ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳು: ಬಜೆಟ್‌ನಲ್ಲಿ ಭದ್ರತೆಗೆ ಹೆಚ್ಚಿನ ಒತ್ತು.

ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳು: ಬಜೆಟ್‌ನಲ್ಲಿ ಭದ್ರತೆಗೆ ಹೆಚ್ಚಿನ ಒತ್ತು.

8,000 ಪೊಲೀಸ್ ಹುದ್ದೆಗಳ ನೇಮಕಾತಿಗೂ ಗ್ರೀನ್ ಸಿಗ್ನಲ್.

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಅವರು ಇಂದು ದಾಖಲೆಯ 17ನೇ ಬಜೆಟ್​​​ ಅನ್ನು ಮಂಡಿಸಿದ್ದಾರೆ. ಹಲವು ಕ್ಷೇತ್ರಗಳಿಗೆ ಭರಪೂರ ಅನುದಾನವನ್ನು ನೀಡಿದ್ದು, ಇದೀಗ ಪೊಲೀಸ್​​​​ ಇಲಾಖೆಗೂ ಹೆಚ್ಚಿನ ಅನುದಾನು ನೀಡಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ನಾಗರಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರವು 12 ಹೊಸ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸ್ ಠಾಣೆಗಳು ಸೇರಿವೆ.

ಹೊಸ ಠಾಣೆಗಳಿಗೆ ಸುಸಜ್ಜಿತ ಕಟ್ಟಡ ಮತ್ತು ಆಧುನಿಕ ಉಪಕರಣಗಳನ್ನು ಒದಗಿಸಲು ಅನುದಾನ ಮೀಸಲಿಡಲಾಗಿದೆ. 12 ಪೊಲೀಸ್​​​ ಠಾಣೆಗಳಿಗೆ ಅಸ್ತು ಎಂದು ಹೇಳಿದ್ದಾರೆ. ಹೊಸ ಠಾಣೆಗಳ ಕಾರ್ಯಾಚರಣೆಗಾಗಿ ಅಗತ್ಯವಿರುವ ಪೊಲೀಸ್ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು. ದೊಡ್ಡಬಳ್ಳಾಪುರ, ಹಿರಿಯೂರು ಮತ್ತು ಗುಂಡ್ಲುಪೇಟೆಯಂತಹ ಬೆಳೆಯುತ್ತಿರುವ ನಗರಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರಿ ಠಾಣೆಗಳಿಗೆ ಒತ್ತು ನೀಡಲಾಗಿದೆ.

ಜಿಲ್ಲೆಪೊಲೀಸ್ ಠಾಣೆಯ ಹೆಸರುಮಾದರಿ
ದಕ್ಷಿಣ ಕನ್ನಡಮಾಣಿ ಪೊಲೀಸ್ ಠಾಣೆಕಾನೂನು & ಸುವ್ಯವಸ್ಥೆ
ದಕ್ಷಿಣ ಕನ್ನಡಸಜಿಪನಡು ಪೊಲೀಸ್ ಠಾಣೆಕಾನೂನು & ಸುವ್ಯವಸ್ಥೆ
ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರ ಸಂಚಾರಿ ಠಾಣೆಸಂಚಾರ (Traffic)
ಬೆಳಗಾವಿಯರಗಟ್ಟಿ ಪೊಲೀಸ್ ಠಾಣೆಕಾನೂನು & ಸುವ್ಯವಸ್ಥೆ
ಯಾದಗಿರಿಕಕ್ಕೇರಾ ಪೊಲೀಸ್ ಠಾಣೆಕಾನೂನು & ಸುವ್ಯವಸ್ಥೆ
ಚಿತ್ರದುರ್ಗಹಿರಿಯೂರು ಸಂಚಾರ ಪೊಲೀಸ್ ಠಾಣೆಸಂಚಾರ (Traffic)
ದಾವಣಗೆರೆಆನಗೋಡು ಪೊಲೀಸ್ ಠಾಣೆಕಾನೂನು & ಸುವ್ಯವಸ್ಥೆ
ಹಾವೇರಿತಿಳುವಳ್ಳಿ ಪೊಲೀಸ್ ಠಾಣೆಕಾನೂನು & ಸುವ್ಯವಸ್ಥೆ
ಮೈಸೂರುಉದಯಗಿರಿ ದಕ್ಷಿಣ ಪೊಲೀಸ್ ಠಾಣೆಕಾನೂನು & ಸುವ್ಯವಸ್ಥೆ
ವಿಜಯಪುರಮುದ್ದೇಬಿಹಾಳ ಗ್ರಾಮಾಂತರ ಠಾಣೆಕಾನೂನು & ಸುವ್ಯವಸ್ಥೆ
ಕೋಲಾರನರಸಾಪುರ ಕೈಗಾರಿಕಾ ವಲಯ ಠಾಣೆಕೈಗಾರಿಕಾ ಸುರಕ್ಷತೆ
ಚಾಮರಾಜನಗರಗುಂಡ್ಲುಪೇಟೆ ಸಂಚಾರ ಠಾಣೆಸಂಚಾರ (Traffic)

ಇನ್ನು ಇದರ ಜತೆಗೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಒಟ್ಟು 8,000 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಈ ವರ್ಷ ಭರ್ತಿ ಮಾಡಲಾಗುವುದು. ನೇಮಕಾತಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ‘ಖಾಯಂ ಪೊಲೀಸ್ ಮತ್ತು ಪೊಲೀಸ್ ಪೂರಕ ಸೇವೆಗಳ ನೇಮಕಾತಿ ಮಂಡಳಿ’ಯನ್ನು ಸ್ಥಾಪಿಸಲಾಗುವುದು. ಬೆಳಗಾವಿ ಸುವರ್ಣ ಸೌಧದ ಅಧಿವೇಶನ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ 1,000 ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ 20 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಖಾಯಂ ಬ್ಯಾರಕ್‌ಗಳ ನಿರ್ಮಾಣ ಕೂಡ ಮಾಡಲಾಗುವುದು.

ಅಗ್ನಿಶಾಮಕ ದಳದ ಸಿಬ್ಬಂದಿಗಳ ಆಹಾರ ಭತ್ಯೆಯನ್ನು 150 ರೂ.ನಿಂದ 300 ರೂ.ಗೆ ದ್ವಿಗುಣಗೊಳಿಸಲಾಗಿದೆ. ಕಾರಾಗೃಹಗಳಲ್ಲಿ ಮೊಬೈಲ್ ಬಳಕೆ ಮತ್ತು ಮಾದಕ ದ್ರವ್ಯ ತಡೆಗಟ್ಟಲು 20 ಕೋಟಿ ರೂ. ವೆಚ್ಚದಲ್ಲಿ AI ಆಧಾರಿತ ತಪಾಸಣಾ ವ್ಯವಸ್ಥೆ ಮತ್ತು ಬಾಡಿ ವೋರ್ನ್ ಕ್ಯಾಮೆರಾಗಳ ಅಳವಡಿಕೆ. ಸೈಬರ್ ಅಪರಾಧಗಳನ್ನು ತಡೆಗಟ್ಟಲು ಹೊಸ ಸಾಫ್ಟ್‌ವೇರ್ ಮತ್ತು ತರಬೇತಿಗಾಗಿ ವಿಶೇಷ ಅನುದಾನ ಕೂಡ ನೀಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *