ಬೆಂಗಳೂರು: ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಬ್ಯಾಂಕಿಂಗ್ ವಲಯದಲ್ಲಿನ (RRB) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಇನ್ಸುಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅಧಿಸೂಚನೆ ಹೊರಡಿಸಿದೆ. ಒಟ್ಟು 9,995 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
ಹುದ್ದೆ ವಿವರ: ಒಟ್ಟು 9,995 ಹುದ್ದೆ ನೇಮಕಾತಿಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ 386, ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ 200 ಹುದ್ದೆಗಳಿಗೆ ನೇಮಕಾತಿ.
- ಆಫೀಸ್ ಅಸಿಸ್ಟಂಟ್ 5,585
- ಆಫೀಸರ್ ಸ್ಕೇಲ್ 2 – ಜನರಲ್ ಬ್ಯಾಂಕಿಂಗ್ ಆಫೀಸರ್ 496
- ಆಫೀಸರ್ ಸ್ಕೇಲ್ 2 (ಐಟಿ) – 94
- ಆಫೀಸರ್ ಸ್ಕೇಲ್ -2 (ಸಿಎ) – 60
- ಆಫೀಸರ್ ಸ್ಕೇಲ್ -2 (ಕಾನೂನು) -30
- ಆಫೀಸರ್ ಸ್ಕೇಲ್ – 2(ಟ್ರೆಶರ್ ಮ್ಯಾನೇಜರ್ ) – 11
- ಆಫೀಸರ್ ಸ್ಕೇಲ್ -2 (ಅಗ್ರಿಕಲ್ಚರ್ ಆಫೀಸರ್) -70
- ಆಫೀಸರ್ ಸ್ಕೇಲ್-3 (ಸೀನಿಯರ್ ಮ್ಯಾನೇಜರ್ – 129
- ಆಫೀಸರ್ ಸ್ಕೇಲ್ -1 (ಅಸಿಸ್ಟಂಟ್ ಮ್ಯಾನೇಜರ್) -3,499
ವಿದ್ಯಾರ್ಹತೆ: ಆಫೀಸರ್ ಸ್ಕೇಲ್- 1ನ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ಮತ್ತು ಆಫೀಸರ್ ಸ್ಕೇಲ್ -3ಯ ಸೀನಿಯರ್ ಮ್ಯಾನೇಜರ್, ಆಫೀಸ್ ಅಸಿಸ್ಟೆಂಟ್ನ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿಯನ್ನು ಪೂರ್ಣಗೊಳಿಸಿರಬೇಕು, ಆಫೀಸರ್ ಸ್ಕೇಲ್ 2- ಮ್ಯಾನೇಜರ್ ಹುದ್ದೆಗೆ ಸಿಎ, ಎಲ್ಎಲ್ಬಿ, ಎಂಬಿಎ ಪದವಿಯನ್ನು ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳು ವಿವಿಧ ಸ್ಕೇಲ್ಗೆ ಅನುಗುಣವಾಗಿ ವಯೋಮಿತಿ ಹೊಂದಿದ್ದು, ಕನಿಷ್ಠ 18 ರಿಂದ ಗರಿಷ್ಠ 40 ವರ್ಷವಾಗಿದೆ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ 175 ರೂ, ಇತರ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳಿದ್ದು, ಇದೆರಡರಲ್ಲೂ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನ ಮೂಲಕ ನೇಮಕಾತಿ ಮಾಡಲಾಗುವುದು.
ಈ ಹುದ್ದೆಗೆ ಜೂನ್ 7ರಿಂದ ಅರ್ಜಿ ಸಲ್ಲಿಕೆ ಪರೀಕ್ಷೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಜುಲೈ 27 ಆಗಿದೆ. ಕಾಲ್ ಲೆಟರ್, ಪರೀಕ್ಷೆ ಸಮಯದ ದಿನ ಸೇರಿದಂತೆ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ibps.in ಇಲ್ಲಿಗೆ ಭೇಟಿ ನೀಡಿ.