ಕರ್ನಾಟಕಕ್ಕೆ ಅನ್ಯಾಯ- ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ದರಾಮಯ್ಯ ಸವಾಲು

ಮುಡಾ ಹಗರಣ, ಸಿದ್ದರಾಮಯ್ಯ ಮೇಲ್ಮನವಿ ಅರ್ಜಿ ವಿಚಾರಣೆ ಮುಂದೂಡಿಕೆ

Siddaramaiah

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿರುವ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಬಿಜೆಪಿಯವರು ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಕರ್ನಾಟಕ ಸರ್ಕಾರ ಶನಿವಾರದಂದು ಮಾರಾಟ ತೆರಿಗೆಯನ್ನು ಹೆಚ್ಚಿಸಲು ನಿರ್ಧರಿಸಿದ ನಂತರ ಪೆಟ್ರೋಲ್ ಬೆಲೆ ಲೀಟರ್‌ಗೆ ಮೂರು ಮತ್ತು ಡೀಸೆಲ್ ಲೀಟರ್‌ಗೆ 3.5 ರೂ.ಗಳಷ್ಟು ಏರಿಕೆಯಾಗಿದೆ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಕೇಂದ್ರದ ಹಣ ಮತ್ತು ಜಿಎಸ್‌ಟಿ ಹಂಚಿಕೆ ಮತ್ತು ರಾಜ್ಯ ಯೋಜನೆಗಳಿಗೆ ಹಣ ಬಿಡುಗಡೆಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಅನ್ಯಾಯವನ್ನು ಎದುರಿಸುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು ಮತ್ತು ಈ ಬಗ್ಗೆ ಪ್ರತಿಭಟನೆ ನಡೆಸುವ ಧೈರ್ಯವನ್ನು ಬಿಜೆಪಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಒಂದು ಹಂತದಲ್ಲಿ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ USD 113 ರಷ್ಟಿತ್ತು ಆದರೆ ಪ್ರಸ್ತುತ ಅದು USD 82.35 ರಷ್ಟಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ರೀಫಿಲ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 410 ರೂಪಾಯಿ ಇತ್ತು. ಎನ್‌ಡಿಎ ಆಡಳಿತದಲ್ಲಿ ಇದು 1,000 ರೂ.ಗೆ ಏರಿತು. ಈಗ ಬೆಲೆ ಇಳಿಸಿದ ನಂತರವೂ ಸಿಲೆಂಡರ್ ದರ 805.50 ರೂ ಇದೆ ಎಂದು ಸಿಎಂ ಹೇಳಿದ್ದಾರೆ

ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಪರಿಚಯಿಸಿದ ನಂತರ, ರಾಜ್ಯ ಸರ್ಕಾರ ಪೆಟ್ರೋಲ್-ಡೀಸೆಲ್, ಮದ್ಯ, ಮುದ್ರಾಂಕ ಶುಲ್ಕ ಮತ್ತು ಮೋಟಾರು ತೆರಿಗೆಗಳನ್ನು ಹೊರತುಪಡಿಸಿ ತೆರಿಗೆಗಳನ್ನು ಹೆಚ್ಚಿಸುವ “ಅಧಿಕಾರವನ್ನು ಕಳೆದುಕೊಂಡಿತು” ಎಂದು ಮುಖ್ಯಮಂತ್ರಿ ಇದೇ ವೇಳೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಿಎಸ್‌ಟಿ, ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಮತ್ತು ಅಬಕಾರಿ ಸುಂಕವನ್ನು ಸಂಗ್ರಹಿಸಿದೆ ಆದರೆ ರಾಜ್ಯ ಸರ್ಕಾರ ಮಾರಾಟ ತೆರಿಗೆಯನ್ನು ವಿಧಿಸಬಹುದು ಮತ್ತು ಮದ್ಯದ ಬೆಲೆಗಳನ್ನು ಮಾತ್ರ ನಿಗದಿಪಡಿಸಬಹುದು.

ಇಂದು ಬಿಜೆಪಿಯವರು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಬಡಪಾಯಿ ಎಂದು ಕರೆಯುತ್ತಿದ್ದಾರೆ. ಅವರಿಗೆ ಬಡತನದ ಅರ್ಥ ತಿಳಿದಿದೆಯೇ? ನಾವು ಯಾರೊಬ್ಬರ ಸಂಬಳವನ್ನು ನಿಲ್ಲಿಸಿದ್ದೇವೆಯೇ? ಬಜೆಟ್ ನಲ್ಲಿ ಘೋಷಣೆ ಮಾಡಿದ ಯಾವುದಾದರೂ ಯೋಜನೆಗೆ ಅನುದಾನ ನಿಲ್ಲಿಸಿದ್ದೇವೆಯೇ?’ ಎಂದು ಸಿಎಂ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *