2 ತಿಂಗಳಲ್ಲಿ 40 ಸಾವು : ವನವಾಸಕ್ಕೆ ತೆರಳಿದ ಗ್ರಾಮಸ್ಥರು

2 ತಿಂಗಳಲ್ಲಿ 40 ಸಾವು : ವನವಾಸಕ್ಕೆ ತೆರಳಿದ ಗ್ರಾಮಸ್ಥರು

ತೆಲಂಗಾಣ: ಆ ಗ್ರಾಮದ ಜನರು ಒಬ್ಬರ ಹಿಂದೆ ಒಬ್ಬರಂತೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಸಹಜ ಸಾವುಗಳು ಸಂಭವಿಸುತ್ತಿವೆಯೇ? ಅನಾರೋಗ್ಯದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರಾ? ಅಥವಾ ಕೆಲವು ರೀತಿಯ ಕ್ರಿಮಿ- ಕೀಟಗಳ ಕಡಿತದಿಂದ ಸಾಯುತ್ತಿದ್ದೀರಾ? ಯಾವುದರಿಂದ ಈ ಸಾವು ಎಂಬುದು ತಿಳಿಯದೇ ಗ್ರಾಮಸ್ಥರು ದಿಕ್ಕು ತೋಚದಂತಾಗಿದ್ದಾರೆ.

ಸರಣಿ ಸಾವುಗಳಿಂದ ಕಂಗೆಟ್ಟ ಆ ಊರಿನ ಜನ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಊರು ಬಿಟ್ಟು ಊರ ಹೊರಗೆ ಹೋಗಿ ಇಡೀ ದಿನ ತನ್ನ ಕುಟುಂಬದ ಸದಸ್ಯರೊಂದಿಗೆ ಮರಗಳ ಕೆಳಗೆ ಕಳೆದಿದ್ದಾರೆ.

ಹೌದು, ನಲ್ಗೊಂಡ ಜಿಲ್ಲೆ ಮಿರ್ಯಾಲಗುಡ ಕ್ಷೇತ್ರದ ವೇಮುಲಪಲ್ಲಿ ಮಂಡಲದ ಶೆಟ್ಟಿಪಾಲೆಂ ಗ್ರಾಮದಲ್ಲಿ ಸುಮಾರು 6,000 ಜನರು ವಾಸಿಸುತ್ತಿದ್ದಾರೆ. ಕಳೆದ ದಸರಾದಿಂದ ಇಲ್ಲಿಯವರೆಗೆ ಒಂದು ವರ್ಷದೊಳಗೆ ವಿವಿಧ ಕಾರಣಗಳಿಂದ ಇಲ್ಲಿ ಸುಮಾರು 74 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಕೆಲವರು ಅನಾರೋಗ್ಯದಿಂದ, ಕೆಲವರು ರಸ್ತೆ ಅಪಘಾತದಿಂದ ಮತ್ತು ಕೆಲವರು ವಯಸ್ಸಾದ ಕಾರಣದಿಂದ ಸಾವನ್ನಪ್ಪಿದ್ದಾರೆ.

ಊರಿಗೆ ಊರೇ ಖಾಲಿ ಖಾಲಿ : ವಿದ್ವಾಂಸರು ಹಾಗೂ ಗ್ರಾಮದ ಹಿರಿಯರು ಗ್ರಾಮ ತೊರೆದು ದಿನವಿಡೀ ಹೊಲಗಳಲ್ಲಿಯೇ ಇರಲು ನಿರ್ಧರಿಸಿದರು. ಗ್ರಾಮದ ಹಿರಿಯರ ತೀರ್ಮಾನಕ್ಕೆ ಮಣಿದು ಗ್ರಾಮದ ಮನೆಗಳಿಗೆ ಬೀಗ ಹಾಕಿದ ಜನ ಗ್ರಾಮದ ಹೊರವಲಯಕ್ಕೆ ವನವಾಸಕ್ಕೆ ತೆರಳಿದ್ದರು. ಗ್ರಾಮಸ್ಥರು ಹೊರಬಂದಿದ್ದರಿಂದ ಸೆಟ್ಟಿಪಾಲೆಂ ಗ್ರಾಮ ನಿರ್ಜನವಾಯಿತು, ಬೀಕೊ ಎನ್ನುವ ಪರಿಸ್ಥಿತಿ ಎದುರಿಸಿತು.

ಊಟ, ಆಟ- ಪಾಠ, ನೋವು ಎಲ್ಲವೂ ಗ್ರಾಮದ ಹೊರಗೆ: ಶೆಟ್ಟಿಪಾಲೆಂ ಗ್ರಾಮದಲ್ಲಿ ಕಳೆದ ಎರಡು ತಿಂಗಳಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳುತ್ತಾರೆ. ಗ್ರಾಮದ ಹಿರಿಯರು, ವಿದ್ವಾಂಸರ ಸಲಹೆಯಂತೆ ಎಲ್ಲರೂ ಮುಂಜಾನೆ ಬೇಗ ಎದ್ದು ಒಲೆ ಹಚ್ಚದೇ ತಮ್ಮ ತಮ್ಮ ಹೊಲಗಳಿಗೆ ಹೋಗಬೇಕು ಅಥವಾ ಊರ ಹೊರವಲಯಕ್ಕೆ ತೆರಳಿ ಅಲ್ಲಿಯೇ ಅಡುಗೆ ಮಾಡಿ ಸಂಜೆಯ ವೇಳೆಗೆ ಊರಿಗೆ ಬರಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು

Leave a Reply

Your email address will not be published. Required fields are marked *