ಶಾಲೆಯ ಮೇಲ್ಛಾವಣಿ ಕುಸಿದು 4 ಮಕ್ಕಳು ಸಾ*, ಹಲವರಿಗೆ ಗಾಯ.

ರಾಜಸ್ಥಾನ​: ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದ ಪರಿಣಾಮ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಹಲವರು ಅವಶೇಷಗಳ ಅಡಿ ಸಿಲುಕಿ ಗಾಯಗೊಂಡ ದುರ್ಘಟನೆ ರಾಜಸ್ವಾನದ ಜಲ್ವಾರ್​​ನ ಪಿಪ್ಲೋಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಮಕ್ಕಳು ಎಂದಿನಂತೆ ಶಾಲೆಗೆ ಹೋಗಿದ್ದು, ಪ್ರಾರ್ಥನೆ ಸಲ್ಲಿಸುವಾಗ ದಿಢೀರ್​ ಮೇಲ್ಚಾವಣಿ ಕುಸಿದಿದೆ. ತಕ್ಷಣಕ್ಕೆ ಶಾಲಾ ಸಿಬ್ಬಂದಿ ಮತ್ತು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳ ರಕ್ಷಣೆಗೆ ಮಂದಾಗಿದ್ದಾರೆ ಎಂದು ಡಂಗಿಪುರ ಪೊಲೀಸ್​ ಠಾಣೆ ಅಧಿಕಾರಿ ವಿಜೇಂದ್ರ ಕುಮಾರ್​ ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾಡಳಿತ, ಪೊಲೀಸ್ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ರಕ್ಷಣಾ ಕಾರ್ಯ ಚುರುಕುಗೊಂಡಿದೆ.

ನಾಲ್ವರು ಮಕ್ಕಳು ಸಾವು: ಘಟನೆಯಲ್ಲಿ ಗಾಯಗೊಂಡ ಮಕ್ಕಳ ರಕ್ಷಣೆ ಮಾಡಿ ತಕ್ಷಣಕ್ಕೆ ಮನೋಹರ್ಥದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ದುರ್ಘಟನೆಯಲ್ಲಿ, ಗಂಭೀರವಾಗಿ ಗಾಯಗೊಂಡ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಅಲ್ಲದೆ, 15 ಮಕ್ಕಳು ಗಾಯಗೊಂಡಿದ್ದು, 8 ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜಲ್ವಾರ್​ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಪ್ರಾಥಮಿಕ ಮಾಹಿತಿ ಪ್ರಕಾರ, ಶುಕ್ರವಾರ ಮಕ್ಕಳು ಎಂದಿನಂತೆ ಮನೋಹರ್ಥ ಬ್ಲಾಕ್​ನಲ್ಲಿರುವ ಪಿಪ್ಲೋಡಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಆಗಮಿಸಿದ್ದಾರೆ. ಶಾಲೆಯಲ್ಲಿದ್ದ ವೇಳೆ ಮೇಲ್ಚಾವಣಿ ಬಿದ್ದಿದೆ. ಶಾಲೆಯಲ್ಲಿ ಒಟ್ಟು 60 ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *