ಚಿಮಕೋಡ್–ಅಲ್ಲಾಪುರ ಸೇತುವೆ ಮೂರು ತಿಂಗಳಿನಿಂದ ಕೊಚ್ಚಿಹೋಗಿ ಬಿದ್ದೇ ಬಿದ್ದಿದೆ
ಬೀದರ್: ಮೂರು ತಿಂಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಬೀದರ್ ತಾಲೂಕಿನ ಚಿಮಕೋಡ್ ಹಾಗೂ ಅಲ್ಲಾಪುರ ಗ್ರಾಮವನ್ನು ಸಂಪರ್ಕಿಸುವ ಸೇತುವೆಕಿತ್ತುಕೊಂಡು ಹೋಗಿದೆ. ಪರಿಣಾಮ ಸುಮಾರು 20 ಕಿ.ಮೀ ಸುತ್ತಿಕೊಂಡು ರೈತರು ತಮ್ಮ ಹೊಲಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಸದ್ಯ ಕಬ್ಬು ಮತ್ತು ತೊಗರೆ ಕಟಾವಿಗೆ ಬಂದಿದ್ದು, ಹೇಗೆ ಸಾಗಿಸುವುದು ಎಂದು ರೈತರು ಚಿಂತೆಗೀಡಾಗಿದ್ದಾರೆ. ಕೊಚ್ಚಿಹೋಗಿರುವ ಸೇತುವೆ ರಿಪೇರಿಗೆ ಗ್ರಾಮಸ್ಥರು ಮನವಿ ಮಾಡಿದರು ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ತಾಲೂಕಿನ ಚಿಮಕೋಡ್ ಹಾಗೂ ಅಲ್ಲಾಪುರ ಗ್ರಾಮವನ್ನು ಸಂಪರ್ಕಿಸುವ ಈ ಕೊಚ್ಚಿಹೋದ ಸೇತುವೆ ರಿಪೇರಿ ಮಾಡಿ ಎಂದು ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಚಿವ ರಹೀಂ ಖಾನ್ ಹಾಗೂ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಮನವಿ ಮಾಡಿದರೂ ಈವರೆಗೂ ಸೇತುವೆ ರಿಪೇರಿ ಕಾರ್ಯ ಆರಂಭವಾಗಿಲ್ಲ.
ಇಲ್ಲಿ ಸೇತುವೆ ಕಿತ್ತುಕೊಂಡು ಹೋದ ಪರಿಣಾಮ ಜನರು ತಮ್ಮ ತಮ್ಮ ಹೊಲಗಳಿಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಮಕೋಡ್ ಗ್ರಾಮದ ಸುಮಾರು 500 ಹೆಚ್ಚು ಎಕರೆ ಜಮೀನು ಕೊಚ್ಚಿಹೋದ ಸೇತುವೆಯ ಭಾಗದಲ್ಲಿದೆ. ಹೀಗಾಗಿ ತಮ್ಮ ಹೊಲಗಳಿಗೆ ಜನರು ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗಬಿಟ್ಟರೆ, 20 ಕಿ.ಮೀ ಸುತ್ತಿಕೊಂಡು ಬಂದು ಹೊಲಗಳಿಗೆ ರೈತರು ತೆರಳುತ್ತಿದ್ದಾರೆ. ಬೇಗೆ ಸೇತುವೆ ನಿರ್ಮಾಣ ಮಾಡುವಂತೆ ಗ್ರಾಮದ ರೈತ ರಾಜಕುಮಾರ್ ಮನವಿ ಮಾಡಿದ್ದಾರೆ.
For More Updates Join our WhatsApp Group :




