ಮಂಡ್ಯ: ಇನ್ಮುಂದೆ ನಾನು ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ, 24*7 ಫುಲ್ ಟೈಮ್ ರಾಜಕಾರಣಿ ಆಗಿ ಕೆಲಸ ಮಾಡ್ತೀನಿ ಎಂದು ನಟ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ
2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿದ ಸೋತ ಬಳಿಕ ನಿಖಿಲ್ ಕುಮಾರಸ್ವಾಮಿ ಇನ್ನೂ ರಾಜಕೀಯ ಬಿಟ್ಟು ಸಿನಿಮಾ ಕ್ಷೇತ್ರದ ಕಡೆಯೇ ಒಲವು ತೋರಿಸುತ್ತಾರೆ ಎಂದು ಹೇಳಲಾಗಿತ್ತು. ಈ ಸಂಬಂಧ ಹಲವು ಕಡೆ ಅವರ ತಂದೆ ಹೆಚ್.ಡಿ ಕುಮಾರಸ್ವಾಮಿ ಸಹ ಅದೇ ರೀತಿ ಸ್ಪಂದನೆ ಮಾಡಿದ್ದರು
ಶುಕ್ರವಾರ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ನಾನು ಇನ್ಮುಂದೆ ಸಿನಿಮಾ ಮಾಡೋದನ್ನ ಬಂದ್ ಮಾಡಿದ್ದೇನೆ. ಪಕ್ಷ ಕಟ್ಟುವ ಜವಾಬ್ದಾರಿ ನನ್ನ ಮೇಲೆ ಇದೆ. ಹೀಗಾಗಿ ನಾನು ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡ್ತೀನಿ. ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ. 24*7 ರಾಜಕಾರಣಿ ಆಗಿ ಕೆಲಸ ಮಾಡ್ತೀನಿ ಎಂದು ನಿಖಿಲ್ ಹೇಳಿದ್ದಾರೆ.