20 ಮಕ್ಕಳ ಬ*– ಕಂಪನಿಯ ಮಾಲೀಕ ರಂಗನಾಥನ್ ಬಂಧನ

20 ಮಕ್ಕಳ ಬ*– ಕಂಪನಿಯ ಮಾಲೀಕ ರಂಗನಾಥನ್ ಬಂಧನ

ಮಧ್ಯಪ್ರದೇಶ – ರಾಜ್ಯದ ಛಿಂದ್ವಾರ, ಪಂಧುರ್ನಾ ಮತ್ತು ಬೇತುಲ್ ಜಿಲ್ಲೆಗಳಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ 20 ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಸಿರಪ್ ತಯಾರಿಸುತ್ತಿದ್ದ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಮಾಲೀಕ ಎಸ್. ರಂಗನಾಥನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶ ಮತ್ತು ತಮಿಳುನಾಡು ಪೊಲೀಸರ ಸಂಯುಕ್ತ ಕಾರ್ಯಾಚರಣೆಯಲ್ಲಿ ರಂಗನಾಥನ್ ಅವರನ್ನು ಚೆನ್ನೈನಲ್ಲಿ ಬುಧವಾರ ರಾತ್ರಿ ಬಂಧಿಸಲಾಯಿತು. ಈತನ ವಿರುದ್ಧ ಈಗ ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳ ಸಾವಿಗೆ ಕಾರಣವಾದ ಸಿರಪ್:

ತಜ್ಞರ ಪ್ರಾಥಮಿಕ ವೈದ್ಯಕೀಯ ವರದಿಗಳ ಪ್ರಕಾರ, ಸಿರಪ್ನಲ್ಲಿ ವಿಷಕಾರಿ ರಾಸಾಯನಿಕಗಳು ಇರುವುದು ದೃಢಪಟ್ಟಿದ್ದು, ಅವು ಮಕ್ಕಳ ಮೂತ್ರಪಿಂಡಕ್ಕೆ ತೀವ್ರ ಹಾನಿ ಮಾಡಿವೆ. ಸಿರಪ್ ಸೇವಿಸಿದ ಕೆಲವೇ ಗಂಟೆಗಳಲ್ಲಿ ಮಕ್ಕಳ ಆರೋಗ್ಯ ಹದಗೆಟ್ಟಿದ್ದು, ಮೂತ್ರಪಿಂಡ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ.

ಜಿಲ್ಲೆವಾರು ಸಾವಿನ ವಿವರ:

  • ಛಿಂದ್ವಾರ ಜಿಲ್ಲೆ: 17 ಮರಣ
  • ಪಂಧುರ್ನಾ: 1 ಮಗು
  • ಬೇತುಲ್: 2 ಮಕ್ಕಳು
  • ನಾಗ್ಪುರದ ಆಸ್ಪತ್ರೆಗಳಲ್ಲಿ: 5 ಮಕ್ಕಳು ಗಂಭೀರ ಸ್ಥಿತಿಯಲ್ಲಿ

ಸತ್ತ ಮಕ್ಕಳಲ್ಲಿ ಡೆಹರಿಯಾದ ತಾಮಿಯಾದ ಧನಿ (1.5 ವರ್ಷ), ಜ್ಯಾನ್ಶು ಯದುವಂಶಿ (2 ವರ್ಷ), ರಿಧೋರಾದ ವೇದಾಂಶ್ ಪವಾರ್ (2.5 ವರ್ಷ) ಸೇರಿದ್ದಾರೆ. ಇವರು ಎಲ್ಲರೂ ಚಿಕಿತ್ಸೆ ಪಡೆಯುತ್ತಲೇ ಸಾವನ್ನಪ್ಪಿದ್ದಾರೆ.

ವೈದ್ಯರ ತೊಂದರೆ:

ಪ್ರೀವಟ್ ವೈದ್ಯರಾದ ಡಾ. ಪ್ರವೀಣ್ ಸೋನಿ ಸೇರಿದಂತೆ ಕೆಲವು ವೈದ್ಯರು ಈ ಸಿರಪ್ ಮಕ್ಕಳಿಗೆ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸರಕಾರ ಈ ಪ್ರಕರಣದಲ್ಲಿ ಹೆಚ್ಚಿನವರನ್ನು ವಿಚಾರಣೆಗೆ ಒಳಪಡಿಸಲಿದೆ.

ಸರ್ಕಾರದ ಸ್ಪಂದನೆ:

ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ರಾಜೇಂದ್ರ ಶುಕ್ಲಾ ಅವರು, ಈ ಘಟನೆಯ ಕುರಿತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಿರಪ್ ತಯಾರಿಕೆಯಲ್ಲಿನ ಲೋಪ, ಮಾರುಕಟ್ಟೆ ನಿಯಂತ್ರಣದ ವ್ಯತ್ಯಯ – ಎಲ್ಲವೂ ಈಗ ತನಿಖಾ ಗುರಿಯಾಗಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *