ಬಾಲಕಿ ತನ್ನದೇ ಶಾಲಾ ಬಸ್‌ನಲ್ಲಿ ಬಲಿಯಾಗಿದ ಘಟನೆ.
ಬೀದರ್: ತನ್ನದೇ ಶಾಲಾ ಬಸ್ಗೆ 8 ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ. ರುತ್ವಿ ಮೃತ ಬಾಲಕಿ. ಜನವಾಡದಲ್ಲಿರುವ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ರುತ್ವಿ, ಇಂದು (ಡಿಸೆಂಬರ್ 09) ಶಾಲೆ ಮುಗಿಸಿಕೊಂಡು ಇನ್ನೇನು ಬಸ್ ಇಳಿದು ಮನಗೆ ಹೋಗಬೇಕೆನ್ನುವಷ್ಟರಲ್ಲೇ ವಿಧಿ ಬಲಿಪಡೆದುಕೊಂಡಿದೆ. ಹೌದು… ಗಡಿಕುಶನೂರು ಗ್ರಾಮದ ರುತ್ವಿ ಬಸ್ ಇಳಿದು ನಿಂತಿದ್ದನ್ನು ಗಮನಿಸದ ಡ್ರೈವರ್ ಮುಂದಕ್ಕೆ ಚಾಲನೆ ಮಾಡಿದ್ದಾನೆ. ಈ ವೇಳೆ ಬಸ್ನ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ರುತ್ವಿ ಸಾವನ್ನಪ್ಪಿದ್ದಾಳೆ.
ಬಸ್ ಚಾಲಕ ಚಾಲಕ, ಗುರುನಾನಕ್ ಶಾಲೆಯಿಂದ ಮನೆಯ ವರೆಗೂ ಡ್ರಾಪ್ ಮಾಡಿದ್ದ. ಬಾಲಕಿ ಸ್ಕೂಲ್ ಬಸ್ ಇಳಿದು ಪಕ್ಕದಲ್ಲೇ ನಿಂತಿದೆ. ಇದನ್ನು ಗಮನಿಸಿದ ಚಾಲಕ ಹಾಗೇ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ್ದು, ಅಲ್ಲೇ ನಿಂತಿದ್ದ ರುತ್ವಿ ಮೇಲೆ ಹಿಂಬದಿ ಚಕ್ರ ಹರಿದಿದೆ. ಪರಿಣಾಮ ತೀವ್ರಗೊಂಡ ರುತ್ವಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಕೊನೆಯುಸಿರೆಳೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಹಾಗೂ ವಾಪಸ್ ಮನೆಗೆ ಕರೆತರುವಾಗ ಎಚ್ಚರ ವಹಿಸಬೇಕು. ಇನ್ನು ಸ್ಕೂಲ್ ಬಸ್ ಚಾಲಕರು ಸಹ ಓವರ್ ಸ್ಪೀಡ್ ಚಲಾಯಿಸಬಾರದು. ಹಾಗೇ ಮಕ್ಕಳು ಇಳಿಯುವಾಗ ಏರುವಾಗ ಎಚ್ಚರ ವಹಿಸಬೇಕು. ಕೊಂಚ ಯಾಮಾರಿದರೂ ಸಹ ಈ ರೀತಿ ಘಟನೆ ಸಂಭವಿಸುತ್ತವೆ.
For More Updates Join our WhatsApp Group :




