 ಮದ್ಯದ ಸ್ಲ್ಯಾಬ್ಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ 8 ಸ್ಲ್ಯಾಬ್ಗಳಿಗೆ ಇಳಿಸಲು ಸರ್ಕಾರ ನಿರ್ಧರಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *