101.4 ಕೋಟಿ ವಂಚನೆ ಪ್ರಕರಣ : ಅಲ್ಲು ಅರವಿಂದ್ ಗೆ 3 ಗಂಟೆ ಇಡಿ ಡ್ರಿಲ್‌

101.4 crore fraud case: Allu Aravind given 3-hour ED drill

101.4 crore fraud case: Allu Aravind given 3-hour ED drill

ನಟ ಅಲ್ಲು ಅರ್ಜುನ್ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಡ್ರಿಲ್ ಮಾಡಿದೆ. ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಬ್ಯಾಂಕ್‌ನಿಂದ 101.4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ 3 ಗಂಟೆಗಳ ವಿಚಾರಣೆ ನಡೆಸಿದ್ದಾರೆ.

ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದಾಗ ಪ್ರಮುಖ ಹಣಕಾಸಿನ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದರು. ಇದೀಗ ಅದರ ಮುಂದುವರಿದ ಭಾಗದ ವಿಚಾರಣೆಯಲ್ಲಿ ಅಲ್ಲು ಅರವಿಂದ್ ಹಾಜರಾಗಿದ್ದರು. ಮುಂದಿನವಾರ ಮತ್ತೆ ವಿಚಾರಣೆಗೆ ಬರುವಂತೆ ಇಡಿ ಸೂಚಿಸಿದೆ.

ವಿಚಾರಣೆ ಬಳಿಕ ಮಾತಾಡಿದ ಅಲ್ಲು ಅರವಿಂದ್, 2017ರಲ್ಲಿ ಒಂದು ಮೈನರ್ ಷೇರುದಾರನಾಗಿದ್ದ ಒಂದು ಆಸ್ತಿ ಖರೀದಿಸಿದ್ದೆ. ಆಸ್ತಿ ವಿಚಾರವಾಗಿ ತನಿಖೆ ಇದೆ ಎಂದು ತಿಳಿದಿರಲಿಲ್ಲ. ಬ್ಯಾಂಕ್ ಸಾಲವನ್ನು ಪಾವತಿಸಲಿಲ್ಲ. ಅಕೌಂಟ್ಸ್ ಬುಕ್‌ನಲ್ಲಿ ನನ್ನ ಹೆಸರು ಇರುವುದರಿಂದ ಇಡಿ ವಿಚಾರಣೆಗೆ ಕರೆದಿತ್ತು. ಜವಾಬ್ದಾರಿಯಿರುವ ನಾಗರಿಕರಿಗೆ ಹಾಜರಾಗಿ ವಿವರಣೆಯನ್ನು ನೀಡಿದ್ದೇನೆ ಅಂದಿದ್ದಾರೆ.

ಇನ್ನೂ ಓಪನ್ ಕ್ಯಾಶ್ ಕ್ರೆಡಿಟ್ ಸೌಲಭ್ಯವನ್ನು ದುರ್ಬಳಕೆ ಮಾಡಿ, 101 ಕೋಟಿ ರೂ.ವರೆಗೆ ತಮ್ಮ ವೈಯಕ್ತಿಕ ಖಾತೆಗಳಿಗೆ ಬದಲಾಸಿಕೊಂಡಿದ್ದಾರೆ ಎಂಬ ಆರೋಪ ಇದೆ. 2018-19ರಲ್ಲಿ ಈ ಬ್ಯಾಂಕ್ ವಂಚನೆ ನಡೆದಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿತ್ತು.

Leave a Reply

Your email address will not be published. Required fields are marked *