cucumbers ತಿಂದು 26 ಮಂದಿ ಅಸ್ವಸ್ಥ, ಮಾರಾಟ ನಿಷೇಧ..!

cucumbers ತಿಂದು 26 ಮಂದಿ ಅಸ್ವಸ್ಥ, ಮಾರಾಟ ನಿಷೇಧ..!

ಆರೋಗ್ಯ ಸಲಹೆ : ಆರೋಗ್ಯಕ್ಕೆ ಅನುಕೂಲಕರ, ತಂಪು ತರುವುದು ಎಂಬ ಖ್ಯಾತಿಯಲ್ಲಿರುವ ಸೌತೆಕಾಯಿ ಇದೀಗ ಅಮೆರಿಕದಲ್ಲಿ ಅನಾರೋಗ್ಯದ ಮೂಲವಾಗಿದೆ. ಅಮೆರಿಕದ 15 ರಾಜ್ಯಗಳಲ್ಲಿ “ಸಾಲ್ಮೊನೆಲ್ಲಾ” ಎಂಬ ಬ್ಯಾಕ್ಟೀರಿಯಾದ ಸೋಂಕು ಹರಡಿದ್ದು, ಇದಕ್ಕೆ ಸೌತೆಕಾಯಿ ಕಾರಣವಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

ಸಾಲ್ಮೊನೆಲ್ಲಾ ಪತ್ತೆ – ತುರ್ತು ಎಚ್ಚರಿಕೆ ಪ್ರಕಟಣೆ

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (FDA) ನೀಡಿದ ಮಾಹಿತಿ ಪ್ರಕಾರ, ಕಳೆದ ಏಪ್ರಿಲ್ 29 ರಿಂದ ಮೇ 19 ರವರೆಗೆ ವ್ಯಾಪಕವಾಗಿ ಮಾರಾಟವಾದ ಸೌತೆಕಾಯಿಗಳಿಂದ ಈ ಸೋಂಕು ಹರಡಿರುವ ಶಂಕೆಯಿದೆ. ಸದ್ಯ ದೇಶದಾದ್ಯಂತ ಸೌತೆಕಾಯಿ ಮಾರಾಟ ಮತ್ತು ಸೇವನೆಗೆ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ.

ಸಂಕ್ರಮಣದ ಪರಿಸ್ಥಿತಿ

15 ರಾಜ್ಯಗಳಲ್ಲಿ 26 ಪ್ರಕರಣಗಳು ವರದಿಯಾಗಿವೆ. 9 ಮಂದಿ ಆಸ್ಪತ್ರೆ ಸೇರಿದ್ದಾರೆ. ಸೋಂಕಿತರಲ್ಲಿ 11 ಜನರು ಸೌತೆಕಾಯಿ ಸೇವಿಸಿದ್ದನ್ನು ದೃಢಪಡಿಸಿದ್ದಾರೆ

ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕಲುಷಿತ ಆಹಾರ ಅಥವಾ ನೀರಿನಿಂದ, ಪ್ರಾಣಿಗಳ ಸಂಪರ್ಕ ಅಥವಾ ಅವುಗಳ ವಾಸಸ್ಥಳದಿಂದ ಹರಡುತ್ತದೆ. ಸೋಂಕಿನ ಲಕ್ಷಣಗಳಲ್ಲಿ ಜ್ವರ, ತೀವ್ರ ಹೊಟ್ಟೆ ನೋವು, ಅತಿಸಾರ ಸೇರಿವೆ.

ಫ್ಲೋರಿಡಾದ ಬೆಡ್ನರ್ ಗ್ರೋವರ್ಸ್ ತೋಟಗಳಲ್ಲಿ ಬೆಳೆದ ಸೌತೆಕಾಯಿಗಳಿಂದ ಸೋಂಕು ಹರಡಿರುವ ಶಂಕೆಯಿದೆ. ಈ ಸೌತೆಕಾಯಿಗಳನ್ನು ಫ್ರೆಶ್ ಸ್ಟಾರ್ಟ್ ಪ್ರೊಡ್ಯೂಸ್ ಸೇಲ್ಸ್ ಮೂಲಕ ಚಿಲ್ಲರೆ ಅಂಗಡಿಗಳು, ರೆಸ್ಟೋರೆಂಟ್ಗಳು ಮತ್ತು ಮಳಿಗೆಗಳಿಗೆ ಪೂರೈಕೆ ಮಾಡಲಾಗಿದೆ. ಪರಿಸರ ಮಾದರಿ ಮತ್ತು ಸೋಂಕಿತರ ಮಾದರಿಗಳ ಪರಿಶೀಲನೆಯಲ್ಲೂ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು FDA ತಿಳಿಸಿದೆ.

ಭಾರತದಲ್ಲಿ ಆತಂಕವಿಲ್ಲ, ಆದರೆ ಮುನ್ನೆಚ್ಚರಿಕೆ ಅಗತ್ಯ

ಈ ಸಂಬಂಧ ಭಾರತದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಸೌತೆಕಾಯಿ ಸೇವಿಸುವ ಮೊದಲು ಈ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ

•          ಸೌತೆಕಾಯಿಗಳನ್ನು ಬಿಸಿನೀರಿನಲ್ಲಿ ತೊಳೆದು ಸೇವಿಸಿ

•          ಹಾಳಾಗಿರುವ ಭಾಗಗಳನ್ನು ತೆಗೆದುಹಾಕಿ

•          ಕುಡಿಯುವ ನೀರಿನೊಂದಿಗೆ ತೊಳೆಯುವುದು ಉತ್ತಮ

•          ಅನಾರೋಗ್ಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಆರೋಗ್ಯದ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದಿರುವುದು ಅತ್ಯಂತ ಮುಖ್ಯ. ಆಹಾರದ ಸ್ವಚ್ಚತೆಯ ಕುರಿತು ಜಾಗರೂಕತೆ ವಹಿಸಿ, ಸುರಕ್ಷಿತ ಆಹಾರ ಸೇವಿಸಿ.

Leave a Reply

Your email address will not be published. Required fields are marked *