ವಿಜ್ಞಾನ ವಿಭಾಗದಲ್ಲಿ ಶತಪ್ರತಿಶತ ಸಾಧನೆ – ವಿದ್ಯಾರ್ಥಿಗಳ ಕೀರ್ತಿ
ತುಮಕೂರು: ತುಮಕೂರು ನಗರದ ಪ್ರತಿಷ್ಠಿತ ಆಕಾಶ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2025-26ನೇ ಸಾಲಿನ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇಕಡಾ 100% ರಷ್ಟು ಫಲಿತಂಶ ಪಡೆದು ಕಾಲೇಜಿಗೆ ಕೀರ್ತಿತಂದಿರುತ್ತಾರೆ. ಈ ಸಂದರ್ಭದಲ್ಲಿ ಆಕಾಶ್ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ವಿನಯ್ ಎಲ್. ಎ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಕು ॥ ಚೇತನ ಕೆ ಎಂ 582 (97%) ಅಂಕಗಳನ್ನು ಪಡೆದು ಕಾಲೇಜಿನ ಟಾಪ್ಟರ್ ಆಗಿ ಹೊರಹೊಮ್ಮಿದರೆ. ಅದೇರೀತಿ ಮೈಲಾರಯ್ಯ ಸಿ. ಈ 578 (96%) ಮತ್ತು ಚಿದಾನಂದ ಎಸ್ 578 (96%) ಅಂಕಗಳನ್ನು ಪಡೆದು ಕಾಲೇಜಿಗೆ ಎರಡನೇ ಸ್ಥಾನ ಪಡೆದಿದ್ದಾರೆ ಹಾಗೂ ನಿಖಿಲ್ ಎಸ್ 575 (96%), ಮೇಘ ಡಿ ಎಂ 572 (95%), ಮೋನಿಕಾ ಸಿ ಎಂ 563 (94%), ಲಕ್ಷ್ಮಿ ಎಚ್ ಕೆ 543 (91%), ಕಾರ್ತಿಕ್ ವೈ 537 (90%), ಧ್ರುವೇಂದ್ರ ಎಂ ಆರ್ 527 (88%), ದರ್ಶನ್ ಎಸ್ 513 (86%), ಅಜಯ್ ಕುಮಾರ್ 513 (86%), ಸುಹಾನಾ ಬಾನು 513 (86%) ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಭೋದಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
For More Updates Join our WhatsApp Group :




